ಆಮ್ಲಜನಕ ಕೊರತೆ ಆರೋಪ; ಕೊರೊನಾ ಸೋಂಕಿತ 7 ಜನರ ಸಾವು, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ಕೊರೊನಾ ಸೋಂಕಿತ 7 ಜನರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದೆ. ಇದರಿಂದಲೇ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೂ ನಲಸೋಪರಾದ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮುಂಬೈ: ಮಹಾರಾಷ್ಟ್ರ ನಲಸೋಪರಾದ ವಿನಾಯಕ ಆಸ್ಪತ್ರೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕೊರೊನಾ ಸೋಂಕಿತ 7 ಜನರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದೆ. ಇದರಿಂದಲೇ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೂ ನಲಸೋಪರಾದ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಆಸ್ಪತ್ರೆ ಮಂಡಳಿ ಈ ಆರೂಪವನ್ನು ತಳ್ಳಿ ಹಾಕಿದ್ದು ಮೃತರು ಸಾಯಲು ಅವರ ವಯಸ್ಸು ಮತ್ತು ಅಸ್ವಸ್ಥತೆ ಕಾರಣ ಎಂದು ಹೇಳುತ್ತಿದೆ.
ಈ ಭಾಗದಲ್ಲಿ ಇದೊಂದೆ ಆಸ್ಪತ್ರೆ ಕ್ರಿಟಿಕಲ್ ಸಂದರ್ಭದಲ್ಲೂ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತದೆ. ಆದರೆ ಏಳು ಮಂದಿ ಮೃತಪಡಲು ಕಾರಣ ಅವರ ವಯಸ್ಸು ಅಥವಾ ಇವರಿಗಿದ್ದ ಇತರ ಕಾಯಿಲೆಗಳು ಎಂದು ನಲಸೋಪರಾದ ವಿನಾಯಕ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
Maharashtra: Anger sparked in people after 7 COVID patients died allegedly due to lack of oxygen at a hospital in Nalasopara
“It’s only hospital accepting critical patients in the area. Those patients died either due to their age or co-morbidities,” said a doctor from hospital pic.twitter.com/d98ToNFQJV
— ANI (@ANI) April 13, 2021
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಕಾಂಬ್ಳೆ “ಮುಂಜಾನೆ 3 ಗಂಟೆಯ ಸಮಯಕ್ಕೆ ರೋಗಿಗಳಿಗೆ ಆಮ್ಲಜನಕದ ಪೂರೈಕೆಯಾಗಿದೆ. ಹಾಗೂ ರೋಗಿ ಕುಟುಂಬಸ್ಥರು ಆಸ್ಪತ್ರೆ ಬಿಲ್ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಕೇಸ್ ದಾಖಲಿಸಬೇಕು ಎಂದೆಲ್ಲಿ ಅವರು ಕೇಸ್ ಹಾಕಬಹುದು” ಎಂದು ಹೇಳಿದ್ರು.
ಇದನ್ನೂ ಓದಿ: In-depth: ಉತ್ತರಾಖಂಡದಲ್ಲಿ ಕಾಳ್ಗಿಚ್ಚು- ದೆಹಲಿಗೆ ಶುದ್ಧಗಾಳಿ ಒದಗಿಸುತ್ತಿದ್ದ ದೇವಭೂಮಿಯಲ್ಲೇ ಆಮ್ಲಜನಕ ಕೊರತೆ!
(Anger Sparked in People After 7 COVID Patients Died Allegedly Due to Lack of Oxygen at a Hospital in Nalasopara Maharashtra)