205 ಸಿಬ್ಬಂದಿ ಪೈಕಿ ಮುಸ್ಲಿಮರ ಹೆಸರು ಮಾತ್ರ ಏಕೆ ಓದಬೇಕಿತ್ತು, ಕೋಮು ವೈರಸ್ ಇವರಲ್ಲಿ ಸೇರಿಬಿಟ್ಟಿದೆ: ಸಿದ್ದರಾಮಯ್ಯ
205 ಸಿಬ್ಬಂದಿ ಪೈಕಿ ಮುಸ್ಲಿಮರ ಹೆಸರು ಮಾತ್ರ ಏಕೆ ಓದಬೇಕಿತ್ತು. ಇದರ ಹಿಂದೆ ಕೋಮು ದ್ವೇಶದ ಉದ್ದೇಶ ಇದೆ ಎಂದು ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ.
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಮಾಡಿದ ಕೆಲಸಕ್ಕೆ ತಕರಾರಿಲ್ಲ. ಆದರೆ ಇದರ ಹಿಂದೆ ಒಂದು ಸದುದ್ದೇಶವಿರಬೇಕಿತ್ತು. ಆದರೆ ಸಂಸದ ತೇಜಸ್ವಿ ಸೂರ್ಯ ದುರುದ್ದೇಶ ಹೊಂದಿದ್ದಾರೆ ಎಂದು ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದ ವಿಚಾರವಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬೆಡ್‌ಗಳನ್ನು ಕೊಡಿಸುತ್ತಿದ್ದರು. ಇದನ್ನು ತಡೆಯಲು ಯತ್ನಿಸಿದ ಅಧಿಕಾರಿ ಮೇಲೆ ಹಲ್ಲೆ ಯತ್ನ ನಡೆದಿದೆ. ಸತೀಶ್ ರೆಡ್ಡಿ ಬೆಂಬಲಿಗರು ಹಲ್ಲೆ ಮಾಡಲು ಹೋಗಿದ್ದರು. ಅದನ್ನು ಮರೆಮಾಚುವುದಕ್ಕಾಗಿ ಈ ಕೆಲಸವನ್ನು ಮಾಡಿದ್ದಾರೆ. ಕೋಮು ವೈರಸ್ ಇವರಲ್ಲಿ ಸೇರಿಬಿಟ್ಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 205 ಸಿಬ್ಬಂದಿ ಪೈಕಿ ಮುಸ್ಲಿಮರ ಹೆಸರು ಮಾತ್ರ ಏಕೆ ಓದಬೇಕಿತ್ತು. ಇದರ ಹಿಂದೆ ಕೋಮು ದ್ವೇಶದ ಉದ್ದೇಶ ಇದೆ ಎಂದು ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ.
ಲಸಿಕೆ ಇಲ್ಲದೆ ಲಸಿಕೆ ಅಭಿಯಾನ ಲಸಿಕೆ ಇಲ್ಲದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸವನ್ನು ಮಾಡಬಾರದು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡಿಕೆ ವಿಚಾರವಾಗಿ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸವಿತಾ ಸಮಾಜದವರು, ಮಡಿವಾಳ ಸೇರಿದಂತೆ ಬಡವರಿಗಾಗಿ ಪ್ಯಾಕೇಜ್ ಘೋಷಿಸಬೇಕು. ನಿಮ್ಮ ಖಜಾನೆ ಖಾಲಿಯಾಗಿದ್ದರೆ, ಸಾಲ ಮಾಡಿ ಕೊಡಿ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಕೇಳಿದ್ದಾರೆ.
ಕೊರೊನಾ ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯ ಮಾಡದೆ ಜನರಿಗೆ ಲಸಿಕೆ ಹಾಕಬೇಕು. ಜನರನ್ನ ಕಾಪಾಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಕೆಲ ತಿಂಗಳಲ್ಲಿ 3ನೇ ಅಲೆ ಬರುತ್ತೆಂದು ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರಿಗೂ ಕೊವಿಡ್ ಲಸಿಕೆ ಹಾಕಿಸಬೇಕು. ಕೇಂದ್ರ ಸರ್ಕಾರದಿಂದಾದ್ರೂ ಕೊವಿಡ್ ಲಸಿಕೆ ಪಡೆಯಿರಿ. ಇಲ್ಲದಿದ್ದರೆ ರಾಜ್ಯದಲ್ಲೇ ಲಸಿಕೆ ಉತ್ಪಾದಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ಇದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತೇವೆ ಎಂದಿದ್ದರು. ಆದರೆ ಈಗ ರಾಜ್ಯದಲ್ಲಿ ಅವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಮೊದಲ ಡೋಸ್ ಹಾಕಿಸಿಕೊಂಡ್ರೆ 2ನೇ ಡೋಸ್ ನೀಡಬೇಕು. 2ನೇ ಡೋಸ್ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯರು ಕೇವಲ ಕೊರೊನಾದಿಂದ ಸಾಯುತ್ತಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
ಲಸಿಕೆ ಇಲ್ಲದೆ ಲಸಿಕಾ ಅಭಿಯಾನಕ್ಕೆ ಚಾಲನೆ, ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸ ಮಾಡಬಾರದು: ಸಿದ್ದರಾಮಯ್ಯ
Published On - 5:09 pm, Tue, 11 May 21