ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಯು ತುಂಬಾ ಚಿಕ್ಕದಾಗಿದೆ. ಆದರೆ ಕಳೆದ ವರ್ಷ ಟಾಟಾ ನೆಕ್ಸಾನ್ EV ಮತ್ತು MG ZS EVಯಂತಹ ಎಲೆಕ್ಟ್ರಿಕ್ ಕಾರು ಬಿಡುಗಡೆಯೊಂದಿಗೆ ಪರಿಸ್ಥಿತಿ ಬದಲಾಯಿತು. ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಈ ಟ್ರೆಂಡ್ ಕಳೆದ ವರ್ಷ ಹಲವಾರು ಹೊಸ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬರುವುದರೊಂದಿಗೆ ತೀವ್ರಗೊಂಡಿತು. ಕಳೆದ ವರ್ಷ ಬಿಡುಗಡೆಯಾದ ಹೆಚ್ಚಿನ EVಗಳು ಪ್ರೀಮಿಯಂ ಕಾರುಗಳು. ಆದರೆ ಅವು ಖಂಡಿತವಾಗಿಯೂ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ನಮ್ಮನ್ನು ತಲುಪಲು ದಾರಿ ಮಾಡಿಕೊಡುತ್ತಿವೆ. ನಾವು 2021ರ ಅಂತ್ಯವನ್ನು ಸಮೀಪಿಸುತ್ತಿರುವಾಗ ಈ ವರ್ಷ ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ ಕಾರುಗಳನ್ನು ನೋಡೋಣ.
– ಜಾಗ್ವಾರ್ ಐ-ಪೇಸ್
– ಔಡಿ ಇ-ಟ್ರಾನ್
– ಟಾಟಾ ಟಿಗೋರ್ ಝಿಪ್ಟ್ರಾನ್
– ಔಡಿ ಇ-ಟ್ರಾನ್ ಜಿಟಿ
– ಬಿಎಂಡಬ್ಲ್ಯು iX
– MG ZS EV
– ಪೋರ್ಷೆ ಟೇಯ್ಕನ್
1. ಜಾಗ್ವಾರ್ ಐ-ಪೇಸ್
ಜಾಗ್ವಾರ್ I-Pace ಅನ್ನು ಭಾರತದಲ್ಲಿ 2021ರ ಮಾರ್ಚ್ನಲ್ಲಿ ರೂ. 1.06 ಕೋಟಿಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಯಿತು. 2020ರ ನವೆಂಬರ್ನಲ್ಲಿ ಭಾರತದಲ್ಲಿ ಬುಕಿಂಗ್‌ಗೆ ಲಭ್ಯವಾದ ಎಲೆಕ್ಟ್ರಿಕ್ ಕ್ರಾಸ್‌ಒವರ್ 90 kWh ಬ್ಯಾಟರಿ ಪ್ಯಾಕ್ ಮತ್ತು ಎರಡು ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ. ಈ ಕಾನ್ಫಿಗರೇಷನ್ 394 bhp, 696 Nm ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಪ್ರತಿ ಚಾರ್ಜ್‌ಗೆ (WLTP) 470 ಕಿ.ಮೀ. ಚಲಿಸುತ್ತದೆ.
2. ಔಡಿ ಇ-ಟ್ರಾನ್ ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್
ಔಡಿ ಈ ವರ್ಷ ಜುಲೈನಲ್ಲಿ ಇ-ಟ್ರಾನ್ ಎಸ್‌ಯುವಿ ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ (ಕೂಪ್ ಎಸ್‌ಯುವಿ ವೇರಿಯಂಟ್) ಜೊತೆಗೆ ಇವಿ ಬ್ಯಾಂಡ್‌ವ್ಯಾಗನ್‌ಗೆ ಜಿಗಿದಿದೆ. ಇ-ಟ್ರಾನ್ SUV ಇ-ಟ್ರಾನ್ 50 ವೇರಿಯಂಟ್ನಲ್ಲಿ 71 kWh ಬ್ಯಾಟರಿ ಮತ್ತು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಲ್ಲಿ ಲಭ್ಯವಿದೆ. ಈ ಕಾನ್ಫಿಗರೇಷನ್ 540 Nmನೊಂದಿಗೆ 308 bhp ಜತೆ ಬರುತ್ತದೆ. ಮತ್ತು ಒಂದೇ ಚಾರ್ಜ್‌ನಲ್ಲಿ 264 ಕಿ.ಮೀ. ಮತ್ತು 379 ಕಿ.ಮೀ (WLTP) ಮಧ್ಯದ ಮೈಲೇಜ್ ಕ್ಲೈಮ್ ಮಾಡುತ್ತದೆ. ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್, ಮತ್ತೊಂದೆಡೆ, 95 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಅದು 664 Nm, 396.5 bhp ಜತೆಗೆ ಬರುತ್ತದೆ. ಪ್ರತಿ ಚಾರ್ಜ್‌ಗೆ 359ರಿಂದ 484 ಕಿ.ಮೀ. ಚಲಿಸುತ್ತದೆ. ಭಾರತದಲ್ಲಿ ಔಡಿ ಇ-ಟ್ರಾನ್‌ನ ಬೆಲೆ ರೂ. 1 ಕೋಟಿಯಿಂದ ರೂ. 1.16 ಕೋಟಿಯಷ್ಟಿದ್ದರೆ, ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ ನಿಮಗೆ ರೂ. 1.18 ಕೋಟಿಗಳಷ್ಟಾಗುತ್ತದೆ. ಎಲ್ಲವೂ ಭಾರತದಲ್ಲಿನ ಎಕ್ಸ್ ಶೋರೂಂ ಬೆಲೆಗಳು.
