ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

ಕೊರೊನಾ ವೈರಾಣುವನ್ನು ಮಣಿಸಲು ತಯಾರಾದ ವಿಶ್ವದ ಮೊದಲ ಲಸಿಕೆ ಎಂಬ ಹೆಗ್ಗಳಿಕೆಗೆ ಸ್ಪುಟ್ನಿಕ್-ವಿ ಪಾತ್ರವಾಗಿದ್ದು, ಭಾರತದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ನಂತರ ಬಳಕೆಗೆ ಅನುಮತಿ ಗಿಟ್ಟಿಸಿಕೊಂಡ ಮೂರನೇ ಲಸಿಕೆ ಎಂದು ಗುರುತಿಸಿಕೊಂಡಿದೆ.

ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?
ಸ್ಪುಟ್ನಿಕ್​ ವಿ ಲಸಿಕೆ
Follow us
Skanda
| Updated By: guruganesh bhat

Updated on: Apr 13, 2021 | 2:17 PM

ದೆಹಲಿ: ಭಾರತದಲ್ಲಿ ಕೊರೊನಾ ವೈರಾಣುವಿನ ಅಬ್ಬರ ಹೆಚ್ಚುತ್ತಿರುವ ಹೊತ್ತಿನಲ್ಲೇ ರಷ್ಯಾ ಮೂಲದ ಸ್ಪುಟ್ನಿಕ್-ವಿ ಲಸಿಕೆಯನ್ನು ದೇಶದಲ್ಲಿ ಬಳಸಲು ನಿನ್ನೆ (ಏಪ್ರಿಲ್ 13) ತಜ್ಞರ ಸಮಿತಿ ಒಪ್ಪಿಗೆ ಸೂಚಿಸಿತ್ತು. ಇದೀಗ ರಷ್ಯಾದಿಂದ ಭಾರತಕ್ಕೆ ಲಸಿಕೆ ಅಮದು ಮಾಡಿಕೊಳ್ಳಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (DCGI) ಅನುಮತಿ ನೀಡಿದ್ದು, ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಅಮದು ಮಾಡಿಕೊಳ್ಳಲು DCGI ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಭಾರತದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡಲು ಮೂರನೇ ಲಸಿಕೆಯಾಗಿ ಸ್ಪುಟ್ನಿಕ್-ವಿ ಮಾರುಕಟ್ಟೆಗೆ ಕಾಲಿಡಲಿದೆ. 2-6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬಹುದಾದ ಸ್ಪುಟ್ನಿಕ್-ವಿ ಲಸಿಕೆ ಪ್ರತಿ ಡೋಸ್​ಗೆ ₹750ಕ್ಕಿಂತಲೂ ಕಡಿಮೆ ಬೆಲೆ ಇರಲಿದೆ ಎನ್ನಲಾಗುತ್ತಿದೆ.

ಕೊರೊನಾ ವೈರಾಣುವನ್ನು ಮಣಿಸಲು ತಯಾರಾದ ವಿಶ್ವದ ಮೊದಲ ಲಸಿಕೆ ಎಂಬ ಹೆಗ್ಗಳಿಕೆಗೆ ಸ್ಪುಟ್ನಿಕ್-ವಿ ಪಾತ್ರವಾಗಿದ್ದು, ಭಾರತದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ನಂತರ ಬಳಕೆಗೆ ಅನುಮತಿ ಗಿಟ್ಟಿಸಿಕೊಂಡ ಮೂರನೇ ಲಸಿಕೆ ಎಂದು ಗುರುತಿಸಿಕೊಂಡಿದೆ. ರಷ್ಯಾದ ಮೊದಲ ಕೃತಕ ಉಪಗ್ರಹವಾದ ಸ್ಪುಟ್ನಿಕ್ ಹೆಸರನ್ನೇ ಹೊತ್ತು ಬಂದಿರುವ ಈ ಲಸಿಕೆ ಕಳೆದ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸುವ ಹೊತ್ತಿಗಾಗಲೇ ತಯಾರಿ ಹಂತದಲ್ಲಿ ಸಾಗಿತ್ತು ಎಂದು ತಿಳಿದುಬಂದಿದೆ.

ಸ್ಪುಟ್ನಿಕ್-ವಿ ಹೇಗೆ ಕಾರ್ಯ ನಿರ್ವಹಿಸುತ್ತದೆ? ಗ್ಯಾಮ್-ಕೊವಿಡ್-ವ್ಯಾಕ್ ಎಂದೂ ಕರೆಯಲ್ಪಡುವ ಸ್ಪುಟ್ನಿಕ್-ವಿ ಕೊರೊನಾ ಲಸಿಕೆ ಎರಡು ವಿವಿಧ ಬಗೆಯ ಅಡೆನೋವೈರಸ್​ಗಳ (Ad26 ಮತ್ತು Ad5) ಮಿಶ್ರಣ ಹೊಂದಿದೆ. ಸಾಮಾನ್ಯ ಶೀತಕ್ಕೆ ಕಾರಣವಾಗುವ ಅಡೆನೋ ವೈರಾಣುಗಳನ್ನು ಕೊವಿಡ್​ 19ಗೆ ಕಾರಣವಾದ SARS-CoV-2 ಜೊತೆ ಸೇರಿಸಲಾಗಿದ್ದು, ಸ್ಪೈಕ್ ಪ್ರೋಟೀನ್ ಅಂಶ ದೇಹದಲ್ಲಿ ಪ್ರತಿಕಾಯ ಉತ್ಪತ್ತಿ ಮಾಡಲು ಸಹಕರಿಸುತ್ತದೆ ಎಂದು ಹೇಳಲಾಗಿದೆ. ಇದನ್ನು ಎರಡು ಡೋಸ್​ಗಳಾಗಿ ತೆಗೆದುಕೊಂಡಾಗ ಪ್ರಭಾವ ಹೆಚ್ಚಿರಲಿದೆ. ಮೊದಲ ಡೋಸ್ ಪರಿಣಾಮ ವೈರಾಣುವಿನ ಶಕ್ತಿ ಕುಂದಲಿದ್ದು, ಎರಡನೇ ಡೋಸ್ ತೆಗೆದುಕೊಂಡಾಗ ವೈರಾಣು ಬಲುಬೇಗನೇ ನಾಶವಾಗಲಿದೆ.

