ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್​ಟಿ ಅನ್ವಯ

| Updated By: Digi Tech Desk

Updated on: Jul 31, 2023 | 10:45 AM

ಬಟ್ಟೆ, ಊಟ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಮೂಲ ಬೆಲೆಯ ಜೊತೆಗೆ ಜಿಎಸ್​ಟಿ ಪಾವತಿಸಬೇಕಿದೆ. ಇದೀಗ ಹಾಸ್ಟೆಲ್‌, ಪಿಜಿಗಳಿಗೂ ಜಿಎಸ್​ಟಿ ವಿಧಿಸಲಾಗಿದೆ. ಇದರಿಂದ ಹಾಸ್ಟೆಲ್, ಪಿಜಿ ರೆಂಟ್​ ದುಬಾರಿಯಾಗಲಿದೆ.

ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್​ಟಿ ಅನ್ವಯ
ಜಿಎಸ್​ಟಿ
Follow us on

ಬೆಂಗಳೂರು, (ಜುಲೈ 31): ಖಾಸಗಿ ಹಾಸ್ಟೆಲ್(Hostel) ಹಾಗೂ ಪಿಜಿಗಳಗೆ(paying guest) ಶೇ.12ರಷ್ಟು ಜಿಎಸ್​ಟಿ (GST) ಅನ್ವಯವಾಗಲಿದೆ ಎಂದು ಬೆಂಗಳೂರಿನ ಜಿಎಸ್​ಟಿ ಅಡ್ವಾನ್ಸ್ ರೂಲಿಂಗ್ (ಎಎಆರ್) ಪೀಠ ಆದೇಶಿಸಿದೆ. ಹಾಸ್ಟೆಲ್​ಗಳನ್ನು ವಸತಿ ಕಟ್ಟಡಗಳಿಗೆ ಹೋಲಿಸಲಾಗದು ಮತ್ತು ಅವುಗಳಿಗೆ ತೆರಿಗೆ ವಿನಾಯಿತಿಯನ್ನೂ ನೀಡಲಾಗದು ಎಂದು ತಿಳಿಸಿದೆ. ಹೀಗಾಗಿ ಪಿಜಿ, ಹಾಸ್ಟೇಲ್​ಗಳ ತಿಂಗಳ ಬಾಡಿಗೆ ಇನ್ನಷ್ಟು ಏರಿಕೆಯಾಗಲಿದೆ. ಮನೆ ಬಾಡಿಗೆ ಮಾಡಲಾಗದೇ ಬೆಂಗಳೂರಿನಂತ ನಗರಗಳಲ್ಲಿ ಹಾಸ್ಟೇಲ್-ಪಿಜಿಗಳನ್ನೇ ಅವಲಂಬಿಸಿದವರಿಗೆ ಹೊರೆಯಾಗಲಿದೆ.

ಇದನ್ನೂ ಓದಿ: Karnataka News Live Updates: ಚಿಕ್ಕಮಗಳೂರಲ್ಲಿ 200 ರೂ. ಗಡಿ ತಲುಪಿದ ಟೊಮೇಟೊ ಬೆಲೆ

ಪಿಜಿ ರೆಂಟ್ ಅಥವಾ ಹಾಸ್ಟೆಲ್ ಶುಲ್ಕಗಳಿಗೆ ಜಿಎಸ್​ಟಿ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಮನವಿಗಳನ್ನು ಆಲಿಸಿದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ (ಎಎಆರ್) ಈ ಆದೇಶ ನೀಡಿದೆ. ಇದರೊಂದಿಗೆ ಇನ್ಮುಂದೆ ನೋಂದಾಯಿತ ಹಾಸ್ಟೆಲ್‌ಗಳು ಮತ್ತು ಪಿಜಿಗಳು ತಿಂಗಳ ಬಾಡಿಗೆಯ ಮೇಲೆ 12% ತೆರಿಗೆಯನ್ನು ಹೇರಲು ಆರಂಭಿಸಲಿವೆ.

ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (ಎಎಆರ್), ವಸತಿ ಘಟಕಗಳ ಬಾಡಿಗೆ ಮಾತ್ರ ಜಿಎಸ್​ಟಿಯಿಂದ ವಿನಾಯಿತಿಗೆ ಅರ್ಹವಾಗಿವೆ. ಹಾಸ್ಟೆಲ್‌ಗಳು ವಸತಿ ಘಟಕಗಳು ಅಲ್ಲ. ದಿನಕ್ಕೆ 1,000 ರೂ.ವರೆಗೆ ಬಾಡಿಗೆ ಇರುವ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು 2022ರ ಜುಲೈ 17ರಂದು ಸರ್ಕಾರ ತೆಗೆದು ಹಾಕಿದೆ. ಆದ್ದರಿಂದ ಹಾಸ್ಟೆಲ್ ಬಾಡಿಗೆಯು ಅಂದಿನಿಂದ ಜಿಎಸ್​ಟಿ ವ್ಯಾಪ್ತಿಗೆ ಒಳಪಡುತ್ತದೆ ಎಂದಿದೆ.

ಈಗಾಗಲೇ ದಿನ ನಿತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಂಗಳುರಿನಲ್ಲಿ ಹಲವು ಪಿಜಿಗಳ ರೆಂಟ್ ಹೆಚ್ಚಳ ಮಾಡಲಾಗಿದೆ. ಇದೀಗ ಜಿಎಸ್​ಟಿ ಒಂದು ಸೇರಿಕೊಂಡಿದೆ. ಇದರಿಂದ ಪಿಜಿ ರೆಂಟ್​ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೇ ಬೇರೆ ರಾಜ್ಯಗಳಿಂದ ಬಂದವರು ಚಿಕ್ಕ ಉದ್ಯೋಗ ಮಾಡಿಕೊಂಡೋ ಅಥವಾ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿ ಪಿಜಿನಲ್ಲಿ ತಂಗಿದ್ದಾರೆ. ಮನೆ ಬಾಡಿಗೆ ಮಾಡಲು ಆರ್ಥಿಕ ಹೊರೆ ಬೀಳುವುದರಿಂದ ಪಿಜಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಅವರಿಗೂ ಜಿಎಸ್​ಟಿ ಬರೆ ಬೀಳಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:04 am, Mon, 31 July 23