AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆ ಖರೀದಿಗೆ ಜಾಗತಿಕ ಟೆಂಡರ್​ ಕರೆಯಲು ನಿರ್ಧಾರ.. ರೆಮ್​ಡೆಸಿವಿರ್​ ಪೂರೈಕೆ ಮಾಡದಿದ್ದರೆ ಕಠಿಣ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ್​

ಸೋಂಕಿತರಿಗೆ ಅಗತ್ಯವಿರುವ ಐವರ್‌ಮೆಕ್ಟಿನ್ ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಇದೇ 14ಕ್ಕೆ ಪೂರೈಕೆ ಶುರುವಾಗುತ್ತದೆ. ಅಲ್ಲದೆ, ಇನ್ನೂ 25 ಲಕ್ಷ ಮಾತ್ರೆ ಖರೀದಿಸುವಂತೆ ಸೂಚಿಸಿದ್ದೇನೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ತಿಳಿಸಿದರು.

ಲಸಿಕೆ ಖರೀದಿಗೆ ಜಾಗತಿಕ ಟೆಂಡರ್​ ಕರೆಯಲು ನಿರ್ಧಾರ.. ರೆಮ್​ಡೆಸಿವಿರ್​ ಪೂರೈಕೆ ಮಾಡದಿದ್ದರೆ ಕಠಿಣ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ್​
ಡಿಸಿಎಂ ಅಶ್ವತ್ಥನಾರಾಯಣ
Lakshmi Hegde
|

Updated on: May 11, 2021 | 6:47 PM

Share

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಲಸಿಕೆ ಬೇಡಿಕೆಯನ್ನು ಪೂರೈಸಲು ಶೀಘ್ರವಾಗಿ ಪೂರೈಸಲು 2 ಕೋಟಿ ಕೊವಿಡ್​ ಲಸಿಕೆಯನ್ನು ಜಾಗತಿಕ ಟೆಂಡರ್​ ಮೂಲಕ ಖರೀದಿ ಮಾಡುವುದಾಗಿ ರಾಜ್ಯ ಕೊವಿಡ್ ಕಾರ್ಯಪಡೆ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಹೇಳಿದರು. ಕೊವಿಡ್​ ಔಷಧ ಸರಬರಾಜು ವ್ಯವಸ್ಥೆ ಬಗ್ಗೆ ಇಂದು ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ ಅಶ್ವತ್ಥನಾರಾಯಣ್ ಸಭೆಯ ಬಳಿಕ ಮಾತನಾಡಿ, 3 ಕೋಟಿ ವ್ಯಾಕ್ಸಿನ್‌ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್‌, 2 ಕೋಟಿ ಕೋವಿಶೀಲ್ಡ್‌ ಲಸಿಕೆ ಸೇರಿದೆ. 18 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಕೊಡಬೇಕಾಗಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಇದುವರೆಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ, ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್​ ಕರೆದು ಖಾಸಗಿ ಕಂಪನಿಗಳಿಂದ ವ್ಯಾಕ್ಸಿನ್ ಖರೀದಿ ಮಾಡಿರಲಿಲ್ಲ. ಹೀಗಾಗಿ ಟೆಂಡರ್​ ಕರೆಯಲು ಇಂದು ಸೂಚನೆ ನೀಡಲಾಗಿದೆ. ಯಾವ ಕಂಪನಿ ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸಬಹುದು. 7 ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್‌ ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆ ಆರಂಭಿಸಬೇಕು ಎಂದು ಹೇಳಿದರು.

