ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದೆಂತಾ ಸಮಸ್ಯೆ, ಕೊರೊನಾಗಿಂತ ಈ ಕಾಯಿಲೆಗೆ ಮೃತಪಟ್ಟವರೇ ಹೆಚ್ಚು
ಮನ್ನೇಕೋಟೆ ಗ್ರಾಮದಲ್ಲಿ 25 ದಿನದಲ್ಲಿ 15 ಜನರು ಮೃತಪಟ್ಟಿದ್ದಾರೆ. 15 ಜನರ ಪೈಕಿ ಐವರು ಮಾತ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇತರೆ ಕಾಯಿಲೆಯಿಂದ 10 ಗ್ರಾಮಸ್ಥರು ಮೃತಪಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿಲ್ಲದೆ ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಚಿತ್ರದುರ್ಗ: ಕೊರೊನಾ ಸೋಂಕಿನ ಭೀಕರತೆಯ ನಡುವೆ ಜಿಲ್ಲೆಯಲ್ಲಿ ಇತರೆ ಖಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮದಲ್ಲಿ 25 ದಿನದಲ್ಲಿ 15 ಜನರು ಮೃತಪಟ್ಟಿದ್ದಾರೆ. ಆದರೆ ದುರಂತವೆಂದರೆ ಕೊರೊನಾಗೆ ಬಲಿಯಾದವರಿಗಿಂತ ಇತರೆ ಕಾಯಿಲೆಗೆ ತತ್ತಾಗಿ ಮೃತಪಟ್ಟಿದವರೇ ಹೆಚ್ಚಿದ್ದಾರೆ.
ಮನ್ನೇಕೋಟೆ ಗ್ರಾಮದಲ್ಲಿ 25 ದಿನದಲ್ಲಿ 15 ಜನರು ಮೃತಪಟ್ಟಿದ್ದಾರೆ. 15 ಜನರ ಪೈಕಿ ಐವರು ಮಾತ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಇತರೆ ಕಾಯಿಲೆಯಿಂದ 10 ಗ್ರಾಮಸ್ಥರು ಮೃತಪಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿಲ್ಲದೆ ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಕ್ರಮಕೈಗೊಂಡಿಲ್ಲವೆಂದು ಜಿಲ್ಲಾಡಳಿತದ ವಿರುದ್ಧ ಮನ್ನೇಕೋಟೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂತಹದೊಂದು ಸಮಸ್ಯೆ ಎದುರಾಗಿದೆ. ಮನ್ನೇಕೋಟೆ ಗ್ರಾಮದಲ್ಲಾದ ಸರಣಿ ಸಾವಿನಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಸಚಿವರು ಗ್ರಾಮಕ್ಕೆ ಬೇಟಿ ನೀಡಿ ಜನ ಆತಂಕ ದೂರ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿ ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ ಜನರ ಪ್ರಾಣ ಉಳಿಸಬೇಕಿದೆ.
ಸರಣಿ ಸಾವು ತಡೆಗೆ ದೇವರ ಮೊರೆ ಹೋದ ಗ್ರಾಮಸ್ಥರು ಇನ್ನು ಗ್ರಾಮದಲ್ಲಿ ಸಂಭವಿಸುತ್ತಿರುವ ಸರಣಿ ಸಾವು ತಡೆಗೆ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಗ್ರಾಮದ ನಾಲ್ಕು ದಿಕ್ಕಿಗೆ ದೇವಿ ಹೆಸರಲ್ಲಿ ತೆಂಗಿನಕಾಯಿ ಕಟ್ಟಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ದಡಕ್ಕೆ ಅಪ್ಪಳಿಸಿದ ಮಂಗಳೂರು ಬೋಟ್; ಮೀನುಗಾರರಿಗೆ ವಾಂತಿ