ಕೋರಮಂಗಲದಲ್ಲಿ ನಿರ್ಮಾಣವಾದ ತಾತ್ಕಾಲಿಕ ಚಿತಾಗಾರಕ್ಕೆ ಸ್ಥಳೀಯರಿಂದ ಆಕ್ರೋಶ

ಚಿತಗಾರ ನಿರ್ಮಿಸಲು ಹೊರಟಿರುವ ಜಾಗಕ್ಕೂ ಹಾಗೂ ರೈತರ ಜಮೀನುಗಳಿಗೆ ಕೆಲವೇ ಅಂತರವಿದೆ. ಹೀಗಾಗಿ ಸ್ಥಳಕ್ಕೆ ಬಂದ ರೈತರು ಇಲ್ಲಿ ಶವಗಳನ್ನ ಸುಡುತ್ತಿದ್ದರೆ ನಾವು ತೋಟಗಳಲ್ಲಿ ಕೆಲಸ ಮಾಡೋದಾದರು ಹೇಗೆ ಎಂದು ಅಧಿಕಾರಿಗಳ ಜತೆಯಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ.

ಕೋರಮಂಗಲದಲ್ಲಿ ನಿರ್ಮಾಣವಾದ ತಾತ್ಕಾಲಿಕ ಚಿತಾಗಾರಕ್ಕೆ ಸ್ಥಳೀಯರಿಂದ ಆಕ್ರೋಶ
ಸಂಗ್ರಹ ಚಿತ್ರ
Follow us
preethi shettigar
|

Updated on: May 11, 2021 | 6:09 PM

ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತಪಟ್ಟವರ ಶವ ಸಂಸ್ಕಾರ ಮಾಡಲು ಕುಟುಂಬಸ್ಥರು ಪರದಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಸುತ್ತಮುತ್ತ ತಾತ್ಕಾಲಿಕ ಚಿತಾಗಾರಗಳನ್ನು ನಿರ್ಮಾಣ ಮಾಡುತ್ತಿದ್ದು, ಅಂತ್ಯ ಸಂಸ್ಕಾರಕ್ಕೆ ಪರದಾಡುವ ದುಸ್ಥಿತಿಯನ್ನು ನಿವಾರಣೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತವಾಗಿದೆ.

ಕೊರೊನಾದಿಂದ ಮೃತಪಟ್ಟವರ ಮೃತದೇಹಗಳನ್ನ ಸುಡಲು ಸಿಲಿಕಾನ್ ಸಿಟಿಯ ಚಿತಗಾರದಲ್ಲಿ ಹೆಣಗಳ ಜೊತೆ ಸಂಬಂಧೀಕರು ಗಂಟೆ ಗಟ್ಟಲೆ ಕ್ಯೂ ನಿಲ್ಲುತ್ತಿರುವ ದೃಶ್ಯಗಳು ನೋಡಗರ ಮನಕಲುಕುತ್ತಿದೆ. ಹೀಗಾಗಿ ಚಿತಾಗರಗಳ ಮುಂದೆ ಸಂಬಂಧಿಕರು ಪರದಾಡುವುದು ಬೇಡ ಎಂದು ಸರ್ಕಾರ ಇದೀಗ ಮೃತದೇಹಗಳ ಶವಸಂಸ್ಕಾರ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಾತ್ಕಲಿಕವಾಗಿ ಚಿತಗಾರಗಳನ್ನ ನಿರ್ಮಿಸಲು ಮುಂದಾಗಿದೆ.

ಈಗಾಗಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲು ತಾತ್ಕಲಿಕವಾಗಿ ಚಿತಾಗಾರ ನಿರ್ಮಿಸಲಾಗಿದ್ದು, ನಾಳೆಯಿಂದ ಚಿತಾಗಾರ ಕಾರ್ಯಾರಂಭವಾಗಲಿದೆ. ತಾಲೂಕಿನ ಕೋರಮಂಗಲ ಕೆರೆಯ ಹಂಚಿನ ಸರ್ಕಾರಿ ಜಾಗದಲ್ಲಿ ಜಿಲ್ಲಾಡಳಿತ ಹತ್ತು ಮೃತದೇಹಗಳನ್ನ ಒಂದೆ ಸಲಿ ಸುಡಲು ಚಿತಗಾರ ನಿರ್ಮಿಸಿದೆ. ಹೀಗಾಗಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ. ಇನ್ನೂ ಭೇಟಿ ನೀಡಿ ಮಾತನಾಡಿದ ಸಚಿವ ಆರ್​. ಅಶೋಕ್ ದೇವನಹಳ್ಳಿಯ ಆಕಾಶ ಆಸ್ಪತ್ರೆ ಸೇರಿದಂತೆ ತಾಲೂಕಿನ ಕೋವಿಡ್ ಆಸ್ಪತ್ರೆಗಳಲ್ಲಿ ಮೃತಪಟ್ಟವರನ್ನ ಶವಸಂಸ್ಕಾರ ಮಾಡಲು ಇಲ್ಲಿ ತಾತ್ಕಲಿಕವಾಗಿ ಚಿತಗಾರ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಮೃತದೇಹಗಳನ್ನ ತಂದು ಸಂಸ್ಕಾರ ಮಾಡಲು ನಾಳೆಯಿಂದಲೇ ಉಚಿತ ಆಂಬ್ಯುಲನ್ಸ್ ಸೇವೆಗೆ ಚಾಲನೆಯನ್ನ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಸಚಿವರು ಚಿತಗಾರ ವೀಕ್ಷಣೆ ಮಾಡಿ ಹೊರಡುತ್ತಿದ್ದಂತೆ ಅಕ್ಕಪಕ್ಕದ ಜಮೀನಿನ ಮಾಲೀಕರು ಚಿತಾಗಾರ ನಿರ್ಮಾಣ ಮಾಡೋದಿಕ್ಕೆ ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ. ಅಂದಹಾಗೆ ಚಿತಗಾರ ನಿರ್ಮಿಸಲು ಹೊರಟಿರುವ ಜಾಗಕ್ಕೂ ಹಾಗೂ ರೈತರ ಜಮೀನುಗಳಿಗೆ ಕೆಲವೇ ಅಂತರವಿದೆ. ಹೀಗಾಗಿ ಸ್ಥಳಕ್ಕೆ ಬಂದ ರೈತರು ಇಲ್ಲಿ ಶವಗಳನ್ನ ಸುಡುತ್ತಿದ್ದರೆ ನಾವು ತೋಟಗಳಲ್ಲಿ ಕೆಲಸ ಮಾಡೋದಾದರು ಹೇಗೆ ಎಂದು ಅಧಿಕಾರಿಗಳ ಜತೆಯಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ.

ಯಾವುದೇ ಕಾರಣಕ್ಕೂ ಇಲ್ಲಿ ಚಿತಗಾರ ನಿರ್ಮಾಣ ಮಾಡದಂತೆ ರೈತರು ಒತ್ತಾಯಿಸಿದ್ದು, ಬೆಡ್​ಗಳು ಸಿಗುತ್ತಿಲ್ಲ ಅಂತಹ ಕಾರ್ಯಗಳನ್ನ ಮಾಡೋದು ಬಿಟ್ಟು ದುಡ್ಡು ಹೊಡೆಯೋದರಲ್ಲಿ ನಿರತರಾಗಿ ನಮ್ಮಂತ ರೈತರಿಗೂ ಕಂಟಕವಾಗಲು ಹೊರಟಿದ್ದಾರೆ ಎಂದು ಸ್ಥಳೀಯರಾದ ಆನಂದ್ ಹೇಳಿದ್ದಾರೆ.

ಒಟ್ಟಾರೆ ಕೊರೊನಾ ಮೃತದೇಹಗಳನ್ನ ಸುಡಲು ತಾತ್ಕಲಿಕವಾಗಿ ಚಿತಗಾರ ನಿರ್ಮಾಣ ಮಾಡಲಾಗಿದ್ದು, ನಾಳೆಯಿಂದ ಇದೇ ಜಾಗದಲ್ಲಿ ಕೊರೊನಾ ಮೃತದೇಹಗಳಿಗೆ ಮುಕ್ತಿ ಕೊಡಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರ ನಡುವೆ ಚಿತಗಾರದ ಅಕ್ಕಪಕ್ಕದ ಹಳ್ಳಿ ಜನರು ಕೊರೊನಾ ಶವಗಳನ್ನ ಸುಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಅಂತ್ಯಸಂಸ್ಕಾರಕ್ಕೆ ಉಚಿತ ಚಿತಾಗಾರ; ಕೊರೊನಾ ಸಂಕಷ್ಟಕ್ಕೆ ಮಿಡಿದ ದೇವಾಂಗ ಮಂಡಳಿ

HRCT ಮತ್ತು CT ಸ್ಕ್ಯಾನ್​ಗೆ ರಾಜ್ಯ ಸರ್ಕಾರದಿಂದ ದರ ನಿಗದಿ; ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿತಾಗಾರ ಸಮನ್ವಯಾಧಿಕಾರಿ ನೇಮಕ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