AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshmi Narayana Yoga: ಲಕ್ಷ್ಮಿ ನಾರಾಯಣ ಯೋಗ; ಮೇ 29 ರಿಂದ ಈ 4 ರಾಶಿಯವರು ಮುಟ್ಟಿದೆಲ್ಲಾ ಚಿನ್ನ!

ಮೇ ತಿಂಗಳ ಅಂತ್ಯದಲ್ಲಿ ಬುಧ ಗ್ರಹದ ಸಂಚಾರದಿಂದ ಸೃಷ್ಟಿಯಾಗುವ 'ಲಕ್ಷ್ಮಿ ನಾರಾಯಣ ಯೋಗ' ನಾಲ್ಕು ರಾಶಿಯವರ ಬಾಳಿನಲ್ಲಿ ಸಂಪತ್ತು, ಅದೃಷ್ಟ ಮತ್ತು ಸಂತೋಷವನ್ನು ತರಲಿದೆ. ಮಿಥುನ, ಸಿಂಹ, ಕನ್ಯಾ ಮತ್ತು ತುಲಾ ರಾಶಿಯವರಿಗೆ ಈ ಯೋಗದಿಂದ ಅನಿರೀಕ್ಷಿತ ಧನಲಾಭ, ಉದ್ಯೋಗದಲ್ಲಿ ಪ್ರಗತಿ, ವೃತ್ತಿಜೀವನದಲ್ಲಿ ಯಶಸ್ಸು ಹಾಗೂ ಸಾಲದಿಂದ ಮುಕ್ತಿ ಸಿಗಲಿದೆ. ಇದು ಆರ್ಥಿಕ ಸ್ಥಿರತೆ ಮತ್ತು ಅಭೂತಪೂರ್ವ ಯಶಸ್ಸಿಗೆ ಕಾರಣವಾಗಲಿದೆ.

Lakshmi Narayana Yoga: ಲಕ್ಷ್ಮಿ ನಾರಾಯಣ ಯೋಗ; ಮೇ 29 ರಿಂದ ಈ 4 ರಾಶಿಯವರು ಮುಟ್ಟಿದೆಲ್ಲಾ ಚಿನ್ನ!
ಲಕ್ಷ್ಮಿ ನಾರಾಯಣ ಯೋಗImage Credit source: Pinterest
ಅಕ್ಷತಾ ವರ್ಕಾಡಿ
|

Updated on: May 23, 2026 | 10:26 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ಈ ಸಂಚಾರದಿಂದಾಗಿ ಜಾತಕದಲ್ಲಿ ಕೆಲವು ಅತ್ಯಂತ ಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇಂತಹ ಪವಿತ್ರ ಮತ್ತು ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ‘ಲಕ್ಷ್ಮಿ ನಾರಾಯಣ ಯೋಗ’ ಮೇ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ.

ಮೇ 29 ರಂದು ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಜೂನ್ 8 ರವರೆಗೆ ಅಲ್ಲಿಯೇ ಸಂಚರಿಸಲಿದೆ. ಈ ಅವಧಿಯಲ್ಲಿ ಸೃಷ್ಟಿಯಾಗುವ ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತು, ಅದೃಷ್ಟ ಮತ್ತು ಸಂತೋಷ ದುಪ್ಪಟ್ಟಾಗಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಮುಖ್ಯವಾಗಿ ಈ ಕೆಳಗಿನ ನಾಲ್ಕು ರಾಶಿಯವರಿಗೆ ಈ ಯೋಗವು ಅನಿರೀಕ್ಷಿತ ಧನಲಾಭ ಹಾಗೂ ಅಭೂತಪೂರ್ವ ಯಶಸ್ಸನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮಿಥುನ ರಾಶಿ (Gemini):

ಲಕ್ಷ್ಮಿ ನಾರಾಯಣ ಯೋಗವು ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ. ದೀರ್ಘಕಾಲದಿಂದ ನಿಂತಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಆದಾಯ ಹರಿದುಬರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಸಾಲದ ಬಾಧೆಗಳು ಕಡಿಮೆಯಾಗಿ, ಆರ್ಥಿಕ ಪರಿಸ್ಥಿತಿ ಸದೃಢವಾಗಲಿದೆ. ಸುದೀರ್ಘ ಪ್ರಯಾಣದ ಯೋಗವೂ ಇವರಿಗಿದೆ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಈ ಯೋಗವು ಅನಿರೀಕ್ಷಿತ ಧನಲಾಭವನ್ನು ತರಲಿದೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆಗಳಿದ್ದು, ಹೊಸ ಜವಾಬ್ದಾರಿಗಳು ಅಥವಾ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವ್ಯಾಪಾರವನ್ನು ವಿಸ್ತರಿಸಲು ಇದು ಅತ್ಯಂತ ಸೂಕ್ತವಾದ ಸಮಯ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಗೌರವ ಹಾಗೂ ಮನ್ನಣೆ ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಆದಾಯದ ಮೂಲಗಳು ಹೆಚ್ಚಾಗಲಿವೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಕನ್ಯಾ ರಾಶಿ (Virgo):

ಕನ್ಯಾ ರಾಶಿಯವರ ವೃತ್ತಿಜೀವನದಲ್ಲಿ (Career) ಈ ಲಕ್ಷ್ಮಿ ನಾರಾಯಣ ಯೋಗವು ಹೊಸ ತಿರುವು ನೀಡಲಿದೆ. ಉದ್ಯೋಗದಲ್ಲಿ ಪ್ರಗತಿ, ಸಂಬಳ ಹೆಚ್ಚಳ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನಿಂತುಹೋಗಿದ್ದ ಕೆಲಸಗಳು ಪುನರಾರಂಭಗೊಂಡು ಯಶಸ್ವಿಯಾಗಲಿವೆ. ವಿದೇಶದಲ್ಲಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವವರಿಗೆ ಈ ಸಮಯ ಪೂರಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿರತೆ ಲಭಿಸಲಿದೆ.

ತುಲಾ ರಾಶಿ (Libra):

ತುಲಾ ರಾಶಿಯವರಿಗೆ ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಕೈಗೂಡಲಿವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಹಳೆಯ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಯೋಗ ನಿಮಗಿದೆ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯ ವಾತಾವರಣ ನೆಲೆಸಲಿದೆ. ವಿದೇಶ ಪ್ರಯಾಣದ ಕನಸು ಹೊಂದಿರುವವರಿಗೆ ಅವಕಾಶಗಳು ಒದಗಿ ಬರಲಿವೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