ದೀಪಾವಳಿ ವೇಳೆ ಹಿಂದೂಗಳ ‘ಹಲಾಲ್ ಜಿಹಾದ್’ ಯಶಸ್ಸು: ಆದರೆ ಮುಂದೆ ಇನ್ನೂ ಯಾವೆಲ್ಲ ಬಾಯ್ಕಾಟ್ ಗಳು ಆರಂಭವಾಗುತ್ತೋ?

| Updated By: ಸಾಧು ಶ್ರೀನಾಥ್​

Updated on: Oct 28, 2022 | 7:29 PM

ಈ ಬಾರಿಯ ದೀಪಾವಳಿ ಕಾರ್ತಿಕ ಮಾಸದಲ್ಲಿ ಇದ್ದಿದ್ದರಿಂದ ಮಾಂಸ ಖರೀದಿ ಮಾಡಿದ ಕೆಲ ಹಿಂದೂಗಳು ಕೂಡ ಜಟ್ಕಾ ಕಟ್ ಬೇಕು, ಹಲಾಲ್ ಮಾಂಸ ಬೇಡ ಎಂದು ಹಿಂದೂ ಸಂಘಟನೆಗಳ ಅಭಿಯಾನಕ್ಕೆ ಸಾಥ್ ನೀಡಿದ್ರು. ಆದರೆ ಇನ್ನು ಮುಂದೆ ಯಾವೆಲ್ಲ ಬಾಯ್ಕಾಟ್ ಅಭಿಯಾನಗಳು ಆರಂಭವಾಗುತ್ತೋ ಎಂದು ಕಾದು ನೋಡಬೇಕಿದೆ.

ದೀಪಾವಳಿ ವೇಳೆ ಹಿಂದೂಗಳ ‘ಹಲಾಲ್ ಜಿಹಾದ್’ ಯಶಸ್ಸು: ಆದರೆ ಮುಂದೆ ಇನ್ನೂ ಯಾವೆಲ್ಲ ಬಾಯ್ಕಾಟ್ ಗಳು ಆರಂಭವಾಗುತ್ತೋ?
ದೀಪಾವಳಿ ವೇಳೆ ಹಿಂದೂಗಳ ‘ಹಲಾಲ್ ಜಿಹಾದ್’ ಯಶಸ್ಸು: ಆದರೆ ಮುಂದೆ ಇನ್ನು ಯಾವೆಲ್ಲ ಬಾಯ್ಕಾಟ್ ಗಳು ಆರಂಭವಾಗುತ್ತೋ!?
Follow us on

ಈ ಬಾರಿಯ ದೀಪಾವಳಿ ಕಾರ್ತಿಕ ಮಾಸದಲ್ಲಿ ಇದ್ದಿದ್ದರಿಂದ ಮಾಂಸ ಖರೀದಿ ಮಾಡಿದ ಕೆಲ ಹಿಂದೂಗಳು ಕೂಡ ಜಟ್ಕಾ ಕಟ್ ಬೇಕು, ಹಲಾಲ್ ಮಾಂಸ ಬೇಡ ಎಂದು ಹಿಂದೂ ಸಂಘಟನೆಗಳ ಅಭಿಯಾನಕ್ಕೆ ಸಾಥ್ ನೀಡಿದ್ರು. ಆದರೆ ಇನ್ನು ಮುಂದೆ ಯಾವೆಲ್ಲ ಬಾಯ್ಕಾಟ್ ಅಭಿಯಾನಗಳು ಆರಂಭವಾಗುತ್ತೋ ಎಂದು ಕಾದು ನೋಡಬೇಕಿದೆ.

