Narendra Modi: ಕೃತಕ ಬುದ್ಧಿಮತ್ತೆಯಿಂದ ಪರಿಹರಿಸಬಲ್ಲ 10 ಸಮಸ್ಯೆಗಳನ್ನು ಗುರುತಿಸಿ: ಪ್ರಧಾನಿ ನರೇಂದ್ರ ಮೋದಿ

Post-Budget Webinar on Technology Usage: ಕೃತಕ ಬುದ್ಧಿಮತ್ತೆ ಮತ್ತು 5ಜಿಯಂತಹ ತಂತ್ರಜ್ಞಾನಗಳು ಶಿಕ್ಷಣ, ಕೃಷಿ, ಔಷಧ ಹಾಗೂ ಇತರ ಹಲವು ವಲಯಗಳಲ್ಲಿ ಪರಿವರ್ತನೆ ತರಲು ಹೊರಟಿವೆ. ಎಐನಿಂದ ಪರಿಹಾರ ತರಬಹುದಾದ 10 ಸಮಸ್ಯೆಗಳನ್ನು ಗುರುತಿಸುವ ಕೆಲಸವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Narendra Modi: ಕೃತಕ ಬುದ್ಧಿಮತ್ತೆಯಿಂದ ಪರಿಹರಿಸಬಲ್ಲ 10 ಸಮಸ್ಯೆಗಳನ್ನು ಗುರುತಿಸಿ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 28, 2023 | 1:11 PM

ನವದೆಹಲಿ: ಮುಂದಿನ ಎರಡು ದಶಕದಲ್ಲಿ ಭಾರತ ಒಂದು ಮುಂದುವರಿದ ದೇಶವಾಗಲು ತಂತ್ರಜ್ಞಾನ ಸಹಾಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಬಜೆಟ್ ನಂತರದ ವೆಬಿನಾರ್​ವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಗಳು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಫಲ ಎಲ್ಲಾ ನಾಗರಿಕರಿಗೂ ಪ್ರಾಪ್ತವಾಗುವಂತಾಗಲು ಅಗಾಧ ಮತ್ತು ಅತ್ಯಾಧುನಿಕ ಡಿಜಿಟಲ್ ಸೌಕರ್ಯ ವ್ಯವಸ್ಥೆ (Modern Digital Infrastructure) ರೂಪಿಸಲಾಗುತ್ತಿರುವುದರ ಮಾಹಿತಿ ನೀಡಿದರು.

ತಂತ್ರಜ್ಞಾನ ಬಳಸಿ ಜೀವನ ಸುಗಮಗೊಳಿಸುವುದರ ಕುರಿತು (Unleashing the Potential: Ease of Living Using Technology) ನಡೆದ ವೆಬಿನಾರ್​ನಲ್ಲಿ ಅವರು 2047ರಷ್ಟರಲ್ಲಿ ಮುಂದುವರಿದ ದೇಶವಾಗಬೇಕೆನ್ನುವ ಭಾರತದ ಗುರಿಗೆ ತಂತ್ರಜ್ಞಾನ ನೆರವಾಗುತ್ತದೆ ಎಂದರು. ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಬಗ್ಗೆ ಇನ್ನಷ್ಟು ವಿವರ ನೀಡಿದ ಅವರು, ಸಣ್ಣ ಉದ್ಯಮಗಳ ಹೊಂದಾಣಿಕೆಯ ವೆಚ್ಚವನ್ನು (Cost of Compliances For Small Businesses) ಸರ್ಕಾರ ತಗ್ಗಿಸಬಯಸುತ್ತದೆ. ಯಾವ್ಯಾವ ನಿಯಮಾವಳಿಗಳನ್ನು ಕಡಿಮೆ ಮಾಡಬೇಕೆಂದು ಉದ್ಯಮದಿಂದ ಒಂದು ಪಟ್ಟಿ ಸಿದ್ಧವಾಗಲಿ ಎಂದೂ ಅವರು ಸಲಹೆ ನೀಡಿದರು.

