ನವದೆಹಲಿ: ಡಿಜಿಟಲ್ ಡಾಟಾ ರಕ್ಷಣೆ ಮಸೂದೆಯ (Digital Data Protection Bill 2023) ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ತಂತ್ರಜ್ಞಾನ ಉದ್ಯಮ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಒತ್ತಾಯಿಸಿದೆ. ಭಾರತವನ್ನು ಒಂದು ನಂಬುಗೆಯ ದೇಶವಾಗಿ ನಿರ್ಮಿಸಲು ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಬಿಲ್ ಬಹಳ ಮುಖ್ಯ. ಇದರ ಶೀಘ್ರ ಅನುಷ್ಠಾನಕ್ಕೆ ಸರ್ಕಾರ ಗಮನ ಕೊಡಬೇಕು ಎಂದು ಉದ್ಯಮ ಸಂಘಟನೆ ನಾಸ್ಕಾಮ್ ಸಲಹೆ ನೀಡಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕರಡು ಮಸೂದೆಗೆ ಸಂಸದೀಯ ಸ್ಥಾಯಿ ಸಮಿತಿಯೊಂದರ (Parliamentary Standing Committee) ಅನುಮೋದನೆ ಆಗಿದೆ ಎಂದು ನಿನ್ನೆ ಗುರುವಾರ ಕೇಂದ್ರ ಉದ್ಯಮ ಮತ್ತು ವ್ಯವಹಾರಗಳ ಸಚಿವ ಅಶ್ವಿನಿ ವೈಷ್ಣವ್ ಅವರು ನಾಸ್ಕಾಮ್ ಟೆಕ್ನಾಲಜಿ ಲೀಡರ್ಶಿಪ್ ಫೋರಂ ಸಭೆಯಲ್ಲಿ ಹೇಳಿದ್ದರು. ಆದರೆ ಈ ವರದಿಯನ್ನು ನಾಸ್ಕಾಮ್ ನಿರಾಕರಿಸಿದೆ.
ಮಸೂದೆಗೆ ಸಮಿತಿಯಿಂದ ಅನುಮೋದನೆ ಸಿಕ್ಕಿದೆ ಎಂದು ಸಚಿವ ವೈಷ್ಣವ್ ಆ ಕಾರ್ಯಕ್ರಮದಲ್ಲಿ ಹೇಳಲಿಲ್ಲ ಎಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ ಎಂದು ನಾಸ್ಕಾಮ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
— nasscom (@nasscom) March 3, 2023
ಆದರೆ, ಸಭೆಯಲ್ಲಿ ಮಾತನಾಡುತ್ತಾ ಸಚಿವ ವೈಷ್ಣವ್ ಅವರು ಮಸೂದೆಯನ್ನು ಸಂಸತ್ನಲ್ಲಿ ಮಂಡನೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ ಮತ್ತು ಸಂವಹನದ ಸಂಸದೀಯ ಸಮಿತಿಯಲ್ಲಿ ಆದಷ್ಟೂ ಬೇಗ ಚರ್ಚೆಗಳನ್ನು ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು ಎಂದು ನಾಸ್ಕಾಮ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: G20 Meet: ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಭಾರತ-ಚೀನಾ ಭರವಸೆ, ಗಡಿಯಲ್ಲಿ ಶಾಂತಿ ಬಗ್ಗೆ ಚರ್ಚೆ
ನಾಸ್ಕಾಮ್ ಟೆಕ್ನಾಲಜಿ ಲೀಡರ್ಶಿಪ್ ಫೋರಮ್ (ಎನ್ಟಿಎಲ್ಎಫ್) 2023 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಶ್ವಿನಿ ವೈಷ್ಣವ್, ಐಟಿ ಮತ್ತು ಕಮ್ಯೂನಿಕೇಶನ್ಸ್ನ ಸಂಸದೀಯ ಸ್ಥಾಯಿ ಸಮಿತಿ ಈ ಮಸೂದೆ ಸಂಸತ್ನಲ್ಲಿ ಮಂಡನೆಯಾಗುವ ಮುನ್ನ ಮುಂಚಿತವಾಗಿ ಪರಿಶೀಲನೆ ನಡೆಸಿ ಸಮ್ಮತಿ ಕೊಟ್ಟಿದೆ ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ನಿನ್ನೆ ಗುರುವಾರ ವರದಿಗಳಾಗಿದ್ದವು.
ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಕೂಡ ಸ್ಥಾಯಿ ಸಮಿತಿಯಿಂದ ಮಸೂದೆ ಅನುಮೋದನೆ ಆಗಿರುವ ವರದಿ ಸುಳ್ಳು ಎಂದು ಹೇಳಿ ವರದಿಗಳನ್ನು ತಳ್ಳಿಹಾಕಿದ್ದಾರೆ.
Published On - 4:07 pm, Fri, 3 March 23