Covid-19 Karnataka Update: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ; ಇತರ ಜಿಲ್ಲೆಗಳಲ್ಲಿ ಹೆಚ್ಚಳ
Bengaluru CoronaVirus Update: ಕಳೆದ ಎರಡು ದಿನಗಳ ಹಿಂದಿನ ಕರ್ನಾಟಕದ ಕೊವಿಡ್ ಸೋಂಕಿತರ ಅಂಕಿಅಂಶಗಳು ಅರ್ಧ ಲಕ್ಷದ ಆಸುಪಾಸಿನಲ್ಲಿದ್ದವು. ಆದರೆ ಕಳೆದ ಎರಡು ದಿನಗಳಿಂದ ಈ ಸಂಖ್ಯೆ ಸುಮಾರು ಹತ್ತು ಸಾವಿರದಷ್ಟು ಕುಸಿದಿದ್ದು, 40ಸಾವಿರದ ಗಡಿ ದಾಟಿಲ್ಲ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 39,510 ಜನರಿಗೆ ಕೊವಿಡ್ ಸೋಂಕು ತಗುಲಿದೆ. 480 ಜನರು ನಿಧನರಾಗಿದ್ದಾರೆ. ಈ ಮೂಲಕ ಸತತ ಎರಡನೇ ದಿನ ರಾಜ್ಯದಲ್ಲಿ 40 ಸಾವಿರಕ್ಕಿಂತ ಕೊಂಚ ಕಡಿಮೆ ಸೋಂಕಿತರು ಪತ್ತೆಯಾದಂತಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 15,879 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದ್ದು, 259 ಜನರು ಅಸುನೀಗಿದ್ದಾರೆ. ರಾಜಧಾನಿಯಲ್ಲಿ ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆಯಲ್ಲಿ ನಿನ್ನೆಗಿಂತ ಬೆರಳೆಣಿಕೆಯಷ್ಟು ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 22,584 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ. ಇಂದು ಪತ್ತೆಯಾದ ಸೊಂಕಿತರನ್ನೂ ಸೇರಿ ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 20,13,193ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 14,05,869 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 480 ಜನರ ಸಾವನ್ನಪ್ಪಿದ್ದು ಇದುವರೆಗೆ ಕೊರೊನಾದಿಂದ 19,852 ಜನರ ಸಾವನ್ನಪ್ಪಿದ್ದಾರೆ. 5,87,452 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಒಂದರಲ್ಲೇ 362696 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾಕ್ಡೌನ್ ಪರಿಣಾಮ? ಕಳೆದ ಎರಡು ದಿನಗಳ ಹಿಂದಿನ ಕರ್ನಾಟಕದ ಕೊವಿಡ್ ಸೋಂಕಿತರ ಅಂಕಿಅಂಶಗಳು ಅರ್ಧ ಲಕ್ಷದ ಆಸುಪಾಸಿನಲ್ಲಿದ್ದವು. ಆದರೆ ಕಳೆದ ಎರಡು ದಿನಗಳಿಂದ ಈ ಸಂಖ್ಯೆ ಸುಮಾರು ಹತ್ತು ಸಾವಿರದಷ್ಟು ಕುಸಿದಿದ್ದು, 40ಸಾವಿರದ ಗಡಿ ದಾಟಿಲ್ಲ. ನಿನ್ನೆಗಿಂತ ಮೃತರ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಒಟ್ಟಾರೆ ಹಿಂದಿಗಿಂತ ಪ್ರತಿದಿನ ನಿಧನರಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಕಳವಳದ ವಿಷಯವಾಗಿದೆ.
ಆರೋಗ್ಯ ಇಲಾಖೆ ನಿನ್ನೆ ನೀಡಿದ್ದ ಮಾಹಿತಿ ಪ್ರಕಾರ ನಿನ್ನೆ 39,305 ಸೋಂಕಿತರು ಇಡೀ ರಾಜ್ಯದಲ್ಲಿ ಪತ್ತೆಯಾಗಿದ್ದರು. ಬೆಂಗಳೂರಿನಲ್ಲಿ 16,747 ಸೋಂಕಿತರು ಪತ್ತೆಯಾಗಿದ್ದರು. ಈವರೆಗೆ 50 ಸಾವಿರದ ಆಸುಪಾಸಿನಲ್ಲಿ ಈ ಅಂಕಿಅಂಶಗಳು ಇರುತ್ತಿದ್ದವು. ನಿನ್ನೆ ಬೆಂಗಳೂರಿನಲ್ಲಿ ಕಡಿಮೆ ಸೋಂಕಿತರು ಪತ್ತೆಯಾಗಲು ಲಾಕ್ಡೌನ್ ವಿಧಿಸಿದ್ದರಿಂದ ಜನರು ಸ್ವಂತ ಊರುಗಳಿಗೆ ಹಿಂತಿರುಗಿದ್ದೇ ಕಾರಣ ಎಂದು ಹೇಳಲಾಗಿತ್ತು. ಈ ವಾದಕ್ಕೆ ಪುಷ್ಠಿ ಕೊಡುವಂತೆ ನಿನ್ನೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ 29 ಜಿಲ್ಲೆಗಳಿಂದ ಪತ್ತೆಯಾದ ಸೋಂಕಿತರ ಸಂಖ್ಯೆ 29 ಸಾವಿರದ ಆಸುಪಾಸು ಮುಟ್ಟಿತ್ತು.