ಕಳೆದ ಬಾರಿಯ ಹೊಸ್ತಡ್ಕಿನ ವೇಳೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಹಲಾಲ್ ಬಾಯ್ಕಾಟ್ ಅಭಿಯಾನ ದೊಡ್ಡ‌ ಮಟ್ಟದಲ್ಲಿ ಯಶಸ್ಸು ನೀಡಿತು. ಹಿಂದೂಗಳು ಮುಗಿಬಿದ್ದು ಜಟ್ಕಾ ಕಟ್ ಮಾಂಸವನ್ನು ಖರೀದಿ ಮಾಡಿದ್ರು. ಹಲಾಲ್ ಮಾಡಿದ ಮಾಂಸವನ್ನು ಕೇಳುವವರು ಇರಲಿಲ್ಲ. ಮುಸ್ಲಿಂ ವ್ಯಾಪಾರಿಗಳು ಹಿಡಿಶಾಪ ಹಾಕಿದ್ರು. ಕಟ್ ಮಾಡಿದ ಮಾಂಸಗಳು ವ್ಯಾಪಾರವಾಗಲೇ ಇಲ್ಲ.. ಅಷ್ಟರಮಟ್ಟಿಗೆ ಕಳೆದ ಬಾರಿಯ ಅಭಿಯಾನ ಯಶಸ್ಸು ಕೊಟ್ಟಿತ್ತು.. ಈ ಬಾರಿ ದೀಪಾವಳಿ ಹಬ್ಬ ಕಾರ್ತಿಕ ಮಾಸದಲ್ಲಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಗಳು ಯಾರೂ ಮಾಂಸವನ್ನು (Halal Free Deepavali) ಅಷ್ಟಾಗಿ ಖರೀದಿಸಲಿಲ್ಲ. ಅಲ್ಪಸ್ವಲ್ಪ ಜನ ತಿಂದ್ರು. ಅದರಲ್ಲೂ ಜಟ್ಕಾ ಕಟ್ ಮಾಂಸವೇ ಬೇಕು ಎಂದು ಜಟ್ಕಾ ಮಾಂಸದಂಗಡಿಗಳಲ್ಲಿ ಖರೀದಿ ಮಾಡಿದ್ರು.

ಕಳೆದ ಬಾರಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಹಲಾಲ್ ಮಾಂಸವನ್ನು ಬಾಯ್ಕಾಟ್ ಮಾಡಬೇಕು. ಮುಸ್ಲಿಂಮರು ಅಲ್ಲಾನಿಗೆ ಸಮರ್ಪಣೆ ಮಾಡಿದ ಮಾಂಸವನ್ನು ನಮ್ಮ ದೇವರಿಗೆ ನೈವೇದ್ಯ ಮಾಡಬಾರದು. ಅದು ಎಂಜಲು ಮಾಂಸ ಎಂದು ಅಭಿಯಾನ ಮಾಡಿದ್ರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಿಂದೂಗಳ ಅಂಗಡಿಗಳಲ್ಲಿ ಹಿಂದೂಗಳು ಮಾಂಸವನ್ನು ಖರೀದಿ ಮಾಡಿದ್ರು. ಇದರಿಂದ ಕೋಟ್ಯಾಂತರ ರುಪಾಯಿ ವ್ಯಾಪಾರ ಆಯ್ತು. ಸುಮಾರು 75 % ನಷ್ಟು ವ್ಯಾಪಾರ ಹಿಂದೂಗಳ ಅಂಗಡಿಗಳಲ್ಲಿ ಆಯ್ತು ಅನ್ನೋ ಮಾಹಿತಿ ಇದೆ ( Halal meat controversy).

ಇನ್ನು ಕಳೆದ ಬಾರಿಯ ಹಲಾಲ್ ಬಾಯ್ಕಾಟ್ ಅಭಿಯಾನಕ್ಕೂ ಮುಂಚೆ ಸಾಕಷ್ಟು ಹಿಂದೂಗಳಿಗೆ ಈ ಹಲಾಲ್ ಅಂದರೆ ಏನು? ಜಟ್ಕಾ ಕಟ್ ಅಂದರೆ ಏನು? ಅನ್ನೋ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಮುಸ್ಲಿಮರು ಹಲಾಲ್ ಮಾಡಿದ ಮಾಂಸವನ್ನು ಖರೀದಿ ಮಾಡ್ತಿದರೂ ಅಕ್ಕಪಕ್ಕದಲ್ಲಿ ಇದ್ದ ಹಿಂದೂಗಳ ಅಂಗಡಿಗಳಲ್ಲಿ ಮಾಂಸವನ್ನು ‌ಖರೀದಿ ಮಾಡಿ ದೇವರಿಗೆ ನೈವೇದ್ಯ ಮಾಡ್ತಿದ್ರು. ಹಿಂದೂಪರ ಸಂಘಟನೆಗಳು ಹಲಾಲ್ ಮಾಂಸ ಅಂದರೆ ಏನು? ಯಾವ ರೀತಿ ಅದನ್ನು ಕಟ್ ಮಾಡ್ತಾರೆ? ಅದನ್ನು ಯಾರಿಗೆ ಸಮರ್ಪಣೆ ಮಾಡ್ತಾರೆ? ಅನ್ನೋ ಇಂಚಿಂಚು ಮಾಹಿತಿ ನೀಡಿದ್ರು. ಇದರಿಂದ ಎಚ್ಚೆತ್ತ ಹಿಂದೂಗಳು ಹಿಂದೂಗಳ ಅಂಗಡಿಗಳು, ಜಟ್ಕಾ ಕಟ್ ಅಂಗಡಿಗಳಲ್ಲಿ ಮಾಂಸವನ್ನು ಖರೀದಿ ಮಾಡಿದ್ರು. ಇದರಿಂದ ಮುಸ್ಲಿಂ ವ್ಯಾಪಾರಿಗಳು ಹಲಾಲ್ ಕಟ್ ಮಾಡಿದ್ದ ಮಾಂಸವನ್ನು ಖರೀದಿ ಮಾಡಲು ಹಿಂದೂಗಳು ಮುಂದೆ ಬರಲಿಲ್ಲ. ಇದು ರಾಜ್ಯದ ಹೊಸ್ತಡ್ಕಿನ ವ್ಯಾಪಾರದ 75 % ರಷ್ಟು ವ್ಯಾಪಾರವನ್ನು ಹಿಂದೂಗಳು ಬಳಿ ಮಾಡಿದ್ರು.

