ಪರೀಕ್ಷೆ ಮಾಡಿಸದಿದ್ರೂ ಪಾಸಿಟಿವ್ ಇದೆ ಎಂದು ಬಂತು ಮೆಸೇಜ್; ಹೆಡ್ ಕಾನ್ಸ್‌ಟೇಬಲ್ ಪತ್ನಿ ತಬ್ಬಿಬ್ಬು

ಪರೀಕ್ಷೆ ಮಾಡಿಸದಿದ್ರೂ ಪಾಸಿಟಿವ್ ಇದೆ ಎಂದು ಬಂತು ಮೆಸೇಜ್; ಹೆಡ್ ಕಾನ್ಸ್‌ಟೇಬಲ್ ಪತ್ನಿ ತಬ್ಬಿಬ್ಬು
ಪ್ರಾತಿನಿಧಿಕ ಚಿತ್ರ

‘ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಬೆಡ್ ಬುಕ್ ಆಗಿದೆ’. ಇದೀಗ ಆ್ಯಂಬುಲೆನ್ಸ್ ಬರುತ್ತೆ ಎಂದು ಮೆಸೇಜ್ ಕಳಿಸಲಾಗಿತ್ತು.

guruganesh bhat

|

May 11, 2021 | 6:48 PM

ಬೆಂಗಳೂರು: ಕೊವಿಡ್ ಪರೀಕ್ಷೆಗೆ ಸಂಬಂಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಯಡವಟ್ಟೊಂದನ್ನು ಮಾಡಿದೆ. ಕೊವಿಡ್ ಟೆಸ್ಟ್ ಮಾಡಿಸದಿದ್ದರೂ ಪಾಸಿಟಿವ್ ಎಂದು ನಗರದ ಹೆಡ್ ಕಾನ್ಸ್‌ಟೇಬಲ್ ಓರ್ವರ ಪತ್ನಿಗೆ ಮೆಸೇಜ್ ಕಳುಹಿಸಲಾಗಿದೆ. ಮೆಸೇಜ್ ನೋಡಿ ಮಹಿಳೆ ತಬ್ಬಿಬ್ಬಾಗಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಓರ್ವರ ಪತ್ನಿಗೆ ಬಿಬಿಎಂಪಿ ಕಳಿಸಿದ ಮೆಸೇಜ್ ತಬ್ಬಿಬ್ಬುಗೊಳಿಸಿದೆ. ಅವರು ಕೊವಿಡ್ ಪರೀಕ್ಷೆ ಮಾಡಿಸಿಲ್ಲ. ಆದರೂ ‘ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ’ ‘ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಬೆಡ್ ಬುಕ್ ಆಗಿದೆ’. ಇದೀಗ ಆ್ಯಂಬುಲೆನ್ಸ್ ಬರುತ್ತೆ ಎಂದು ಮೆಸೇಜ್ ಕಳಿಸಲಾಗಿತ್ತು. ಆ್ಯಂಬುಲೆನ್ಸ್ ಚಾಲಕನ ನಂಬರ್ ಸಹ ಮೆಸೇಜ್​ನಲ್ಲಿತ್ತು. ಆದಷ್ಟು ಬೇಗ ಸಿದ್ಧರಾಗುವಂತೆಯೂ ಮೆಸೇಜ್ ಕಳುಹಿಸಲಾಗಿತ್ತು.

ಇದನ್ನೂ ಓದಿ: ಜನರ ಮೇಲೆ ಲಾಠಿ ಎತ್ತಬೇಡಿ: ಕರ್ನಾಟಕ ಹೈಕೋರ್ಟ್

ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ

(A bengaluru women not appeared for covid test but she received message as she is tested positive)

Follow us on

Related Stories

Most Read Stories

Click on your DTH Provider to Add TV9 Kannada