SARS-CoV-2 ವೈರಾಣುವಿಗೆ ಮಾನವನ ದೇಹವನ್ನು ಪ್ರವೇಶಿಸಬಲ್ಲ ಪ್ರೋಟೀನ್​ಗಳನ್ನು ಲೇಪಿಸಿದಾಗ ಅವು ದೇಹದಲ್ಲಿ ಅಪಾಯ ಉಂಟುಮಾಡುವ ವೈರಾಣು ಜೊತೆಗೆ ಹೋರಾಡಿ ನಮ್ಮನ್ನು ರಕ್ಷಿಸುತ್ತವೆ. ಸ್ಪುಟ್ನಿಕ್-ವಿ ಲಸಿಕೆ ಸುಮಾರು ದಶಕಗಳ ಅಧ್ಯಯನದ ಪ್ರತಿಫಲವಾಗಿದ್ದು, ಅಡೆನೋ ವೈರಾಣು ತಂತ್ರಜ್ಞಾನವನ್ನು ಬಳಸಿಕೊಂಡು ಇತರೆ ರೋಗಗಳ ವಿರುದ್ಧವೂ ಲಸಿಕೆ ತಯಾರಿಸಲಾಗುತ್ತಿದೆ. ಸ್ಪುಟ್ನಿಕ್-ವಿ ವೈರಲ್ ವೆಕ್ಟರ್​ (Viral Vector) ಲಸಿಕೆಯಾಗಿದ್ದು, ವೈರಾಣುಗಳ ಮಾರ್ಪಾಡುಗೊಂಡ ಅಂಶವನ್ನು ಉಪಯೋಗಿಸಿಕೊಂಡು ಲಸಿಕೆ ಸಿದ್ಧಪಡಿಸಲಾಗಿರುತ್ತದೆ. ಅಲ್ಲದೇ ಈ ಕೊರೊನಾ ಲಸಿಕೆಯಲ್ಲಿ ಅಡ್ಡಪರಿಣಾಮ ಬೀರದಂತೆ ಸಾಕಷ್ಟು ಎಚ್ಚರಿಕೆ ವಹಿಸಿ ಕೆಲ ಅಂಶಗಳನ್ನು ಸೇರಿಸಲಾಗಿರುವುದರಿಂದ ಇದು ಹೆಚ್ಚು ವೈರಸ್ ಮಣಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತಿದೆ.

ಸ್ಪುಟ್ನಿಕ್-ವಿ ಲಸಿಕೆಯನ್ನು ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಜೊತೆ ಹೋಲಿಸಿದರೆ ಕೊವಿಶೀಲ್ಡ್ ಲಸಿಕೆಗೂ ಸ್ಪುಟ್ನಿಕ್-ವಿ ಲಸಿಕೆಗೂ ತಯಾರಿಕಾ ಹಂತದಲ್ಲಿ ಕೆಲ ಸಾಮ್ಯತೆಗಳು ಕಂಡುಬರುತ್ತವೆ. ಎರಡನ್ನೂ ಬಹುಪಾಲು ಒಂದೇ ತರೆನಾದ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಲಾಗಿದೆ. ಇತ್ತ ಕೊವ್ಯಾಕ್ಸಿನ್ ಲಸಿಕೆಯನ್ನು ನಿಷ್ಕ್ರಿಯಗೊಂಡ ವೈರಾಣುವನ್ನು ಬಳಸಿ ತಯಾರಿಸಲಾಗಿದ್ದು, ಅದರಲ್ಲಿನ ಸತ್ತ ಕೊರೊನಾ ವೈರಾಣು ಜೀವಂತ ಕೊರೊನಾ ವೈರಾಣುವನ್ನು ಮಣಿಸಲು ಸಹಕರಿಸುತ್ತದೆ. ಸದ್ಯ ಸ್ಪುಟ್ನಿಕ್-ವಿ ಲಸಿಕೆ ಶೇ.91.6ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿರುವುದರಿಂದ ಸಹಜವಾಗಿಯೇ ಇದರೆಡೆಗೆ ಹೆಚ್ಚು ನಿರೀಕ್ಷೆ ಇದೆ. ಆದರೆ, ಕೊವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​ ಲಸಿಕೆಗಳಲ್ಲಿ ಅಡ್ಡಪರಿಣಾಮ ಕಡಿಮೆ ಇದ್ದು ಅವು ಸಹ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯಾದ್ದರಿಂದ ಸ್ಪುಟ್ನಿಕ್​-ವಿ ಲಸಿಕೆಯಿಂದಾಗಿ ಅವುಗಳಿಗೆ ಹಿನ್ನೆಡೆ ಆಗುವಂತಹ ಸನ್ನಿವೇಶಗಳೇನೂ ಇರಲಿಕ್ಕಿಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ.

ಇದನ್ನೂ ಓದಿ: Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ 

(India get its third Corona Vaccine Sputnik V after Covishield and Covaxin What is its speciality)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