HRCT ಮತ್ತು CT ಸ್ಕ್ಯಾನ್ಗೆ ರಾಜ್ಯ ಸರ್ಕಾರದಿಂದ ದರ ನಿಗದಿ; ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿತಾಗಾರ ಸಮನ್ವಯಾಧಿಕಾರಿ ನೇಮಕ
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ, ಜನರಿಗೆ ಆರೋಗ್ಯ ಸೌಲಭ್ಯಗಳು ವ್ಯವಸ್ಥಿತವಾಗಿ ಲಭ್ಯವಾಗುವುದಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಆರ್ಸಿಟಿ ಮತ್ತು ಸಿಟಿ ಸ್ಕ್ಯಾನ್ಗಳ ದರ ನಿಗದಿಪಡಿಸಿದೆ.
ಬೆಂಗಳೂರು: HRCT/CT ಸ್ಕ್ಯಾನ್ಗೆ ರಾಜ್ಯ ಸರ್ಕಾರ ದರ ನಿಗದಿಪಡಿಸಿದೆ. ಬಿಪಿಎಲ್ ಕಾರ್ಡ್ದಾರರಿಗೆ HRCT/CT ಸ್ಕ್ಯಾನ್ಗೆ ₹1500 ಹಾಗೂ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ HRCT/CT ಸ್ಕ್ಯಾನ್ಗೆ ₹2500 ದರ ನಿಗದಿಪಡಿಸಲಾಗಿದೆ. ಜೊತೆಗೆ, ಚಿತಾಗಾರಗಳಲ್ಲಿ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಚಿತಾಗಾರ ಸಮನ್ವಯ ಅಧಿಕಾರಿಗಳನ್ನ ಸರ್ಕಾರ ನೇಮಿಸಿದೆ. ಬಿಬಿಎಂಪಿ ವ್ಯಾಪ್ತಿಯ 16 ಚಿತಾಗಾರಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. 2 ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಲು 32 ಅಧಿಕಾರಿಗಳ ನೇಮಕ ಮಾಡಲಾಗಿದೆ.
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ, ಜನರಿಗೆ ಆರೋಗ್ಯ ಸೌಲಭ್ಯಗಳು ವ್ಯವಸ್ಥಿತವಾಗಿ ಲಭ್ಯವಾಗುವುದಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಆರ್ಸಿಟಿ ಮತ್ತು ಸಿಟಿ ಸ್ಕ್ಯಾನ್ಗಳ ದರ ನಿಗದಿಪಡಿಸಿದೆ. ಜೊತೆಗೆ ಚಿತಾಗಾರ ಸಮನ್ವಯ ಅಧಿಕಾರಿಗಳನ್ನು ನೇಮಿಸಿ ಆದೇಶಿಸಿದೆ.
ಲಾಕ್ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ ಲಾಕ್ಡೌನ್ ಯಶಸ್ವಿಗೊಳಿಸಲು ನಾವು ಪಕ್ಷದಿಂದ ಜಿಲ್ಲೆಗಳಲ್ಲಿ ಆನ್ಲೈನ್ ಮೂಲಕ ಚರ್ಚೆ ನಡೆಸುತ್ತೇವೆ. ಒಂದು ಕುಟುಂಬದಲ್ಲಿ ಎಲ್ಲರಿಗೂ ಕೊವಿಡ್ ಬಂದಿರುತ್ತದೆ. ಅಂಥವರಿಗೆ ಪೂರ್ಣ ಆಹಾರ ನೀಡುತ್ತೇವೆ. ಆಸ್ಪತ್ರೆಗೆ ಬರಲೇಬೇಕು ಎಂದು ಡಾಕ್ಟರ್ ಸೂಚಿಸಿದರೆ ಮಾತ್ರ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಸಹಾಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಧಾನಸೌಧದಲ್ಲಿ ಇಂದು (ಮೇ 8) ಹೇಳಿಕೆ ನೀಡಿದ್ದಾರೆ.
ಲಸಿಕೆ ನೀಡುವುದಕ್ಕೆ ಬಹಳ ಶಿಸ್ತು ಬದ್ದವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದೂ ಈ ವೇಳೆ ರವಿಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ನವರಿಗೆ ಟೀಕೆ ಮಾಡುವುದೇ ಕೆಲಸ. ಅವರು ಏನೂ ಕೆಲಸ ಮಾಡಿಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಫುಲ್ ಬ್ಯುಸಿ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಿಮ್ಮ ಮಹಾರಾಷ್ಟ್ರ ಸರ್ಕಾರ ಯಾವ ಪ್ಯಾಕೇಜ್ ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ
ಯಾವುದೇ ಕೊವಿಡ್ 19 ಕೇಂದ್ರಗಳಿಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ; ನೀತಿ ಪರಿಷ್ಕರಿಸಿದ ಕೇಂದ್ರ
Published On - 8:37 pm, Sat, 8 May 21