
ಜನವರಿ 04ರಿಂದ ಜನವರಿ 10ರ ವರೆಗೆ ಪ್ರೇಮಿಗಳಿಗೆ ಮಿಶ್ರವಾರ. ನಡತೆಗಳು ಪರಸ್ಪರ ವಿರೋಧ, ವೈಮನಸ್ಯಕ್ಕೆ ಕಾರಣವಾಗಲಿದೆ. ಸಾಂತ್ವನದಿಂದ ಮುಂದುವರಿಯಲೂ ಇದು ಸಕಾಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಯತ್ನ ಬೇಕು. ಕೆಲವರಿಗೆ ಕಹಿ ಅನುಭವದಿಂದ ಹೊರಬರಲು ಆಗದು. ಯಾವುನ್ನೂ ಅತಿಯಾಗಿಸಿಕೊಳ್ಳದೇ ಸಮಚಿತ್ತದಿಂದ ಮುಂದುವರಿಯಬೇಕು ಹಾಗೂ ತಾಳ್ಮೆಯನ್ನು ಬಿಡದಿರಬೇಕು. ಶುಕ್ರದಶೆಯವರಿಗೆ ಶುಭಕಾಲ.
ಹೊಸ ವರ್ಷದ ಮೊದಲನೇ ವಾರ ಮೊದಲನೇ ರಾಶಿಯವರಿಗೆ ಪ್ರೇಮದಲ್ಲಿ ಉತ್ಸಾಹ ಹೆಚ್ಚಾದರೂ ಒಳಗಿರುವ ಭಯ ಹಾಗೂ ಶಂಕೆಗಳು ಕಾಡುತ್ತವೆ. ಮಾತಿನ ತಪ್ಪಿನಿಂದ ನೋವು ಸಾಧ್ಯ. ಕ್ಷಣಿಕ ಅನ್ಯಾಸಕ್ತಿ ದೂರ ತರಬಹುದು. ಈ ವಾರ ದುರಭ್ಯಾಸಗಳಿಂದ ಜಾಗರೂಕತೆ ವಹಿಸಿಕೊಳ್ಳಬೇಕು. ಮೋಜಿನ ಪ್ರಯಾಣ ಅಥವಾ ಸ್ನೇಹಿತರ ಜೊತೆಗಿನ ಓಡಾಟ ಮನಸ್ಸಿಗೆ ಹಗುರತೆ ನೀಡಿ ಸಂಬಂಧಕ್ಕೆ ಹೊಸ ಚೈತನ್ಯ ತರುತ್ತದೆ.
ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ಸ್ಥಿರತೆ ಇದ್ದರೂ ಶಂಕೆ ಮನಸ್ಸನ್ನು ಕಾಡಬಹುದು. ನಿರೀಕ್ಷೆ ಪೂರೈಸದಾಗ ನೋವು ಮತ್ತು ದುಃಖ. ಅನ್ಯರಲ್ಲಿ ಆಸಕ್ತಿ ಬಂದರೂ ಸಂಬಂಧ ಮುರಿಯದೇ ಇರಬಹುದು. ದುರಭ್ಯಾಸ ತಪ್ಪಿಸಿದರೆ ಸುಖ. ಈ ವಾರ ಸಂಗಾತಿಯ ಜೊತೆ ಮೋಜಿನ ಪ್ರಯಾಣ ಅಥವಾ ಸಣ್ಣ ಪ್ರವಾಸ ಪ್ರೇಮವನ್ನು ಮತ್ತೆ ಹತ್ತಿರವಾಗಿಸಬಹುದು.
ಜನವರಿಯ ಮೊದಲ ವಾರ ವಿಚಿತ್ರ ಉತ್ಸಾಹ ಮತ್ತು ಗೊಂದಲ ಎರಡೂ ಜೊತೆಗಿರುತ್ತವೆ. ಶಂಕೆ ಮತ್ತು ಭಯದಿಂದ ವಿರಹದ ಭಾವನೆ ನಿಮ್ಮೊಳಗಾಗಲಿದೆ. ಮಾತಿನಲ್ಲಿ ಉಂಟಾದ ಅಸ್ಥಿರತೆಯಿಂದ ನೋವು ಬರಬಹುದು. ನಿಮ್ಮ ಅನ್ಯಾಸಕ್ತಿ ಕ್ಷಣಿಕ ಕಾಲ ಕೆಲಸಮಾಡುವುದು. ಒತ್ತಡದಿಂದ ಮಾಡಿಸುವ ದುರಭ್ಯಾಸದಿಂದ ದೂರವಿದ್ದರೆ ಉತ್ತಮ. ಮೋಜಿನ ಪ್ರಯಾಣ, ಹೊಸ ಅನುಭವಗಳು ಪ್ರೀತಿಯಲ್ಲಿ ನಾವೀನ್ಯತೆ ತರುತ್ತವೆ.
