ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ.

ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು
ಸಾಂಕೇತಿಕ ಚಿತ್ರ
Follow us
guruganesh bhat
|

Updated on:May 08, 2021 | 7:54 PM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು, ದಾರದಹಳ್ಳಿ, ಬಿಳ್ಳೂರು, ಕಡಿದಾಳು ಸೇರಿದಂತೆ ಹಲವೆಡೆ ನಿನ್ನೆ ಮಧ್ಯರಾತ್ರಿಯ ವೇಳೆಯಲ್ಲಿ ಭೂಕಂಪನದ ಅನುಭವ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.  ನಿನ್ನೆ ಮಧ್ಯರಾತ್ರಿ 1.50ರ ಸಮಯದಲ್ಲಿ ಸುಮಾರು 15  ಸೆಕೆಂಡುಗಳ ಕಾಲ ಭೂಮಿ ಕಂಪಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ನಿನ್ನೆ ಗುಡುಗು-ಸಿಡಿಲಿನ ಆರ್ಭಟದ ಜೊತೆಗೆ ಮಳೆಯೂ ಇದ್ದಿದ್ದರಿಂದ ಆ ವೇಳೆಯಲ್ಲಿ ಭೂಕಂಪನದ ಅನುಭವ ಜನರ ಗಮನಕ್ಕೆ ಬಂದರೂ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. 

ಈ ಅನುಭವ ಈ ಭಾಗದ ಹಲವು ಜನರಿಗಾಗಿದೆ. ಭೂಮಿ ಒಳಗೆ ವಿಚಿತ್ರ ಶಬ್ದದ ಜೊತೆಗೆ ನೆಲ ಕಂಪಿಸುವುದನ್ನು ಕಂಡು ಎಚ್ಚರವಿದ್ದವರು ಹೆದರಿಕೊಂಡಿದ್ದಾರೆ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಜನರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಾಗ, ಹೌದು ನಮ್ಮೂರಲ್ಲೂ ಭೂಮಿ ಅಲುಗಾಡಿದ ಹಾಗಾಯ್ತು ಎಂದು ಎಂಬುದು ಬೆಳಕಿಗೆ ಬಂದಿದೆ. ಐದಾರು ಗ್ರಾಮದ ಜನರು ಭೂಮಿ ಕಂಪಿಸಿದ ಅನುಭವ ಹಂಚಿಕೊಂಡಿದ್ದಾರೆ.   ಅಂದಹಾಗೆ 2019ರ ಅಗಸ್ಟ್​ನ ಮಹಾಮಳೆಯ ಸಂದರ್ಭದಲ್ಲಿ ಇದೇ ರೀತಿಯ ಭೂ ಕಂಪನ, ವಿಚಿತ್ರ ಶಬ್ಧದ ಅನುಭವವನ್ನು ಈ ಭಾಗದ ಜನರು ಎದುರಿಸಿದ್ದರು.  ಆದರೆ, ಈ ಬಾರಿ ಮಳೆಗಾಲಕ್ಕೂ ಮುಂಚೆಯೇ ಭೂಮಿ ಕಂಪಿಸಿದ್ದು, ವಿಚಿತ್ರ ಶಬ್ಧದ ಅನುಭವ ಜನರಲ್ಲಿ ಆತಂಕ ಮೂಡಿಸಿದೆ.

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಮೂಡಿಗೆರೆ ವಾಸಿ ನಳಂದ ಗಣೇಶ್, ‘ರಾತ್ರಿ 1.50ರ ವೇಳೆಯಲ್ಲಿ ನಾನು ಎಚ್ಚರವಾಗಿದ್ದೆ, ಆಗ ಸುಮಾರು 15 ಸೆಕೆಂಡುಗಳ ಕಾಲ ಭೂಮಿ ಅಲುಗಾಡಿದ್ದನ್ನು ಕಂಡು ಭಯಗೊಂಡೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್​ ಸಿಬ್ಬಂದಿಗೂ ಸೋಂಕು ದೃಢ

(Earthquake near mudigere near Chikmagalur villagers who expressed concern)

Published On - 7:48 pm, Sat, 8 May 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?