AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕು ದೃಢವಾದಂತೆ ಆತ್ಮಹತ್ಯೆಗೆ ಶರಣಾದ ಗದಗದ ಮಹಿಳೆ

ಮಹಿಳೆ ಕಳೆದ ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಕೊರೊನಾ ಟೆಸ್ಟ್ ಬಳಿಕ ಪಂಚಾಯತಿ ಸಿಬ್ಬಂದಿ ಹೋಮ್ ಐಸೋಲೇಷನ್ನಲ್ಲಿರಲು ಸೂಚನೆ ನೀಡಿದ್ದರು. ಬಡತನದಿಂದ ಬೆಂದ ಕುಟುಂಬ ಆಸ್ಪತ್ರೆಗೆ ಹಣ ಖರ್ಚಾಗುತ್ತದೆ.

ಕೊರೊನಾ ಸೋಂಕು ದೃಢವಾದಂತೆ ಆತ್ಮಹತ್ಯೆಗೆ ಶರಣಾದ ಗದಗದ ಮಹಿಳೆ
ಪ್ರಾತಿನಿಧಿಕ ಚಿತ್ರ
Follow us
sandhya thejappa
|

Updated on: May 23, 2021 | 10:05 AM

ಗದಗ: ಮಹಾಮಾರಿ ಕೊರೊನಾ ಅಕ್ಷರಶಃ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕೊರೊನಾ ಸೋಂಕು ತಗುಲಿದೆ ಎಂದಾಗ ಜನ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕೊರೊನಾ ಸೋಂಕಿಗೆ ಹೆದರಿ ಅದೆಷ್ಟೋ ಜನರು ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಇದೀಗ ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಕೊರೊನಾ ಸೋಂಕು ದೃಢವಾದ ಬೆನ್ನಲ್ಲೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 45 ವರ್ಷದ ಮಹಿಳೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆ ಕಳೆದ ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಕೊರೊನಾ ಟೆಸ್ಟ್ ಬಳಿಕ ಪಂಚಾಯತಿ ಸಿಬ್ಬಂದಿ ಹೋಮ್ ಐಸೋಲೇಷನ್ನಲ್ಲಿರಲು ಸೂಚನೆ ನೀಡಿದ್ದರು. ಬಡತನದಿಂದ ಬೆಂದ ಕುಟುಂಬ ಆಸ್ಪತ್ರೆಗೆ ಹಣ ಖರ್ಚಾಗುತ್ತದೆ. ನನಗೂ ಕರೊನಾ ಬಂದಿದೆ ಅಂತ ಹೆದರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಎಸ್ಐ ಆನಂದ ಗುಡೇನ್ನವರ್ ಕೊವಿಡ್​ಗೆ ಬಲಿ ಬೆಳಗಾವಿ: ಘಟಪ್ರಭಾ ಪೊಲೀಸ್ ಠಾಣೆಯ ಎಎಸ್ಐ ಆನಂದ ಗುಡೇನ್​ವರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 31 ವರ್ಷದ ಆನಂದ ಗುಡೇನ್​ವರ್​ಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ1,907 ಜನರು ಕೊವಿಡ್​ಗೆ ಬಲಿ ಏಪ್ರಿಲ್ ತಿಂಗಳಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಸುಮಾರು 1,907 ಜನರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ 190 ಜನರು ಮೊದಲ ಡೋಸ್ ಲಸಿಕೆ ಪಡೆದವರು ಎನ್ನಲಾಗಿದೆ. ಅಲ್ಲದೇ 190 ಜನರು 65 ವರ್ಷ ಮೇಲ್ಪಟ್ಟವರಾಗಿದ್ದು, 2ನೇ ಡೋಸ್ ಲಸಿಕೆ ಪಡೆಯುವ ಮುನ್ನವೇ ಕೊವಿಡ್​ಗೆ ತುತ್ತಾಗಿದ್ದಾರೆ.

ರಾಜ್ಯದಲ್ಲಿ ಎರಡು ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ಮೊದಲ ಅಲೆಯಲ್ಲಿ 50 ವರ್ಷ ಮೇಲ್ಪಟ್ಟ ಅತಿ ಹೆಚ್ಚು ಜನ ಮೃತಪಟ್ಟಿದ್ದರು. ಆದರೆ ಎರಡನೇ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಸಾವಿನ ಪ್ರಮಾಣ ಕಡಿಮೆಯಿದೆ. ರಾಜ್ಯದಲ್ಲಿ ಮೊದಲ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರು 10,212 ಜನ ಕೊರೊನಾಗೆ ಬಲಿಯಾಗಿದ್ದರು. ಎರಡನೇ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ 7,832 ಜನ ಮೃತಪಟ್ಟಿದ್ದಾರೆ. 50 ವರ್ಷದವರ ಸಾವು ಶೇ.23.62 ಇಳಿಕೆಯಾಗಿದೆ.

ಇದನ್ನೂ ಓದಿ

ಕೊರೊನಾ ಸೋಂಕಿತರಿಗೆ ಮನೋಸ್ಥೈರ್ಯ ತುಂಬುವ ಪಾಠ; ಕಲಬುರಗಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ ಶಿಕ್ಷಕರು

‘ನಾನು ಮುಖ್ಯಮಂತ್ರಿ ಆಗ್ಬೇಕು; ನೀವು ನನ್ನ ಗೆಲ್ಲಿಸ್ತೀರಾ?’; ಉಪೇಂದ್ರ ಕೇಳಿದ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು?

(Gadag woman commits suicide because of confirm corona infection)