ಫೈಜರ್ ಕೊವಿಡ್​ ಲಸಿಕೆಯ​ನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ

ಫೈಜರ್ ಕೊವಿಡ್​ ಲಸಿಕೆಯ​ನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ
ಫೈಜರ್ ಕೊವಿಡ್​ ಲಸಿಕೆ

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಕೊವಿಡ್​ ಲಸಿಕೆಯನ್ನು ಮಕ್ಕಳಿಗೆ ಕೊಡಲು ನಿರ್ಧರಿಸಲಾಗಿದ್ದು, ಶಾಲೆ ಪುನರಾರಂಭವಾಗುವ ಮೊದಲು, ಅಮೇರಿಕದ 12 ರಿಂದ 16 ವರ್ಷದ ಎಲ್ಲಾ ಮಕ್ಕಳಿಗೂ ಫೈಜರ್​ ಲಸಿಕೆ ನೀಡುವ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.

bhaskar hegde

| Edited By: Ayesha Banu

May 11, 2021 | 11:21 AM

ಮಕ್ಕಳಿಗೂ ಕೊವಿಡ್ ಲಸಿಕೆ ಬಂದಿಲ್ಲ ಎಂಬ ಕೊರಗಿದೆ ಅಲ್ಲವೇ? ಈಗ ಒಂದು ಒಳ್ಳೇ ಸುದ್ದಿ ಅಮೇರಿಕದಿಂದ ಬಂದಿದೆ. ಅಮೇರಿಕದ ಔಷಧ ನಿಯಂತ್ರಣ ಪ್ರಾಧಿಕಾರ ಫೈಜರ್ ಲಸಿಕೆಯನ್ನು 12 ರಿಂದ 16 ವರ್ಷ ಮಕ್ಕಳಿಗೂ ಕೊಡಲು ಒಪ್ಪಿಗೆ ನೀಡಿದೆ. ಈ ಕ್ರಮದಿಂದ ಅಮೇರಿಕದ ಲಕ್ಷಾಂತರ ಪಾಲಕರು ನಿಟ್ಟುಸಿರು ಬಿಡುವಂತಾಗಿದೆ. ಶರತ್ಕಾಲದಲ್ಲಿ ಶಾಲೆಗೆ ತೆರಳುವ ಮೊದಲು ರಾಷ್ಟ್ರದ ಹದಿಹರೆಯದವರನ್ನು ರಕ್ಷಿಸಲು ಈ ಲಸಿಕೆ ಸಹಾಯಕವಾಗಬಹುದು ಎಂದು ಜನ, ಈ ಕ್ರಮವನ್ನು ಹೊಗಳಿದ್ದಾರೆ. ರಾಷ್ಟ್ರೀಯ (ಫೆಡರಲ್) ಲಸಿಕೆ ಸಲಹಾ ಸಮಿತಿಯು 12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಎರಡು-ಡೋಸ್ ಲಸಿಕೆಯನ್ನು ಬಳಸುವ ಶಿಫಾರಸುಗಳನ್ನು ನೀಡಿದ ನಂತರ ಗುರುವಾರದಿಂದ ಲಸಿಕೆ ಕೊಡಲು ಪ್ರಾರಂಭವಾಗಬಹುದು ಮತ್ತು ಈ ಕುರಿತು ಬುಧವಾರ ಪ್ರಕಟಣೆ ಹೊರಬೀಳುವ ನಿರೀಕ್ಷಿ ಇದೆ.

ವಿಶ್ವಾದ್ಯಂತ ಹೆಚ್ಚಿನ ಕೋವಿಡ್ -19 ಲಸಿಕೆಗಳನ್ನು ವಯಸ್ಕರಿಗೆ ಮಾತ್ರ ನೀಡಲು ಅನುಮತಿ ನೀಡಲಾಗುತ್ತಿದೆ. 16 ವರ್ಷದೊಳಗಿನ ಹದಿಹರೆಯದವರಿಗೆ ಫೈಜರ್‌ನ ಲಸಿಕೆಯನ್ನು ಅನೇಕ ದೇಶಗಳಲ್ಲಿ ನೀಡಲು ಒಪ್ಪಿಗೆ ನೀಡಲಾಗಿದೆ ಮತ್ತು ಕೆನಡಾ ಇತ್ತೀಚೆಗೆ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕೊವಿಡ್ ಲಸಿಕೆ ನೀಡಲು ಒಪ್ಪಿಕೊಂಡಿದೆ.

“ಇದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹೋರಾಡುವ ನಮ್ಮ ಸಾಮರ್ಥ್ಯದ ಒಂದು ಪ್ರಮುಖ ಕ್ಷಣವಾಗಿದೆ” ಎಂದು ಮಕ್ಕಳ ವೈದ್ಯರೂ ಆಗಿರುವ ಫೈಜರ್ನ ಹಿರಿಯ ಉಪಾಧ್ಯಕ್ಷ ಡಾ. ಬಿಲ್ ಗ್ರೂಬರ್, ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಆಹಾರ ಮತ್ತು ಔಷಧ ಪ್ರಾಧಿಕಾರವು ಫೈಜರ್ ಲಸಿಕೆ ಸುರಕ್ಷಿತವಾಗಿದೆ ಎಂದು ಹೇಳಿದೆ. 12 ರಿಂದ 15 ವರ್ಷ ವಯಸ್ಸಿನ 2,000 ಕ್ಕೂ ಹೆಚ್ಚು ಯುಎಸ್ ಸ್ವಯಂಸೇವಕರ ಮೇಲೆ ನಡೆಸಿದ ಪರೀಕ್ಷೆಯ ಆಧಾರದ ಮೇಲೆ ಕಿರಿಯ ಮತ್ತು ಹದಿಹರೆಯದವರಿಗೆ ಈ ಲಸಿಕೆ ಬಲವಾದ ರಕ್ಷಣೆ ನೀಡುತ್ತದೆ ಎಂದು ಪ್ರಾಧಿಕಾರ ಘೋಷಿಸಿದೆ. ಸಂಪೂರ್ಣ ಲಸಿಕೆ ಹಾಕಿದ ಹದಿಹರೆಯದವರಲ್ಲಿ ಕೋವಿಡ್ -19 ಪ್ರಕರಣಗಳು ಇಲ್ಲ. ವಯಸ್ಕರಿಗಿಂತ ಮಕ್ಕಳಲ್ಲಿ ಈ ಲಸಿಕೆಯು ಹೆಚ್ಚಿನ ರೋಗ ನಿರೋಧಕ ಪ್ರತಿಕಾಯಗಳನ್ನು ಬೆಳೆಸಿವೆ ಎಂದು ಪ್ರಾಧಿಕಾರ ಹೇಳಿದೆ.

ಕಿರಿಯ ಹದಿಹರೆಯದವರು ಸಹ ವಯಸ್ಕರಂತೆಯೇ ಲಸಿಕೆ ಪ್ರಮಾಣ ಪಡೆದ ಮೇಲೆ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದ್ದರು. ಮಕ್ಕಳಲ್ಲಿ ಸಹ ಹೆಚ್ಚಾಗಿ ನೋಯುತ್ತಿರುವ ತೋಳುಗಳು ಮತ್ತು ಜ್ವರ ಬಂದಿರುವುದು ಕಂಡು ಬಂದಿದೆ. ಶೀತ ಅಥವಾ ನೋವು ಅತ್ಯಂತ ಪ್ರಬಲ ರೋಗ ನಿರೋಧಕ ವ್ಯವಸ್ಥೆ ಬೆಳವಣಿಗೆ ಹೊಂದಿರುವುದನ್ನು ಸೂಚಿಸುತ್ತದೆ.

ಹದಿಹರೆಯದವರಲ್ಲಿ ಫೈಜರ್‌ನ ಪರೀಕ್ಷೆ, “ನಮ್ಮ ಕಠಿಣ ಮಾನದಂಡಗಳನ್ನು ಪೂರೈಸಿದೆ” ಎಂದು ಎಫ್‌ಡಿಎ ಲಸಿಕೆ ಮುಖ್ಯಸ್ಥ ಡಾ. ಪೀಟರ್ ಮಾರ್ಕ್ಸ್ ಹೇಳಿದರು. “ಕಿರಿಯ ಜನಸಂಖ್ಯೆಗೆ ಲಸಿಕೆ ನೀಡುವುದು ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗುವ ಅಪಾರ ಸಾರ್ವಜನಿಕ ಆರೋಗ್ಯದ ತೊಡಕು ನಿವಾರಿಸುವಲ್ಲಿ ನಿರ್ಣಾಯಕವಾಗುತ್ತದೆ,” ಎಂದು ಹೇಳಿದೆ.

Corona Vaccine: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್​ ಲಸಿಕೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ ಸರ್ಕಾರ

ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

(US drug regulators authorised Pfizer Covid vaccine for children and teenagers 12 and 16 years)

Follow us on

Most Read Stories

Click on your DTH Provider to Add TV9 Kannada