ಇನ್ನು ಈ ಬಾರಿಯ ದೀಪಾವಳಿ ಹಬ್ಬದ ವೇಳೆ…

ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಜಾಗೃತಿ, ಅಭಿಯಾನ, ಸಭೆಗಳನ್ನು ಮಾಡಿದ್ದಾರೆ. ಮನೆಗಳಿಗೆ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ಹಂಚಿಕೆ ಮಾಡಿದ್ರು. ಹೋಟೆಲ್ ಮಾಲೀಕರು, ಉದ್ಯಮಿಗಳು, ಎಪಿಎಂಸಿ ಅಸೋಸಿಯೇಶನ್ ಹಾಗೂ ಹಿಂದೂಪರ ಸಂಘಟನೆಗಳು, ಸಂಘ ಸಂಸ್ಥೆಗಳೊಂದಿಗೆ ಸಭೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಭರ್ಜರಿ ಯಾಗಿ‌ ಪ್ರಚಾರ ಕೂಡ ಮಾಡಿದ್ರು. ‘ಹಲಾಲ್ ಜಿಹಾದ್’ ಅನ್ನೋ ಪುಸ್ತಕ ಕೂಡ ಬಿಡುಗಡೆ ಮಾಡಿದ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಈಗಾಗಲೇ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ.

ಈ ಪುಸ್ತಕವು ಭಾರತದಲ್ಲಿ ನಡೆಯುವ ಸಮಾನಂತರ ಹಲಾಲ್ ಎಕಾನಮಿ ಬಗ್ಗೆ ಇದೆ.. ಇದರಲ್ಲಿ ಹಲಾಲ್ ಪ್ರಮಾಣಪತ್ರದ ಮೂಲಕ ಖಾಸಗಿ ಪ್ರಮಾಣಪತ್ರ ತಯಾರಿ, ಇದರಿಂದ ಹೇಗೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಅದರಿಂದ ಭಾರತಕ್ಕೆ ಹೇಗೆ ಅಪಾಯ? ಎಂಬೆಲ್ಲಾ ಮಾಹಿತಿ ಇದೆ. ಈ ಅರ್ಥ ವ್ಯವಸ್ಥೆಯು ಇಸ್ಲಾಂ ದೃಷ್ಟಿಯಿಂದ ಯಾವ ದೃಷ್ಟಿಕೋನ? ಸಾಮಾನ್ಯ ವ್ಯಕ್ತಿ ಹೇಗೆ ವಿರೋಧ ಮಾಡಬಹುದು? ಮುಂತಾದವುಗಳ ಬಗ್ಗೆ ಮಾಹಿತಿ ಇದೆ.

ಈ ಪುಸ್ತಕದಲ್ಲಿ ಒಟ್ಟು 12 ಅಧ್ಯಾಯಗಳು ಇವೆ. ಯಾವೆಲ್ಲ ಮಾಹಿತಿ ನೀಡಲಾಗಿದೆ ‌ಎಂದು ನೋಡೋದಾದ್ರೆ..

