ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ

|

Updated on: Jan 30, 2021 | 6:51 PM

ಈಗಾಗಲೇ ಸಂಸ್ಥೆ ಆನ್​ಲೈನ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿದ ಲೋಗೊ ಹಾಕಿದೆ. ಇನ್ನು, ಪ್ಯಾಕಿಂಗ್​ ವಸ್ತುಗಳ ಮೇಲೆ ಹೊಸ ಲೋಗೊ ಹಾಕುವ ಪ್ರಕ್ರಿಯೆ ನಡೆದಿದೆ.

ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ
ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ
Follow us on

ಫ್ಯಾಷನ್​ ವಸ್ತುಗಳ ಮಾರಾಟ ಜಾಲತಾಣ ಮಿಂತ್ರಾ ಕಂಪನಿಯ Myntra ಲೋಗೊ ಈಗ ವಿವಾದಕ್ಕೆ ತುತ್ತಾಗಿದೆ. ಮಹಿಳೆಯರಿಗೆ ಅವಮಾನ ಮಾಡುವ ವಿಚಾರ ಈ ಲೋಗೊದಲ್ಲಿದೆ ಎಂದು ದೂರು ದಾಖಲಾಗಿತ್ತು. ಇದನ್ನು ಒಪ್ಪಿರುವ ಸಂಸ್ಥೆ ಲೋಗೊ ಬದಲಾಯಿಸಿದೆ!

ಅವೆಸ್ತಾ ಫೌಂಡೇಷನ್​ ಎನ್​ಜಿಒ ಸಂಸ್ಥೆಯ ನಾಜ್​ ಪಟೇಲ್​ (Activist Naaz Patel) ಎಂಬುವವರು ಕಳೆದ ಡಿಸೆಂಬರ್​ ತಿಂಗಳಲ್ಲಿ ಮಿಂತ್ರಾ ಲೊಗೊ ವಿರುದ್ಧ ಮುಂಬೈ ಸೈಬರ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನಲ್ಲಿ ಅವರು ಮಿಂತ್ರಾ ಲೋಗೊ Myntra Logo ಆಕ್ಷೇಪಾರ್ಹವಾಗಿದೆ. ಇದು ಮಹಿಳೆಯರಿಗೆ ಅವಮಾನ ಮಾಡುವಂತಿದೆ. ಹೀಗಾಗಿ, ತಕ್ಷಣಕ್ಕೆ ಲೋಗೊದಲ್ಲಿ (Offensive Logo) ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿತ್ತು.

ಇದನ್ನು ಪರಿಶೀಲನೆ ಮಾಡಿರುವ ಮುಂಬೈ ಸೈಬರ್​ ಪೊಲೀಸರು ಮಿಂತ್ರಾ ಸಂಸ್ಥೆಗೆ ಇ-ಮೇಲ್​ ಕಳುಹಿಸಿದ್ದು, ಲೋಗೊ ಬದಲಿಸುವಂತೆ ಸೂಚಿಸಿತ್ತು. ಇದರ ಜೊತೆಗೆ ಜನಸಾಮಾನ್ಯರಿಂದಲೂ ಲೊಗೊಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಂಪೆನಿ ಸಭೆ ಸೇರಿತ್ತು. ಈ ವೇಳೆ ಲೋಗೊ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಸಂಸ್ಥೆ ಆನ್​ಲೈನ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿದ ಲೋಗೊ ಹಾಕಿದೆ. ಇನ್ನು, ಪ್ಯಾಕಿಂಗ್​ ವಸ್ತುಗಳ ಮೇಲೆ ಹೊಸ ಲೋಗೊ ಹಾಕುವ ಪ್ರಕ್ರಿಯೆ ನಡೆದಿದೆ.

ಏನಿತ್ತು ಹಳೆಯ ಲೋಗೊದಲ್ಲಿ?
ಹಳೆ ಲೋಗೊವನ್ನು ಸೂಕ್ಷ್ಮವಾಗಿ ನೋಡಿದರೆ, ಮಹಿಳೆ ತನ್ನ ಗುಪ್ತಾಂಗವನ್ನು ತೋರಿಸುವ ರೀತಿಯಲ್ಲಿ ಇತ್ತು. ಇದನ್ನು ಗಮನಿಸಿದ್ದ ನಾಜ್ ದೂರು ದಾಖಲಿಸಿದ್ದರು. ಈಗ ಸಂಸ್ಥೆ ಲೋಗೋವನ್ನು ಬದಲಾಯಿಸಿದ್ದು, ಗುಪ್ತಾಂಗ ರೀತಿಯಲ್ಲಿ ಕಾಣುತ್ತಿರುವ ಭಾಗವನ್ನು ತೆಗೆದು ಹಾಕಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

Published On - 6:49 pm, Sat, 30 January 21