ಚಂದ್ರನ ಆಧಿಪತ್ಯದ ಈ ರಾಶಿಗೆ ಭಾವನಾತ್ಮಕವಾದ ಈ ಪ್ರೇಮದಲ್ಲಿ ಭಯ ಹೆಚ್ಚಾಗುತ್ತದೆ. ಶಂಕೆಯಿಂದ ಮನಸ್ಸು ನೋವಿನಲ್ಲಿ ಮುಳುಗಬಹುದು. ವಿರಹ ಹಾಗೂ ದುಃಖದ ಕ್ಷಣಗಳು ಸಾಧ್ಯ. ಅನ್ಯಾಸಕ್ತಿ ಸಂಬಂಧಕ್ಕೆ ಹಾನಿ. ದುರಭ್ಯಾಸ ತ್ಯಜಿಸುವೆನೆಂದರೂ ಸುಲಭಕ್ಕೆ ಸಾಧ್ಯವಾಗದು. ಸಂಗಾತಿಯೊಂದಿಗೆ ಪಯಣ ಹಳೆಯ ಸಂತೋಷ ಮರಳಿ ತರುತ್ತದೆ.
ಈ ವಾರ ನಿಮಗೆ ಪ್ರೇಮದಲ್ಲಿ ಉತ್ಸಾಹ ಇದ್ದರೂ ಸ್ವಾಭಿಮಾನದಿಂದ ಯಾವುದನ್ನೂ ತೋರಿಸಿಕೊಳ್ಳಲಾರಿರಿ. ಮಾತಿನ ಘರ್ಷಣೆ ನೋವು ತರಬಹುದು. ಕ್ಷಣಿಕ ವಿರಹದಿಂದ ದುಃಖ ಉಮ್ಮಳಿಸುವುದು. ಈ ವಾರ ನೀವು ಪ್ರಯತ್ನದಿಂದ ಅನ್ಯಾಸಕ್ತಿಯನ್ನು ತಪ್ಪಿಸಿ. ದುರಭ್ಯಾಸದಿಂದ ದೂರವಿರಿ. ದಿನದ ವಾತಾವರಣಕ್ಕಿಂತ ಹೊರಗಿನ ಸುತ್ತಾಟ ಪ್ರೀತಿಗೆ ತಾಜಾತನ ಬರಲು ಅವಕಾಶ ಕೊಡಲಿದೆ.
ಬುಧನ ಆಧಿಪತ್ಯದ ಈ ರಾಶಿಗೆ ಪ್ರೀತಿಯಲ್ಲಿ ಹೆಚ್ಚು ಯೋಚನೆ ಉಂಟಾಗಲಿದೆ. ಹಳೆಯ ಪ್ರೆಮಿಯ ಆಗಮನದ ಶಂಕೆ ಮತ್ತು ಭಯದಿಂದ ಮನಸ್ಸಿಗೆ ನೋವು. ವಿರಹದ ಅನುಭವವನ್ನು ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲ. ಅನ್ಯಾಸಕ್ತಿಯು ಸಂಬಂಧವನ್ನು ತಣ್ಣಗಾಗಿಸಬಹುದು. ಶೊಕಿಗಾಗಿ ಬಂದ ದುರಭ್ಯಾಸ ಬಿಡುವುದು ಒಳಿತು. ಒಟ್ಟಿಗೆ ಸಮಯ ಕಳೆಯುವುದು ಪ್ರೇಮವನ್ನು ಮರುಜೀವಂತಗೊಳಿಸುತ್ತದೆ.
ಏಳನೇ ರಾಶಿಯವರಿಗೆ ಪ್ರೀತಿಯಲ್ಲಿ ಉತ್ಸಾಹವೂ ಇದ್ದು ಅತಿಯಾದ ಆಕರ್ಷಣೆಯೂ ಬರಲಿದೆ. ಆದರೆ ಆಗಾಗ ಬರುವ ಶಂಕೆಯಿಂದ ಸಣ್ಣ ದುಃಖಕ್ಕೆ ಕಾರಣವೂ ಆಗುವುದು. ಮಾತುಕತೆ ಕೊರತೆಯಿಂದ ವಿರಹದ ಅನುಭವ. ಹಠವನ್ನು ಹಿಡಿದರೂ ದುರಭ್ಯಾಸವನ್ನು ತಪ್ಪಿಸಲಾಗದು. ಮೋಜಿನ ಪ್ರಯಾಣ ಮತ್ತು ಭೇಟಿಗಳು ಸಂಬಂಧಕ್ಕೆ ಸಮತೋಲನ ತರುತ್ತವೆ.
