ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ನೆನಪಿನ ಶಕ್ತಿ ತುಂಬಾ ಚೆನ್ನಾಗಿರಬೇಕು, ತುಂಬಾ ಎತ್ತರಕ್ಕೆ ಬೆಳೆಯಬೇಕು ಅಂದುಕೊಳ್ಳುವುದು ಸಹಜ. ಆದರೆ ಅದಕ್ಕಾಗಿ ಏನು ಮಾಡಬೇಕೆಂದು ಕೂಡ ಆಲೋಚಿಸಬೇಕಲ್ಲವೇ? ನಿಮ್ಮ ಮಕ್ಕಳು ಫ್ಲೆಕ್ಸಿಬಲ್ ಆಗಿ, ಸದಾ ಚಟುವಟಿಕೆಯಿಂದಿರಲು ಈ ಆಸನಗಳನ್ನು ಹೇಳಿಕೊಡಿ.
ಯೋಗಗಳಿಂದ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು
ತಾಡಾಸನ, ಸರ್ವಾಂಗಾಸನ, ಹಾಲಾಸನ ಹಾಗೂ ಇತರೆ ಆಸನಗಳಿಂದ ಮಕ್ಕಳ ತೂಕ ಹೆಚ್ಚಲಿದೆ.
ತಾಡಾಸನ: ತಾಡಾಸನವನ್ನು ನಿತ್ಯ 5-10 ನಿಮಿಷಗಳ ಕಾಲ ಮಾಡುವುದರಿಂದ ಮಕ್ಕಳ ಎತ್ತರ ಕ್ರಮೇಣವಾಗಿ ಹೆಚ್ಚಾಗಲಿದೆ.
ಸರ್ವಾಂಗಾಸನ: ಸರ್ವಾಂಗಾಸನ ಮಾಡುವುದರಿಂದ ಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ, ಈ ಆಸನವು ಇಡೀ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.
ಹಾಲಾಸನ: ರೈತ ಯಾವುದೇ ಬೆಳೆಯನ್ನು ಬೆಳೆಯಬೇಕಾದರೆ ಮೊದಲು ಭೂಮಿಯನ್ನು ಅಗೆದು ಅಲ್ಲಿ ಬೀಜವನ್ನು ನೆಡುವಂತೆಯೇ ಮಕ್ಕಳ ನೆನಪಿನ ಶಕ್ತಿ, ಮಕ್ಕಳ ಎತ್ತರ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಲಾಸನ ಮಾಡಬೇಕು.
ಚಕ್ರಾಸನ: ಈ ಆಸನ ಮಾಡುವಾಗ ನೀವು ಚಕ್ರದಂತಹ ಭಂಗಿಯಲ್ಲಿರಬೇಕು ಆಗ ನಿಮ್ಮ ದೇಹವು ಫ್ಲೆಕ್ಸಿಬಲ್ ಆಗಿ ನೀವು ಹೇಳಿದಂತೆ ಕೇಳುತ್ತದೆ.
ಪಶ್ಚಿಮೋತ್ತಾಸನ: ಈ ಆಸನದಿಂದ ಕಿಡ್ನಿ, ಸ್ನಾಯು ಸೆಳೆತ ಸೇರಿದಂತೆ ಅನೇಕ ಸಮಸ್ಯೆಗಳು ದೂರವಾಗುತ್ತದೆ
ಶಿರ್ಸಾಸನ: ಈ ಆಸನ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಸೂತ್ರವಾಗಿ ಆಗುತ್ತದೆ
ಯೋಗವು ಮಕ್ಕಳನ್ನು ಮತ್ತಷ್ಟು ಚುರುಕುಗೊಳಿಸುವುದು: ವೃಕ್ಷಾಸನ, ಶಿರ್ಸಾಸನಗಳು ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತವೆ.
ಯೋಗದಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು: ನಿತ್ಯ ಐದು ನಿಮಿಷಗಳ ಕಾಲ ಅನುಲೋಮ ವಿಲೋಮ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗಲಿದೆ.
ಈ ಪ್ರಾಣಾಯಾಮದಿಂದ ನಿಮ್ಮ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬಹುದು
-ಕಪಾಲಭಾತಿ
-ಭಸ್ತ್ರಿಕಾ
-ಭ್ರಾಮರಿ
-ಅನುಲೋಮ ವಿಲೋಮ
-ಉಜ್ಜಯಿ
-ಶೀತಕರಿ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