ಹಿಂದೂಸ್ತಾನ್ 228-201 LWಗೆ ಡಿಜಿಸಿಎ ಸಮ್ಮತಿ; HALನಿಂದ ತಯಾರಾಗಲಿವೆ ಕಮರ್ಷಿಯಲ್ ವಿಮಾನಗಳು

|

Updated on: Feb 28, 2023 | 2:40 PM

HAL To Produce Commercial Aircrafts: ಜರ್ಮನಿಯ ಡಾರ್ನಿಯರ್ ವಿಮಾನ ತಯಾರಿಕೆಗೆ ಲೈಸೆನ್ಸ್ ಹೊಂದಿರುವ ಹೆಚ್​ಎಎಲ್ ಸಂಸ್ಥೆ, ಒಂದಷ್ಟು ಮಾರ್ಪಾಡು ಮಾಡಿ ಪುಟ್ಟ ಕಮರ್ಷಿಯಲ್ ವಿಮಾನ ತಯಾರಿಸಿದೆ. ಡಿಜಿಸಿಎ ಅನುಮೋದನೆ ಪಡೆದಿರುವ ಈ ವಿಮಾನಗಳು ದೇಶೀಯ ಮಾರ್ಗಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ.

ಹಿಂದೂಸ್ತಾನ್ 228-201 LWಗೆ ಡಿಜಿಸಿಎ ಸಮ್ಮತಿ; HALನಿಂದ ತಯಾರಾಗಲಿವೆ ಕಮರ್ಷಿಯಲ್ ವಿಮಾನಗಳು
ಡಾರ್ನಿಯರ್ ವಿಮಾನ
Follow us on

ನವದೆಹಲಿ: ಬೆಂಗಳೂರು ಮೂಲದ ರಕ್ಷಣಾ ವೈಮಾನಿಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (HAL) ಹಗುರವಾದ ಕಮರ್ಷಿಯಲ್ ವಿಮಾನಗಳ ತಯಾರಿಕೆಗೆ ಇನ್ನಷ್ಟು ಪುಷ್ಟಿ ಸಿಗುತ್ತಿದೆ.. ಎಚ್​ಎಎಲ್​ನ ಹಿಂದೂಸ್ತಾನ್ 228-201 ಎಲ್​ಡಬ್ಲ್ಯೂ (Hindustan 228-201 LW) ವಿಮಾನಕ್ಕೆ ಡಿಜಿಸಿಎ ಅನುಮೋದನೆ ಕೊಟ್ಟಿದೆ. ಇದರಿಂದ ಹೆಚ್​ಎಎಲ್​ನ ಮಹತ್ವ ಇನ್ನಷ್ಟು ಹೆಚ್ಚಾಗಲಿದ್ದು, ಕೇಂದ್ರದ ಉಡಾನ್ ಯೋಜನೆಗೂ ಬಲ ಸಿಗಲಿದೆ. ಹಾಗೆಯೇ, ಮೇಡ್ ಇನ್ ಇಂಡಿಯಾ ಯೋಜನೆಯೂ ಬಲಗೊಳ್ಳಲಿದೆ.

ಜರ್ಮನಿಯ ಡಾರ್ನಿಯರ್ (Dornier) ಸಂಸ್ಥೆಯ ಡಾರ್ನಿಯರ್-228 ವಿಮಾನದ ರೂಪಾಂತರವೇ ಎಚ್​ಎಎಲ್​ನ ಹೊಸ ವಿಮಾನ. ಡಾರ್ನಿಯರ್ ವಿಮಾನಗಳನ್ನು ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಗಳು ಸಮುದ್ರದಲ್ಲಿ ಪಹರೆ ನಡೆಸಲು ಬಳಸುತ್ತವೆ. ಈ ವಿಮಾನಗಳ ತಯಾರಿಕೆಗೆ ಲೈಸೆನ್ಸ್ ಅನ್ನು ಎಚ್​ಎಎಲ್ ಹೊಂದಿದೆ. ಇದೀಗ ಈ ವಿಮಾನವನ್ನು ತುಸು ಬದಲಾವಣೆ ಮಾಡಿ ಕಮರ್ಷಿಯಲ್ ಬಳಕೆಗೆ ಅನುವಾಗುವಂತಹ ವಿಮಾನವನ್ನು ಎಚ್​ಎಎಲ್ ರೂಪಿಸಿದೆ.