ಒಂದು ಲಕ್ಷ ಪಲ್ಸ್​ ಆಕ್ಸಿಮೀಟರ್ ಖರೀದಿ ಕೊವಿಡ್ 19 ಸೋಂಕಿತರಿಗೆ ಅಗತ್ಯ ಇರುವ ಪಲ್ಸ್​ ಆಕ್ಸಿಮೀಟರ್​ ಖರೀದಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಒಂದು ಲಕ್ಷ ಆಕ್ಸಿಮೀಟರ್ ಖರೀದಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದನ್ನು ಸರ್ಕಾರದಿಂದ ಖರೀದಿಸಿ ಎಲ್ಲ ಜಿಲ್ಲೆ, ತಾಲೂಕುಗಳಿಗೆ ಹಂಚಲಾಗುವುದು. ಸುರಕ್ಷಿತವಾಗಿ ಇಟ್ಟುಕೊಳ್ಳುವುದು, ಸೋಂಕಿತರು ಗುಣಮುಖರಾದ ತಕ್ಷಣ ವಾಪಸ್​ ಪಡೆಯುವುದು ಆಯಾ ಜಿಲ್ಲಾ ಮತ್ತು ತಾಲೂಕುಆರೋಗ್ಯಾಧಿಕಾರಿಗಳ (DHO ಮತ್ತು THO)ಕೆಲಸ ಎಂದು ಡಿಸಿಎಂ ತಿಳಿಸಿದರು. ಈ ಮೂಲಕ ಪಲ್ಸ್ ಆಕ್ಸಿಮೀಟರ್ ಬ್ಯಾಂಕ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಐವರ್‌ಮೆಕ್ಟಿನ್ ಮಾತ್ರೆ ಖರೀದಿ ಸೋಂಕಿತರಿಗೆ ಅಗತ್ಯವಿರುವ ಐವರ್‌ಮೆಕ್ಟಿನ್ ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಇದೇ 14ಕ್ಕೆ ಪೂರೈಕೆ ಶುರುವಾಗುತ್ತದೆ. ಅಲ್ಲದೆ, ಇನ್ನೂ 25 ಲಕ್ಷ ಮಾತ್ರೆ ಖರೀದಿಸುವಂತೆ ಸೂಚಿಸಿದ್ದೇನೆ. ಇದು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯ ಇರಬೇಕು. ಜತೆಗೆ, 35 ಲಕ್ಷ ಜಿಂಕ್‌ ಟ್ಯಾಬ್ಲೆಟ್‌ ಹಾಗೂ ಒಂದು ಕೋಟಿ ಕಾಲ್ಸಿಚಿನ್ ಮಾತ್ರೆಗಳನ್ನೂ ಕೂಡಲೇ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಔಷಧಿಗಳು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು, ಆಸ್ಪತ್ರೆ ಹಾಗೂ ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಈಗ 10.50 ಲಕ್ಷ ರಾಟ್‌ ಕಿಟ್‌ ಇವೆ, ಇನ್ನೂ ವಾರಕ್ಕೆ ಆಗುತ್ತವೆ. ಈಗ ದಿನಕ್ಕೆ 50 ಸಾವಿರದಂತೆ ಪೂರೈಕೆ ಆಗುತ್ತಿವೆ. ಜತೆಗೆ, 37 ಲಕ್ಷ ಆರ್‌ಟಿಪಿಸಿಆರ್‌ ಕಿಟ್‌ಗಳನ್ನೂ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರೆಮ್​ಡಿಸಿವರ್‌ ಸರಬರಾಜು ಮಾಡದೆ ಇದ್ದರೆ ಕ್ರಮ ಇದೇ ಸಂದರ್ಭದಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿಯವರೊಂದಿಗೆ ಮಾತನಾಡಿದ ಡಿಸಿಎಂ, ನೋಟಿಸ್ ಕೊಟ್ಟರೂ ಸಕಾಲಕ್ಕೆ ರೆಮ್​ಡಿಸಿವಿರ್​ ಪೂರೈಕೆ ಮಾಡದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇನ್ನು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರನ್ನು ದಾಖಲು ಮಾಡಿಕೊಳ್ಳುವ ಮುನ್ನ ಭೌತಿಕ ಪರೀಕ್ಷೆ ನಡೆಸಿಯೇ ದಾಖಲು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಂಭೀರ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಲಸಿಕೆಗಾಗಿ ಹಳ್ಳಿಗಳಿಗೆ ಹೋಗುವುದು ಬೇಡ ನಗರದ ಜನರು ಲಸಿಕೆ ಪಡೆಯಲು ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಬೇಡ. ಅವರು ನಗರದಲ್ಲೇ ಲಸಿಕೆ ಪಡೆಯಲಿ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ ಎಂದ ಡಿಸಿಎಂ, ಈ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮಾಹಿತಿ ನೀಡಿದರು. ಈ ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಖ್ತರ್‌, ಔಷಧಿ ಖರೀದಿ ಉಸ್ತುವಾರಿ ಅಂಜುಂ ಪರ್ವೇಜ್‌,  ರಾಜ್ಯ ಔಷಧ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್‌ ಪಾಟೀಲ್‌ ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ‘ಕಳೆದ 2 ದಿನದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ’

ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?

Follow Us
Lakshmi Hegde
Lakshmi Hegde
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