ಕರ್ನಾಟಕದಲ್ಲಿ ಈವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವ ಡಾ.ಸುಧಾಕರ್

|

Updated on: May 11, 2021 | 9:15 PM

Covid vaccination In Karnataka: ಲಸಿಕೆ ಖರೀದಿ ಮಾಡಲು ರಾಜ್ಯ ಸರ್ಕಾರದಿಂದ ಜಾಗತಿಕ ಟೆಂಡರ್ ಕರೆಯುವ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕರ್ನಾಟಕದಲ್ಲಿ ಈವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವ ಡಾ.ಸುಧಾಕರ್
ಡಾ.ಕೆ. ಸುಧಾಕರ್​
Follow us on

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,07,59,572 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. 18 ರಿಂದ44 ವರ್ಷದೊಳಗಿನ 41,803 ಜನರಿಗೆ ಲಸಿಕೆ ಹಾಕಲಾಗಿದೆ. ಕರ್ನಾಟಕಕ್ಕೆ ಅಂದಾಜು 6.52 ಕೋಟಿ ಲಸಿಕೆ ಅಗತ್ಯವಿದೆ. ಹೀಗಾಗಿ ಸದ್ಯ ಕೇಂದ್ರ ಸರ್ಕಾರದ ಬಳಿ 2 ಕೋಟಿ ಕೊವಿಶೀಲ್ಡ್​, 1 ಕೋಟಿ ಕೊವ್ಯಾಕ್ಸಿನ್​ ಡೋಸ್​ ಲಸಿಕೆ ಒದಗಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಸೇರಮ್ ಸಂಸ್ಥೆಯಿಂದ ಕೊವಿಶೀಲ್ಡ್​ ಲಸಿಕೆ ಪಡೆಯಲಾಗಿದೆ. ಭಾರತ್​ ಬಯೋಟೆಕ್​ ಸಂಸ್ಥೆ ಇನ್ನೂ ಕೊವ್ಯಾಕ್ಸಿನ್​ ಪೂರೈಸಿಲ್ಲ. ಮೇ 3ನೇ ವಾರದಲ್ಲಿ ಕರ್ನಾಟಕಕ್ಕೆ ಮತ್ತಷ್ಟು ಲಸಿಕೆ ಸಿಗಲಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದರು.

ಲಸಿಕೆ ಖರೀದಿ ಮಾಡಲು ರಾಜ್ಯ ಸರ್ಕಾರದಿಂದ ಜಾಗತಿಕ ಟೆಂಡರ್ ಕರೆಯುವ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಇಂದಷ್ಟೇ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ವಿಷಯದ ಕುರಿತು ತಮಗೆ ಮಾಹಿತಿಯೇ ಇಲ್ಲ ಎಂದು ಡಾ.ಸುಧಾಕರ್ ತಿಳಿಸಿದರು.

ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯುವ ಕುರಿತು ನನ್ನ ಜೊತೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಚರ್ಚೆ ನಡೆಸಿಲ್ಲ. ಇದರ ಬಗ್ಗೆ ಅವರ ಬಳಿ ಮಾಹಿತಿ ಪಡೆದು ನಂತರ ಮಾತನಾಡುತ್ತೇನ. ರಾಜ್ಯದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟವರಿಗೆ ನೀಡಲು 3.5 ಲಕ್ಷ ಡೋಸ್ ಲಸಿಕೆ ಸಂಗ್ರಹವಿದೆ. 45 ವರ್ಷ ಮೇಲ್ಪಟ್ಟವರಿಗೆ ನೀಡಲು 6.5 ಲಕ್ಷ ಡೋಸ್ ಲಸಿಕೆ ದಾಸ್ತಾನಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಲಸಿಕೆ ಖರೀದಿಗೆ ಜಾಗತಿಕ ಟೆಂಡರ್​ ಕರೆಯಲು ನಿರ್ಧಾರ.. ರೆಮ್​ಡೆಸಿವಿರ್​ ಪೂರೈಕೆ ಮಾಡದಿದ್ದರೆ ಕಠಿಣ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ್​

ಜನರ ಮೇಲೆ ಲಾಠಿ ಎತ್ತಬೇಡಿ: ಕರ್ನಾಟಕ ಹೈಕೋರ್ಟ್

Covid-19 Karnataka Update: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ; ಇತರ ಜಿಲ್ಲೆಗಳಲ್ಲಿ ಹೆಚ್ಚಳ

910759572 people got vaccinated in Karnataka says state health minister Dr K Sudhakar)