ಬೃಹನ್ಮಠ ಗವಿಸಿದ್ದೇಶ್ವರ ಸ್ವಾಮೀಜಿ ತಾತನ ಪುತ್ರ ಕೊರೊನಾ ಸೋಂಕಿಗೆ ಬಲಿ

|

Updated on: May 23, 2021 | 11:39 AM

19 ವರ್ಷದ ಪ್ರಸಾದ್ ಕಳೆದ ಹತ್ತು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯುವಕ ಮನೆಗೆ ಹೋಗಿದ್ದರು. ಆದರೆ ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ ಯುವಕ ಕೊನೆಗೂ ಉಸಿರು ಚೆಲ್ಲಿದ್ದಾರೆ.

ಬೃಹನ್ಮಠ ಗವಿಸಿದ್ದೇಶ್ವರ ಸ್ವಾಮೀಜಿ ತಾತನ ಪುತ್ರ ಕೊರೊನಾ ಸೋಂಕಿಗೆ ಬಲಿ
ಮೃತ ಯುವಕ
Follow us on

ಕೊಪ್ಪಳ: ಮಹಾಮಾರಿ ಕೊರೊನಾ ಯುವ ಸಮೂಹದ ಮೇಲೆ ಲಗ್ಗೆ ಇಟ್ಟಿದೆ. ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚು ಯುವಕ-ಯುವತಿಯರ ಜೀವವನ್ನೇ ಕೊರೊನಾ ಬಲಿ ಪಡೆದಿದೆ. ಕೊಪ್ಪಳದ 19 ವರ್ಷದ ಯುವಕ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ದೇಶ್ವರ ತಾತನವರ ಪುತ್ರ ಪ್ರಸಾದ್ ಕೊರೊನಾ ಸೋಂಕಿಗೆ ಬಲಿಯಾದ ಯುವಕ.

19 ವರ್ಷದ ಪ್ರಸಾದ್ ಕಳೆದ ಹತ್ತು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯುವಕ ಮನೆಗೆ ಹೋಗಿದ್ದರು. ಆದರೆ ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ ಯುವಕ ಕೊನೆಗೂ ಉಸಿರು ಚೆಲ್ಲಿದ್ದಾರೆ. ಬಾಳಿ ಬುದುಕಬೇಕಿದ್ದ ಕೇವಲ 19 ವರ್ಷದ ಯುವಕನನ್ನು ಕೊರೊನಾ ಬಲಿ ಪಡೆದಿದ್ದು, ಅರಳಹಳ್ಳಿಯ ಮಠದ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ನಾಳೆಯಿಂದ 7 ದಿನ ಕೊಪ್ಪಳ ಕಂಪ್ಲೀಟ್ ಲಾಕ್​ಡೌನ್​
ಕೊಪ್ಪಳ ಜಿಲ್ಲೆಯಾದ್ಯಂತ ನಾಳೆ ಸಂಪೂರ್ಣ ಲಾಕ್​ಡೌನ್ ಆಗಲಿದೆ. ಹೀಗಾಗಿ ಇಂದು ಬೆಳ್ಳಂಬೆಳಗ್ಗೆ ಮದ್ಯ ಖರೀದಿಗೆ ಮದ್ಯಪ್ರಿಯರು ಮುಗಿಬಿದ್ದರು. ಇಂದು 10 ಗಂಟೆವರೆಗೂ ಮಾತ್ರ ಮದ್ಯ ಖರೀದಿಗೆ ಅವಕಾಶವಿದ್ದು, ಮುಂದಿನ 7 ದಿನಗಳ ಕಾಲ ಬಾರ್ ಬಂದ್ ಆಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯೇ ಮದ್ಯ ಖರೀದಿ ಜೋರಾಗಿದೆ. ಮದ್ಯ ಖರೀದಿಗೆ ಮಹಿಳೆಯರು ಕ್ಯೂನಲ್ಲಿ ನಿಂತಿದ್ದರು. ಮಹಿಳೆಯರು ಸೇರಿ ಬಹುತೇಕರು ಬ್ಯಾಗ್​ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ

ಕೊರೊನಾ ಸೋಂಕು ದೃಢವಾದಂತೆ ಆತ್ಮಹತ್ಯೆಗೆ ಶರಣಾದ ಗದಗದ ಮಹಿಳೆ

ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದೆಂತಾ ಸಮಸ್ಯೆ, ಕೊರೊನಾಗಿಂತ ಈ ಕಾಯಿಲೆಗೆ ಮೃತಪಟ್ಟವರೇ ಹೆಚ್ಚು

(19 year young man death due to covid 19 at koppal)