1- ಹಲಾಲ್ ಎಂದರೇನು 2- ಹಲಾಲ್ ಚಳುವಳಿಯ ಉದ್ದೇಶ 3- ಹಲಾಲ್ ಪರಿಕಲ್ಪನೆಯು ಬೆಳವಣಿಗೆಯ ಇತಿಹಾಸ 4- ‘ಹಲಾಲ್ ಆರ್ಥಿಕ ವ್ಯವಸ್ಥೆ’ ಯ ಸ್ವರೂಪ, ವ್ಯಾಪ್ತಿ ಮತ್ತು ಪ್ರಚಾರ 5- ‘ಹಲಾಲ್ ಆರ್ಥಿಕ ವ್ಯವಸ್ಥೆ’ ಯ ಆರ್ಥಿಕ ಆಧಾ ‘ಹಲಾಲ್ ಪ್ರಮಾಣಪತ್ರ 6- ‘ಹಲಾಲ್ ಪ್ರಮಾಣಪತ್ರ’ದ ನಿರರ್ಥಕತೆ 7- ‘ಹಲಾಲ್ ಆರ್ಥಿಕ ವ್ಯವಸ್ಥೆ’ಯ ದುಷ್ಪರಿಣಾಮಗಳು 8- ‘ಹಲಾಲ್ ಆರ್ಥಿಕ ವ್ಯವಸ್ಥೆ’ ಮತ್ತು ಜಿಹಾದ್ ಭಯೋತ್ಪಾದನೆ’ಗಳ ನಂಟು..! 9- ಹಲಾಲ್ ಆರ್ಥಿಕ ವ್ಯವಸ್ಥೆಯ ಹಿಂದೂಗಳ ಯೋಗ್ಯ ನಿಲುವು ಮತ್ತು ಕೃತಿ 10- ಹಲಾಲ್ ಆರ್ಥಿಕ ವ್ಯವಸ್ಥೆಗೆ ದೇಶ ವಿದೇಶಗಳಲ್ಲಾಗುತ್ತಿರುವ ವಿರೋಧ 11- ‘ಹಲಾಲ್ ಆರ್ಥಿಕ ವ್ಯವಸ್ಥೆ’ಯ ವಿರುದ್ಧ ‘ ಹಿಂದೂ ಜನಜಾಗೃತಿ ಸಮಿತಿ’ ಹೋರಾಟ ಮತ್ತು ಯಶಸ್ಸು 12- ಹಲಾಲ್ ನ‌ ಮೂಲಕ ನಡೆಯುತ್ತಿರುವ ‘ಆರ್ಥಿಕ ಜಿಹಾದ್ ನ ವಿರುದ್ಧ ಹೋರಾಡಿರಿ!

ಇನ್ನು ಹಿಂದೂಗಳ ಎಷ್ಟು ದುಡ್ಡು ಹಲಾಲ್‌ಗೆ ಹೋಗ್ತಿದೆ? ಅನ್ನೋದನ್ನ ನೋಡೋದಾದ್ರೆ ಹಿಂದೂಗಳ ಹಣಕ್ಕಿಂತ, ಈ ಅರ್ಥ ವ್ಯವಸ್ಥೆ ಭಾರತದ‌ ಮಾರುಕಟ್ಟೆ ಹೇಗೆ ನಿಯಂತ್ರಣ ಮಾಡುತ್ತಾರೆ? ಕೋಳಿ ಇಂಡಸ್ಟ್ರಿ 2.50 ಲಕ್ಷ ಕೋಟಿ, 1.5 ಲಕ್ಷ ಕೋಟಿ ಮಾಂಸದ ವ್ಯಾಪಾರ ಒಟ್ಟು 4 ಲಕ್ಷ ಕೋಟಿ ವ್ಯಾಪಾರದ ಮೇಲೆ ನಿಯಂತ್ರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಅದರ ಜೊತೆಗೆ ಮೆಡಿಸಿನ್‌, ಫುಡ್, ಟೂರಿಸಂ, ಫ್ಯಾಷನ್ ಇಂಡಸ್ಟ್ರಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನ ನಡೆಯುತ್ತಿದೆ. ಇಡೀ ವಿಶ್ವದಲ್ಲಿ ಯುಎಸ್ 2 ಟ್ರಿಲಿಯನ್ ಡಾಲರ್ಸ್ ಎಕಾನಮಿ ನಿರ್ಮಾಣ ಮಾಡಿದೆ. ಯಾವೆಲ್ಲಾ ವಸ್ತುಗಳಲ್ಲಿ ಈ ಹಲಾಲ್‌ ದುಡ್ಡು ಖರ್ಚಾಗುತ್ತಿದೆ ಅನ್ನೋದನ್ನು ನೋಡೋದಾದ್ರೆ… ಇಂದು ಎಲ್ಲ ವಸ್ತು ಸಕ್ಕರೆ, ರೆಸ್ಟೋರೆಂಟ್, ಆಯುರ್ವೆದಿಕ್ ಮೆಡಿಸಿನ್, ಫ್ಯಾಷನ್, ಆಸ್ಪತ್ರೆ, ಪ್ರವಾಸೋದ್ಯಮ, ಇಂಟರ್ನೆಟ್, ಸ್ಟಾಕ್ ಮಾರ್ಕೆಟ್, ಫಾರ್ಮಾಸಿಟಿಕಲ್ ಹೀಗೆ ಎಲ್ಲ ಕ್ಷೇತ್ರದಲ್ಲಿ ಹಲಾಲ್ ಇದೆ.