3. ಟಾಟಾ ಟಿಗೊರ್ ಇವಿ ಝಿಪ್ಟ್ರಾನ್
ಟಾಟಾ ಮೋಟಾರ್ಸ್ ಈ ವರ್ಷದ ಆಗಸ್ಟ್‌ನಲ್ಲಿ ಹೊಸ ವಿನ್ಯಾಸ ಮತ್ತು ಹೆಚ್ಚು ಶಕ್ತಿಶಾಲಿ ಝಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಟಿಗೋರ್ ಇವಿ ಅನ್ನು ಅಪ್ಡೇಟ್ ಮಾಡಿದೆ. ಎಮಟ್ರಿ ಲೆವೆಲ್ ಟಾಟಾ ಎಲೆಕ್ಟ್ರಿಕ್ ಕಾರು ಈಗ 26 kWh ಬ್ಯಾಟರಿಯೊಂದಿಗೆ ಬರುತ್ತದೆ. ಇದು 74 bhp ಮತ್ತು 170 Nm ಪೀಕ್ ಟಾರ್ಕ್ ಅನ್ನು ಹೊರಹಾಕಲು ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಹೊಸ ಪವರ್‌ಟ್ರೇನ್ 213 ಕಿಮೀ/ಚಾರ್ಜ್‌ನ ಡ್ರೈವಿಂಗ್ ಶ್ರೇಣಿಯನ್ನು ಕ್ಲೈಮ್ ಮಾಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ARAI ಪ್ರಮಾಣೀಕೃತ ಶ್ರೇಣಿಯ 306 ಕಿಮೀ/ಚಾರ್ಜ್ ಅನ್ನು Tigor EV ನೀಡುತ್ತದೆ. ಟಾಟಾ ಟಿಗೋರ್ ಇವಿ ಈಗ ರೂ.11.99 ಲಕ್ಷದಿಂದ ರೂ.12.99 ಲಕ್ಷದವರೆಗೆ ಲಭ್ಯ ಇದೆ. ಎಲ್ಲ ಎಕ್ಸ್ ಶೋರೂಂ ಬೆಲೆಗಳು.
4. ಔಡಿ ಇ-ಟ್ರಾನ್ ಜಿಟಿ ಮತ್ತು ಆರ್‌ಎಸ್ ಜಿಟಿ ಇ-ಟ್ರಾನ್
ಜುಲೈನಲ್ಲಿ ಇ-ಟ್ರಾನ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ ನಂತರ ಜರ್ಮನ್ ಬ್ರ್ಯಾಂಡ್ ಆದ ಔಡಿ ಇ-ಟ್ರಾನ್ ಜಿಟಿ ನಾಲ್ಕು-ಬಾಗಿಲಿನ ಕೂಪ್ ಸೆಡಾನ್ ಅನ್ನು ಸೆಪ್ಟೆಂಬರ್ 2021ರಲ್ಲಿ ಬಿಡುಗಡೆ ಮಾಡಿತು. ಸ್ಟ್ಯಾಂಡರ್ಡ್ ಮಾಡೆಲ್ ಜೊತೆಗೆ ಔಡಿ ತನ್ನ ಪೋರ್ಟ್‌ಫೋಲಿಯೊಗೆ ಹೆಚ್ಚಿನ ಕಾರ್ಯಕ್ಷಮತೆಯ ಆರ್‌ಎಸ್ ಇ-ಟ್ರಾನ್ ಜಿಟಿಯನ್ನು ಸೇರಿಸಿದೆ. ಇಲ್ಲಿ. e-tron GT ಮತ್ತು RS e-tron GTಗಳು 83.7 kWh ಮತ್ತು 93.4 kWh ಬ್ಯಾಟರಿ ಪ್ಯಾಕ್‌ಗಳ ಜತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಪ್ರತಿ ಆಕ್ಸಲ್‌ಗೆ ಒಂದರಂತೆ ಆಯ್ಕೆಯೊಂದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ ಇ-ಟ್ರಾನ್ GT 469 bhp ಅನ್ನು ಹೊಂದಿದೆ ಮತ್ತು ಟ್ಯಾಪ್‌ನಲ್ಲಿ 630 Nm ಅನ್ನು ಹೊಂದಿದೆ. ಪ್ರತಿ ಚಾರ್ಜ್‌ಗೆ (WLTP) 388 ಕಿ.ಮೀ. – 500 ಕಿ.ಮೀ ಮಧ್ಯೆ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಳ್ಳುತ್ತದೆ. ಮತ್ತೊಂದೆಡೆ, RS e-tron GT 590 bhp ಜೊತೆಗೆ 830 Nm ಪ್ರತಿ ಚಾರ್ಜ್‌ಗೆ (WLTP) 401 ಕಿ.ಮೀ. ಮತ್ತು 481 ಕಿ.ಮೀ. ಮಧ್ಯೆ ಮೈಲೇಜ್ ನೀಡುತ್ತದೆ.