ಸಣ್ಣ ಉದ್ಯಮಗಳು ನಿಯಮಗಳ ಹೊಂದಾಣಿಕೆಗೆ ಮಾಡುವ ವೆಚ್ಚ ಕಡಿಮೆ ಆಗಬೇಕು. ನೀವು ಅನಗತ್ಯವಾಗಿರುವ ನಿಯಮಾವಳಿಗಳನ್ನು ಇಳಿಸಿ ಒಂದು ಪಟ್ಟಿ ಸಿದ್ಧಪಡಿಸಬಹುದಾ ನೋಡಿ. ನಾವು 40 ಸಾವಿರದಷ್ಟು ನಿಯಮಾವಳಿಗಳನ್ನು ನಿಲ್ಲಿಸಿದ್ದೇವೆ ಎಂದು ಪೋಸ್ಟ್ ಬಜೆಟ್ ವೆಬಿನಾರ್​ನಲ್ಲಿ ನರೇಂದ್ರ ಮೋದಿ ತಿಳಿಸಿದರು.

ಇದನ್ನೂ ಓದಿBill Gates at India G20: ಜಿ20 ಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆ ಬಿಲ್ ಗೇಟ್ಸ್

ತೆರಿಗೆ ವ್ಯವಸ್ಥೆಯನ್ನು ಫೇಸ್​ಲೆಸ್ ಆಗುವಂತೆ ಮಾಡಲು ತಂತ್ರಜ್ಞಾನ ಬಳಸುತ್ತಿದ್ದೇವೆ. ನಾಗರಿಕರ ಜೀವನದ ಗುಣಮಟ್ಟದಲ್ಲಿ ಬದಲಾವಣೆ ತರಲು ತಂತ್ರಜ್ಞಾನ ಸಹಾಯಕವಾಗಿದೆ. ಕೃತಕ ಬುದ್ಧಿಮತ್ತೆ (ಎಐಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತ್ತು 5ಜಿಯಂತಹ ತಂತ್ರಜ್ಞಾನಗಳು ಶಿಕ್ಷಣ, ಕೃಷಿ, ಔಷಧ ಹಾಗೂ ಇತರ ಹಲವು ವಲಯಗಳಲ್ಲಿ ಪರಿವರ್ತನೆ ತರಲು ಹೊರಟಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಪರಿಹಾರ ತರಬಹುದಾದ 10 ಸಮಸ್ಯೆಗಳನ್ನು ಗುರುತಿಸುವ ಕೆಲಸವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಕರೆ ನೀಡಿದರು.

ತಂತ್ರಜ್ಞಾನ ಬಳಕೆಯ ಮಹತ್ವದ ಬಗ್ಗೆ ಇನ್ನಷ್ಟು ಮಾತನಾಡಿದ ಅವರು, ಒಂದು ದೇಶ ಒಂದು ಪಡಿತರ (ಒನ್ ನೇಷನ್ ಒನ್ ರೇಷನ್) ಸಂಕಲ್ಪಕ್ಕೆ ತಂತ್ರಜ್ಞಾನವೇ ಅಡಿಪಾಯ ಆಗಿದೆ. ಜ್ಯಾಮ್ (ಜೆಎಎಂಜನ್ ಧನ್ ಯೋಜನಾ, ಆಧಾರ್ ಮತ್ತು ಮೊಬೈಲ್ ನಂಬರ್) ತ್ರಯದಿಂದ ಬಡವರಿಗೆ ಪ್ರಯೋಜನ ಸಿಕ್ಕಿದೆ. 21ನೇ ಶತಮಾನವು ತಂತ್ರಜ್ಞಾನದಿಂದ ಮುನ್ನಡೆಯುತ್ತದೆ. ಇದು ಕೇವಲ ಡಿಜಿಟಲ್, ಇಂಟರ್ನೆಟ್ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗುವುದಿಲ್ಲ ಎಂದರು.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