ಹೋರಾಟಕ್ಕೆ ಮುಂದಾಗಿದ್ದ ಸಂಘಟನೆಗಳ ಉದ್ದೇಶವೇನು? ಅನ್ನೋದನ್ನು ನೋಡೋದಾದ್ರೆ

1. ಭಾರತದಲ್ಲಿ ಪ್ರಮಾಣ ಪತ್ರ ನೀಡುವುದು ಸರಕಾರದ್ದು ಆಗಬೇಕು 2- ಖಾಸಗಿಯವರು ಪ್ರಮಾಣಪತ್ರ ನೀಡಬಾರದು (ಮುಸ್ಲಿಂ ಸಂಘಟನೆಗಳು). 3- ಹಲಾಲ್ ಹಣ ಇ.ಡಿ. ಮೂಲಕ ತನಿಖೆಯಾಗಬೇಕು. 4-ಹಲಾಲ್ ಕಾನ್ಸೆಪ್ಟ್ ಮುಸ್ಲಿಮರು ಅನ್ಯ ಸಮುದಾಯದ ಮೇಲೆ ಹೇರಿಕೆ ನಿಲ್ಲಬೇಕು. 5- ಹಲಾಲ್ ಸರ್ಟಿಫಿಕೇಟ್ ನಿಂದ ಬರೋ ಹಣವನ್ನು ಭಯೋತ್ಪಾದನೆ ಬಳಕೆ ಮಾಡಲಾಗುತ್ತದೆ.

ಒಟ್ನಲ್ಲಿ ಈ ದೀಪಾವಳಿ ಗೆ ಹಾಲಾಲ್ ಬಾಯ್ಕಾಟ್ ಕರೆ ನೀಡಿದ್ದ ಹಿಂದೂಪರ ಸಂಘಟನೆಗಳಿಂದ ಸಾಕಷ್ಟು ಹಿಂದೂಗಳು ಹಿಂದೂ ವ್ಯಾಪಾರಿಗಳ ಅಂಗಡಿಯಲ್ಲೇ ವಸ್ತುಗಳನ್ನು ಖರೀದಿ ಮಾಡಿ ಹಬ್ಬ ಆಚರಣೆ ಮಾಡಿದ್ರು. ಆದರೆ ಮಾಂಸ ಖರೀದಿ ವಿಚಾರದಲ್ಲಿ ಮಾತ್ರ ಇದು ಆಗಲಿಲ್ಲ. ಕಾರಣ ಈ ಬಾರಿಯ ದೀಪಾವಳಿ ಕಾರ್ತಿಕ ಮಾಸದಲ್ಲಿ ಇದ್ದಿದ್ದರಿಂದ ಮಾಂಸ ಖರೀದಿ ಮಾಡಿದ ಅಲ್ಪಸ್ವಲ್ಪ ಹಿಂದೂಗಳು ಕೂಡ ಜಟ್ಕಾ ಕಟ್ ಬೇಕು, ಹಲಾಲ್ ಮಾಂಸ ಬೇಡ ಎಂದು ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಸಾಥ್ ನೀಡಿದ್ರು. ಆದರೆ ಇನ್ನೂ ಮುಂದೆ ಯಾವ ಯಾವ ಬಾಯ್ಕಾಟ್ ಅಭಿಯಾನಗಳು ಆರಂಭವಾಗುತ್ತೋ ಎಂದು ಕಾದು ನೋಡಬೇಕಿದೆ. (ವರದಿ: ಕಿರಣ್ ಸೂರ್ಯ, ಟಿವಿ 9, ಬೆಂಗಳೂರು)

Published On - 7:28 pm, Fri, 28 October 22