ಇಂದಿನ ಅಂಕಿಅಂಶಗಳನ್ನು ಗಮನಿಸಿದರೂ ಈ ಶಂಕೆ ಇನ್ನಷ್ಟು ಬಲಗೊಳ್ಳುತ್ತದೆ. ನಿನ್ನೆಯಿಂದ (ಏಪ್ರಿಲ್ 10) ಜಾರಿಯಾಗಿರುವ ಕರ್ನಾಟಕ ಲಾಕ್ಡೌನ್ಗೂ ಮುನ್ನವೆ ಸಾವಿರಾರು ಜನರು ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಸ್ವಂತ ಊರುಗಳಿಗೆ ಹಿಂತಿರುಗಿದ್ದರು. ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಒಟ್ಟು 39,510 ಸೋಂಕಿತರಲ್ಲಿ 15,879 ಸೋಂಕಿತರು ಮಾತ್ರ ಬೆಂಗಳೂರು ನಗರ ಜಿಲ್ಲೆಯವರು. ಇನ್ನುಳಿದ 23,631 ಸೋಂಕಿತರು ರಾಜ್ಯದ ಇತರ 29 ಜಿಲ್ಲೆಯವರು ಎಂಬುದು ಗಂಭೀರ ವಿಚಾರ. ಅಂದರೆ ಜಿಲ್ಲೆಗಳಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಏರುತ್ತಿದೆ ಎಂಬುದು ಸ್ಪಷ್ಟ.
ಕಳೆದ 24 ಗಂಟೆಗಳಲ್ಲಿ 11,579 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗಿದೆ. 1,04,659 ಆರ್ಟಿ ಪಿಸಿಆರ್ ಮತ್ತು ಇತರ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದಿನ 11/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/2UvHexodB4 @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/mH6ttMvmXl
— K’taka Health Dept (@DHFWKA) May 11, 2021
ಜಿಲ್ಲಾವಾರು ಸೋಂಕಿತರ ವಿವರ ಇಂತಿದೆ
ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108, ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1084, ವಿಜಯಪುರ 485, ಯಾದಗಿರಿ ಜಿಲ್ಲೆಯಲ್ಲಿ 426 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲಾವಾರು ಮೃತರ ವಿವರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 480 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ 259, ಬಳ್ಳಾರಿ 28, ಉತ್ತರ ಕನ್ನಡ 18, ಹಾಸನ, ತುಮಕೂರು 16, ಬೆಂಗಳೂರು ಗ್ರಾಮಾಂತರ ಜಿಲ್ಲೆ 14, ಮೈಸೂರು, ಚಾಮರಾಜನಗರ 12, ಶಿವಮೊಗ್ಗ 10, ವಿಜಯಪುರ 8, ಬೀದರ್, ಕೊಡಗು, ಯಾದಗಿರಿ 7, ಚಿಕ್ಕಬಳ್ಳಾಪುರ, ಧಾರವಾಡ 6, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾವೇರಿ, ಕಲಬುರಗಿಗಳಲ್ಲಿ ಐವರು, ಬಾಗಲಕೋಟೆ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಮೂವರು, ಗದಗ, ಕೋಲಾರ, ಕೊಪ್ಪಳ, ಮಂಡ್ಯ, ಉಡುಪಿ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ತಲಾ ಮೂವರು, ಬೆಳಗಾವಿಯಲ್ಲಿ ಇಬ್ಬರು ನಿಧನರಾಗಿದ್ದಾರೆ.
ಇದನ್ನೂ ಓದಿ: ಜನರ ಮೇಲೆ ಲಾಠಿ ಎತ್ತಬೇಡಿ: ಕರ್ನಾಟಕ ಹೈಕೋರ್ಟ್
ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ
(Karnataka Covid update 39510 new cases and 480 death in last 24 hours)
Published On - 7:42 pm, Tue, 11 May 21