ತಬ್ಲಿಘಿ ನಂಟಿನಿಂದ ಮತ್ತೆ ರಾಜ್ಯದಲ್ಲಿ 25 ಮಂದಿಗೆ ಕೊರೊನಾ ಸೋಂಕು!

|

Updated on: May 12, 2020 | 12:40 PM

ಬೆಂಗಳೂರು: ಹೊರರಾಜ್ಯಗಳಿಂದ ಬಂದಿದ್ದ ಒಟ್ಟು 31 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ 25 ಮಂದಿ ಅಹ್ಮದಾಬಾದ್​ನ ತಬ್ಲಿಘಿ ಜಮಾತ್​ಗೆ ಹೋಗಿ ಬಂದಿದ್ದರು. ಇನ್ನು 6 ಕೊರೊನಾ ಸೋಂಕಿತರಿರುವ ಶಂಕೆ ವ್ಯಕ್ತವಾಗಿದ್ದು, ವರದಿ ಬರಬೇಕಿದೆ. ಯಾದಗಿರಿ ಜಿಲ್ಲೆಯಲ್ಲಿ 38 ವರ್ಷದ ಪುರುಷ ಹಾಗೂ 33 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಿಬ್ಬರು ಗುಜರಾತ್‌ನ ಅಹಮದಾಬಾದ್‌ಗೆ ಹೋಗಿ ಬಂದಿದ್ದರು. ಇನ್ನು ಹುಬ್ಬಳ್ಳಿ 6, ಕುಂದಗಳೋಳದ ಇಬ್ಬರು, ಕಲಘಟಗಿಯ ಒಬ್ಬರು ಸೇರಿದಂತೆ ಒಟ್ಟು 9 ಜನರೂ ಅಹಮದಾಬಾದ್‌ಗೆ […]

ತಬ್ಲಿಘಿ ನಂಟಿನಿಂದ ಮತ್ತೆ ರಾಜ್ಯದಲ್ಲಿ 25 ಮಂದಿಗೆ ಕೊರೊನಾ ಸೋಂಕು!
Follow us on

ಬೆಂಗಳೂರು: ಹೊರರಾಜ್ಯಗಳಿಂದ ಬಂದಿದ್ದ ಒಟ್ಟು 31 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ 25 ಮಂದಿ ಅಹ್ಮದಾಬಾದ್​ನ ತಬ್ಲಿಘಿ ಜಮಾತ್​ಗೆ ಹೋಗಿ ಬಂದಿದ್ದರು. ಇನ್ನು 6 ಕೊರೊನಾ ಸೋಂಕಿತರಿರುವ ಶಂಕೆ ವ್ಯಕ್ತವಾಗಿದ್ದು, ವರದಿ ಬರಬೇಕಿದೆ.

ಯಾದಗಿರಿ ಜಿಲ್ಲೆಯಲ್ಲಿ 38 ವರ್ಷದ ಪುರುಷ ಹಾಗೂ 33 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಿಬ್ಬರು ಗುಜರಾತ್‌ನ ಅಹಮದಾಬಾದ್‌ಗೆ ಹೋಗಿ ಬಂದಿದ್ದರು. ಇನ್ನು ಹುಬ್ಬಳ್ಳಿ 6, ಕುಂದಗಳೋಳದ ಇಬ್ಬರು, ಕಲಘಟಗಿಯ ಒಬ್ಬರು ಸೇರಿದಂತೆ ಒಟ್ಟು 9 ಜನರೂ ಅಹಮದಾಬಾದ್‌ಗೆ ಹೋಗಿ ಬಂದಿದ್ದರು. ಹೀಗಾಗಿ ಸೋಂಕಿತರಲ್ಲಿ ತಬ್ಲಿಘಿಗಳೇ ಹೆಚ್ಚಾಗಿದ್ದಾರೆ.

Published On - 12:30 pm, Tue, 12 May 20