ಹಿಂದೂಸ್ತಾನ್ 228-201 ಎಲ್​ಡಬ್ಲ್ಯೂ ವಿಮಾನವು 19 ಪ್ರಯಾಣಿಕ ಸೀಟಿಂಗ್ ಹೊಂದಿದೆ. ಇದರ ಟೇಕಾಫ್ ತೂಕ 5,695 ಕಿಲೋ ಇದೆ. ಇದರಿಂದ ಈ ವಿಮಾನವು 5,700 ಕಿಲೋ ಒಳಗಿನ ವಿಮಾನಗಳ ವಿಭಾಗಕ್ಕೆ ಸೇರುತ್ತದೆ. ಹಾಗೆಯೇ ಈ ವಿಮಾನ ಚಲಾಯಿಸಲು ವಿಶೇಷ ಪರಿಣಿತಿ ಬೇಕಿಲ್ಲ. ಕಮರ್ಷಿಯಲ್ ಪೈಲಟ್​ಗಳು ಎಚ್​ಎಎಲ್​ನ ಈ ವಿಮಾನವನ್ನು ಚಲಾಯಸಬಹುದು. ಇದರ ಕಾರ್ಯಾಚರಣೆ ವೆಚ್ಚವೂ ಕಡಿಮೆ ಎನ್ನಲಾಗಿದೆ.

ಇದನ್ನೂ ಓದಿNarendra Modi: ಕೃತಕ ಬುದ್ಧಿಮತ್ತೆಯಿಂದ ಪರಿಹರಿಸಬಲ್ಲ 10 ಸಮಸ್ಯೆಗಳನ್ನು ಗುರುತಿಸಿ: ಪ್ರಧಾನಿ ನರೇಂದ್ರ ಮೋದಿ

ಎಚ್​ಎಎಲ್​ನ ಈ ನೂತನ ಕಮರ್ಷಿಯಲ್ ವಿಮಾನವು ಚಿಕ್ಕ ದೂರದ ಮಾರ್ಗಗಳಿಗೆ ಸೂಕ್ತವಾಗಿವೆ. ಹೀಗಾಗಿ, ಭಾರತದೊಳಗೆ ವಿವಿಧ ನಗರಗಳ ಮಧ್ಯೆ ಸಂಚಾರಕ್ಕೆ ಇವುಗಳನ್ನು ಬಳಸಬಹುದಾಗಿದೆ. ಶಿವಮೊಗ್ಗ ಇತ್ಯಾದಿ ಟಯರ್ 3 ನಗರಗಳಲ್ಲಿ ಎಚ್​ಎಎಲ್​ನ ಹೊಸ ವಿಮಾನಗಳು ಸಂಚರಿಸುವ ಸಾಧ್ಯತೆ ಇದೆ.

ಇದೇ ವೇಳೆ, ಹೆಚ್​ಎಎಲ್​ನ 6200 ಕಿಲೋ ಟೇಕಾಫ್ ತೂಕದ ವಿಮಾನಕ್ಕೂ ಡಿಜಿಸಿಎ ಅನುಮೋದನೆ ಕೊಟ್ಟಿದೆ. ಈ ವಿಮಾನ ಕೂಡ ಡಾರ್ನಿಯರ್ ವಿಮಾನದ ರೂಪಾಂತರವೇ. ಇದನ್ನು ಸರಕು ಸಾಗಣೆಗೆ ಬಳಸುವ ಸಾಧ್ಯತೆ ಇದೆ. ಹೆಚ್​ಎಎಲ್ ಈಗಾಗಲೇ 17 ಸೀಟ್​ಗಳ ಡಾರ್ನಿಯರ್-228 ವಿಮಾನವನ್ನು ಕಮರ್ಷಿಯಲ್ ಬಳಕೆಗೆ ಕಳೆದ ವರ್ಷ ಬಿಡುಗಡೆ ಮಾಡಿದೆ. ಉಡಾನ್ ಯೋಜನೆ ಅಡಿ ಇದನ್ನು ಅರುಣಾಚಲಪ್ರದೇಶಕ್ಕೆ ನಿಯೋಜಿಸಲಾಗಿದೆ. ಈಗ ಡಿಜಿಸಿಎ ಅನುಮೋದನೆ ಕೊಟ್ಟಿರುವುದು ಡಾರ್ನಿಯರ್-228 ವಿಮಾನದ ರೂಪಾಂತರ ವಿಮಾನ. ಇದು 19 ಸೀಟರ್​ನದ್ದಾಗಿದೆ.

ಸಾಮಾನ್ಯವಾಗಿ ಕಮರ್ಷಿಯಲ್ ಫ್ಲೈಟ್​ಗಳಲ್ಲಿ ನೂರಕ್ಕಿಂತ ಹೆಚ್ಚು ಸೀಟುಗಳಿರುತ್ತವೆ. ಹೆಚ್​ಎಎಲ್​ನ ವಿಮಾನಗಳು ತೀರಾ ಹಗುರದ್ದಾಗಿದ್ದು ಕಿರು ದೂರದ ಸ್ಥಳಗಳಲ್ಲಿ ಸಂಚರಿಸಲು ಹೇಳಿ ಮಾಡಿಸಿವೆ.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