ಈ ವಾರ ಇದ್ದಕ್ಕಿದ್ದಂತೆ ಬರುವ ತೀವ್ರವಾದ ಪ್ರೇಮದ ಜೊತೆಗೆ ಭಯ ಮತ್ತು ಶಂಕೆ ಜೊತೆಗೇ ಬರಲಿವೆ. ಅಸೂಯೆಯಿಂದ ನೋವು ಮತ್ತು ವಿರಹ. ದುಃಖದ ಕ್ಷಣಗಳನ್ನೂ ನೀವು ನಿರೀಕ್ಷಿಸಬಹುದು. ಅನ್ಯಾಸಕ್ತಿ ಹಾಗೂ ದುರಭ್ಯಾಸ ಸಂಬಂಧಕ್ಕೆ ಅಪಾಯ. ಆದರೆ ಗುಪ್ತ ಭೇಟಿಗಳು ಭಾವನೆಗಳನ್ನು ಮೃದುವಾಗಿಸುತ್ತವೆ.
ಈ ರಾಶಿಯವರಿಗೆ ಮೊದಲ ವಾರ ಪ್ರೇಮದಲ್ಲಿ ಉತ್ಸಾಹ ಇದ್ದರೂ ಬದ್ಧತೆಯಯನ್ನು ಉಳಿಸಿಕೊಳ್ಳುವ ಭಯ. ಅವಕಾಶಗಳು ಶಂಕೆಯಿಂದ ದೂರವಾಗಲಿದೆ. ಸಂಗಾತಿಯ ನಿರ್ಲಕ್ಷ್ಯ ನಿಮಗೆ ನೋವು ತರಿಸಬಹುದು. ಅನ್ಯರ ಮೇಲಿನ ಆಸಕ್ತಿ ತಾತ್ಕಾಲಿಕ. ಸಾಹಸಮಯ ಓಡಾಟ ಪ್ರೀತಿಗೆ ಹೊಸ ಚೈತನ್ಯ ನೀಡುತ್ತದೆ.
ಶನಿಯ ಆಧಿಪತ್ಯದ ಈ ರಾಶಿಯವರಿಗೆ ಭಾವನೆಗಳನ್ನು ಒಳಗಿಟ್ಟುಕೊಳ್ಳುವ ಸ್ವಭಾವದಿಂದ ವಿರಹ ಮತ್ತು ದುಃಖ ಹೆಚ್ಚಾಗಲಿದೆ. ಶಂಕೆ ಮನಸ್ಸಿಗೆ ಭಯ ತರುತ್ತದೆ. ಅನ್ಯಾಸಕ್ತಿ ಸಂಬಂಧ ತಣ್ಣಗಾಗಿಸಬಹುದು. ದುರಭ್ಯಾಸದಿಂದ ಸಂಗಾತಿಯು ನಿಮ್ಮನ್ನು ದೂರ ಮಾಡುವರು. ವಿರಾಮದ ಸುಖವನ್ನು ಎಲ್ಲರೊಂದಿಗೆ ಅನುಭವಿಸುವಿರಿ.
ಮೊದಲ ವಾರದಲ್ಲಿ ಈ ರಾಶಿಯವರಿಗೆ ಅನಿರೀಕ್ಷಿತ ಉತ್ಸಾಹದ ಜೊತೆಗೆ ಅಸ್ಥಿರತೆ. ಶಂಕೆದಿಂದ ಮನಸ್ಸಿಗೆ ಅತಿಯಾದ ಘಾಸಿ. ವಿರಹದ ಅನುಭವವನ್ನು ತಡೆದುಕೊಳ್ಳುವಿರಿ. ಅನ್ಯಾಸಕ್ತಿ ಹೆಚ್ಚಾದರೂ ದೀರ್ಘಕಾಲ ಉಳಿಯದು. ಸ್ನೇಹದ ಜೊತೆಗೆ ಪ್ರೀತಿಯೂ ಅರಳಲು ಆರಂಭಿಸುವುದು.
ಕೊನೆಯ ರಾಶಿಯವರಿಗೆ ಮೊದಲ ವಾರದಲ್ಲಿ ಸಮಾರಂಭದಲ್ಲಿ ಉತ್ಸಾಹದ ಜೊತೆ ಭಯವೂ ಕಾಡಬಹುದು. ಪ್ರೇಮದಲ್ಲಿ ಇರುವ ಅತಿಭಾವನೆ ನೋವು ಹಾಗೂ ದುಃಖ ತರಬಹುದು. ವಿರಹದ ಕ್ಷಣಗಳನ್ನು ಸಹಿಸಲು ಸಾಧ್ಯವಾಗದು. ಅನ್ಯಾಸಕ್ತಿಯಿಂದಾಗಿ ಸಂಬಂಧಕ್ಕೆ ಪರೀಕ್ಷೆ ವಾರ. ದುರಭ್ಯಾಸಸವನ್ನು ತೋರಿಸಿಕೊಳ್ಳಲಾರಿರಿ. ಆತ್ಮೀಯ ಕ್ಷಣಗಳು ಪ್ರೀತಿಗೆ ನೆಮ್ಮದಿ ನೀಡುತ್ತವೆ.
– ಲೋಹಿತ ಹೆಬ್ಬಾರ್ – 8762924271 (what’s app only)
Published On - 11:41 am, Fri, 2 January 26