5. ಬಿಎಂಡಬ್ಲ್ಯು iX
ಭಾರತದಲ್ಲಿ EV ಅನ್ನು ಪರಿಚಯಿಸಿದ ಮೊದಲ ಐಷಾರಾಮಿ ಬ್ರಾಂಡ್‌ಗಳಲ್ಲಿ ಒಂದು ಬಿಎಮ್ಡಬ್ಲ್ಯು. ಆದರೂ ಇದು ಪ್ಲಗ್-ಇನ್ ಹೈಬ್ರಿಡ್ ಆಗಿತ್ತು. ಆದರೆ ಜರ್ಮನ್ ಬ್ರ್ಯಾಂಡ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಈ ತಿಂಗಳು BMW iX ರೂಪದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ. ರೂ. 1.16 ಕೋಟಿಗೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದ್ದು, iX 71 kWh (76.6 kWh ಒಟ್ಟು ಶಕ್ತಿ) ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು 630 Nm ಪೀಕ್ ಟಾರ್ಕ್‌ನೊಂದಿಗೆ 322 bhp ಅನ್ನು ಅಭಿವೃದ್ಧಿಪಡಿಸಲು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಶಕ್ತಿಯನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ SUV WLTP ಸೈಕಲ್ ಪ್ರಕಾರ, ಒಂದೇ ಚಾರ್ಜ್‌ಗೆ 425 ಕಿ.ಮೀ. ಮೈಲೇಜ್ ನೀಡುತ್ತದೆ.
6. MG ZS EV 2021
MG ZS EV ಅನ್ನು 2020ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈ ವರ್ಷದ ಆರಂಭದಲ್ಲಿ ಸುಧಾರಿತ ಬ್ಯಾಟರಿ ಪ್ಯಾಕ್ ರೂಪದಲ್ಲಿ ಅಪ್ಡೇಟ್ ಪಡೆಯಿತು. ಇದು EV ಹೈಟೆಕ್ 44.5 kWh ಬ್ಯಾಟರಿಯನ್ನು ಪಡೆಯುತ್ತದೆ. 142 bhp ಮತ್ತು 353 Nm ಜತೆಗೆ ಬರುತ್ತದೆ. ಈ ಎಲೆಕ್ಟ್ರಿಕ್ SUV ಈಗ 419 ಕಿಮೀ/ಚಾರ್ಜ್ ನೀಡುವುದಾಗಿ ಹೇಳುತ್ತದೆ.
7. ಪೋರ್ಷೆ ಟೇಕನ್
ಪೋರ್ಷೆಯ ಮೊದಲ ಎಲೆಕ್ಟ್ರಿಕ್ ಕಾರು 2021ರ ನವೆಂಬರ್ನಲ್ಲಿ ಇಲ್ಲಿಗೆ ಬಂದಿತು ಮತ್ತು ಬೆಲೆ ರೂ. 1.5 ಕೋಟಿಯಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋರೂಂ, ಭಾರತ). 79.2 kWh ಮತ್ತು 93.4 kWh – 751 bhp ವರೆಗೆ ಉತ್ಪಾದಿಸಬಲ್ಲ ಹಾಗೂ 484 ಕಿ.ಮೀ/ಚಾರ್ಜ್‌ಗೆ ಮೈಲೇಜ್ ನೀಡುವ ಕಾರಿದು.
ಇದನ್ನೂ ಓದಿ: 2 ವರ್ಷಗಳಲ್ಲಿ ಪೆಟ್ರೋಲ್ ವಾಹನ- ಎಲೆಕ್ಟ್ರಿಕ್ ಕಾರುಗಳ ಬೆಲೆ ಒಂದೇ ಆಗಲಿದೆ; ಸಚಿವ ನಿತಿನ್ ಗಡ್ಕರಿ