ಜಿಲ್ಲಾ ಕೊವಿಡ್ ಆಸ್ಪತ್ರೆ ನಡೆಯುತ್ತಿರುವುದು ಬಾಪೂಜಿ ಆಸ್ಪತ್ರೆಯ ವೈದ್ಯರಿಂದ.. ಭೈರತಿ ಬಸವರಾಜ್ ಆರೋಪಕ್ಕೆ ತಿರುಗೇಟು ಕೊಟ್ಟ S.S.ಮಲ್ಲಿಕಾರ್ಜುನ
ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಸರ್ಕಾರವೇ S.S.ಆಸ್ಪತ್ರೆ, ಬಾಪೂಜಿ ಆಸ್ಪತ್ರೆಗೆ 9.15 ಕೋಟಿ ರೂ. ಬಾಕಿ ಹಣ ನೀಡಬೇಕು. ಸಂಪೂರ್ಣ ವಿಷಯವನ್ನು ತಿಳಿಯದೆ ಹೇಳಿಕೆ ನೀಡಬಾರದು ಎಂದು ದಾವಣಗೆರೆಯಲ್ಲಿ ಮಾಜಿ ಶಾಸಕ S.S.ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: 2.5 ಕೋಟಿ ರೂ. ಕ್ಲಿನಿಕಲ್ ಚಾರ್ಜ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು S.S.ಆಸ್ಪತ್ರೆಯ ವಿರುದ್ಧ ಭೈರತಿ ಬಸವರಾಜ್ ಆರೋಪ ಹಿನ್ನೆಲೆಯಲ್ಲಿ ಭೈರತಿ ಬಸವರಾಜ್ ಆರೋಪಕ್ಕೆ S.S.ಮಲ್ಲಿಕಾರ್ಜುನ ತಿರುಗೇಟು ಕೊಟ್ಟಿದ್ದಾರೆ.
ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಸರ್ಕಾರವೇ S.S.ಆಸ್ಪತ್ರೆ, ಬಾಪೂಜಿ ಆಸ್ಪತ್ರೆಗೆ 9.15 ಕೋಟಿ ರೂ. ಬಾಕಿ ಹಣ ನೀಡಬೇಕು. ಸಂಪೂರ್ಣ ವಿಷಯವನ್ನು ತಿಳಿಯದೆ ಹೇಳಿಕೆ ನೀಡಬಾರದು ಎಂದು ದಾವಣಗೆರೆಯಲ್ಲಿ ಮಾಜಿ ಶಾಸಕ S.S.ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆ ನಡೆಯುತ್ತಿರುವುದು ನಮ್ಮ ಬಾಪೂಜಿ ಆಸ್ಪತ್ರೆಯ ವೈದ್ಯರಿಂದ. ಕೊವಿಡ್ ಆಸ್ಪತ್ರೆಯಲ್ಲಿ 20 ಸರ್ಕಾರಿ ವೈದ್ಯರಿದ್ದಾರೆ. ಬಾಪೂಜಿ ಮೆಡಿಕಲ್ ಕಾಲೇಜಿನ 66 ಹಿರಿಯ ಪ್ರಾಧ್ಯಾಪಕರು, 105 ಸ್ನಾತಕೋತ್ತರ ವಿದ್ಯಾರ್ಥಿಗಳು, 77 ಇಂಟರ್ನಿಗಳು ಕೆಲಸ ಮಾಡುತ್ತಿದ್ದಾರೆ. ಆದರೂ ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.
ಕ್ಲಿನಿಕಲ್ ಚಾರ್ಜ್ 2.5 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳುವ ಮುನ್ನ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಮಾಜಿ ಶಾಸಕ S.S. ಮಲ್ಲಿಕಾರ್ಜುನ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Butta Bomma Song: ‘ಬುಟ್ಟ ಬೊಮ್ಮ..’ ಹಾಡಿಗೆ ಮತ್ತೊಂದು ದಾಖಲೆ; ಹಿರಿಹಿರಿ ಹಿಗ್ಗಿದ ಅಲ್ಲು ಅರ್ಜುನ್ ಫ್ಯಾನ್ಸ್