ಲಸಿಕೆ ಇಲ್ಲದೆ ಲಸಿಕಾ ಅಭಿಯಾನಕ್ಕೆ ಚಾಲನೆ, ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸ ಮಾಡಬಾರದು: ಸಿದ್ದರಾಮಯ್ಯ

ಲಸಿಕೆ ಇಲ್ಲದೆ ಲಸಿಕಾ ಅಭಿಯಾನಕ್ಕೆ ಚಾಲನೆ, ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸ ಮಾಡಬಾರದು: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಲಸಿಕೆ ನೀಡುವುದು ಸೂಕ್ತವೆಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ.

TV9kannada Web Team

| Edited By: ganapathi bhat

Aug 23, 2021 | 12:38 PM

ಬೆಂಗಳೂರು: ಲಸಿಕೆ ಇಲ್ಲದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಸರ್ಕಾರ ಭ್ರಮೆ ಹುಟ್ಟಿಸುವ ಕೆಲಸವನ್ನು ಮಾಡಬಾರದು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡಿಕೆ ವಿಚಾರವಾಗಿ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸವಿತಾ ಸಮಾಜದವರು, ಮಡಿವಾಳ ಸೇರಿದಂತೆ ಬಡವರಿಗಾಗಿ ಪ್ಯಾಕೇಜ್ ಘೋಷಿಸಬೇಕು. ನಿಮ್ಮ ಖಜಾನೆ ಖಾಲಿಯಾಗಿದ್ದರೆ, ಸಾಲ ಮಾಡಿ ಕೊಡಿ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಕೇಳಿದ್ದಾರೆ.

ಕೊರೊನಾ ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯ ಮಾಡದೆ ಜನರಿಗೆ ಲಸಿಕೆ ಹಾಕಬೇಕು. ಜನರನ್ನ ಕಾಪಾಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಕೆಲ ತಿಂಗಳಲ್ಲಿ 3ನೇ ಅಲೆ ಬರುತ್ತೆಂದು ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರಿಗೂ ಕೊವಿಡ್ ಲಸಿಕೆ ಹಾಕಿಸಬೇಕು. ಕೇಂದ್ರ ಸರ್ಕಾರದಿಂದಾದ್ರೂ ಕೊವಿಡ್ ಲಸಿಕೆ ಪಡೆಯಿರಿ. ಇಲ್ಲದಿದ್ದರೆ ರಾಜ್ಯದಲ್ಲೇ ಲಸಿಕೆ​ ಉತ್ಪಾದಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಲಸಿಕೆ ಉತ್ಪಾದನೆ ಬಗ್ಗೆ ವರದಿ ಇದೆ. ರಾಜ್ಯ ಸರ್ಕಾರದ ಅಧೀನದ ಕಂಪನಿಗಳಲ್ಲಿ ಉತ್ಪಾದನೆ ಮಾಡಬಹುದು. ಕರ್ನಾಟಕವೂ ಇದೇ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿ ಎಂದು ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವ ವಿಚಾರದ ಬಗ್ಗೆ ಮಾತನಾಡಿ, ಅವರು ಈಗ ನೋಂದಾಯಿಸಿಕೊಂಡು ಲಸಿಕೆ ಪಡೆಯಬೇಕಾಗಿದೆ. ಈ ಪ್ರಕ್ರಿಯೆಯಿಂದ ಕಾರ್ಮಿಕರು, ಬಡವರು ಲಸಿಕೆಯಿಂದ ವಂಚಿತರಾಗುತ್ತಾರೆ. ಕೊರೊನಾ ಲಸಿಕೆ ಪಡೆಯದೆ ವಂಚಿತರಾಗುತ್ತಾರೆ. ಹೀಗಾಗಿ ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಲಸಿಕೆ ನೀಡುವುದು ಸೂಕ್ತವೆಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ಇದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತೇವೆ ಎಂದಿದ್ದರು. ಆದರೆ ಈಗ ರಾಜ್ಯದಲ್ಲಿ ಅವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಮೊದಲ ಡೋಸ್ ಹಾಕಿಸಿಕೊಂಡ್ರೆ 2ನೇ ಡೋಸ್ ನೀಡಬೇಕು. 2ನೇ ಡೋಸ್ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಮೀರ್ ಅಹ್ಮದ್ ವೈದ್ಯಕೀಯ ಕಾರ್ಯಕರ್ತರಿಗೆ ಆಹಾರ ಕಿಟ್ ಮತ್ತು 5 ಸಾವಿರ ಗೌರವಧನ ನೀಡುತ್ತಿರುವುದನ್ನು ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆ; ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್!

ಫೈಜರ್ ಕೊವಿಡ್​ ಲಸಿಕೆಯ​ನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ

Follow us on

Related Stories

Most Read Stories

Click on your DTH Provider to Add TV9 Kannada