ಕೋಲಾರದಲ್ಲಿ ದಿಢೀರನೆ 5 ಪ್ರಕರಣ ಪತ್ತೆ! ಈ ಲಕ್ಷಣಗಳು ಭಾರೀ ಡೇಂಜರ್..

|

Updated on: May 12, 2020 | 6:53 PM

ಕೋಲಾರ: ಇಷ್ಟು ದಿನ ಒಂದೇ ಒಂದು ಕೇಸ್ ಪತ್ತೆಯಾಗದೆ ಗ್ರೀನ್ ಜೋನ್​ನಲ್ಲಿದ್ದ ಚಿನ್ನದ ನಾಡು ಕೋಲಾರ ಜಿಲ್ಲೆಗೂ ಇದೀಗ ಕೊರೊನಾ ಕ್ರಿಮಿ ಅಟ್ಯಾಕ್ ಆಗಿದೆ. ಜಿಲ್ಲೆಯ ಐವರಲ್ಲಿ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಕಥೆ ದಿಗ್ಭ್ರಮೆ ಮೂಡಿಸಿದೆ. ಸೋಂಕಿತರೆಲ್ಲರಿಗೂ ಪ್ರವಾಸದ ಇತಿಹಾಸವಿದೆ, ಆದ್ರೆ ಯಾರಲ್ಲೂ ಸಹ ಯಾವುದೇ ರೋಗ ಲಕ್ಷಣಗಳಿಲ್ಲ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿದ್ದ ಕಾರಣ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೊರೊನಾ ಟೆಸ್ಟ್​ ಮಾಡಿಸಿಕೊಂಡಿದ್ರು. ಆದ್ರೆ ಇಂದು ದಿಢೀರನೆ ಐವರಿಗೆ ಕೊರೊನಾ […]

ಕೋಲಾರದಲ್ಲಿ ದಿಢೀರನೆ 5 ಪ್ರಕರಣ ಪತ್ತೆ! ಈ ಲಕ್ಷಣಗಳು ಭಾರೀ ಡೇಂಜರ್..
Follow us on

ಕೋಲಾರ: ಇಷ್ಟು ದಿನ ಒಂದೇ ಒಂದು ಕೇಸ್ ಪತ್ತೆಯಾಗದೆ ಗ್ರೀನ್ ಜೋನ್​ನಲ್ಲಿದ್ದ ಚಿನ್ನದ ನಾಡು ಕೋಲಾರ ಜಿಲ್ಲೆಗೂ ಇದೀಗ ಕೊರೊನಾ ಕ್ರಿಮಿ ಅಟ್ಯಾಕ್ ಆಗಿದೆ. ಜಿಲ್ಲೆಯ ಐವರಲ್ಲಿ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಕಥೆ ದಿಗ್ಭ್ರಮೆ ಮೂಡಿಸಿದೆ.

ಸೋಂಕಿತರೆಲ್ಲರಿಗೂ ಪ್ರವಾಸದ ಇತಿಹಾಸವಿದೆ, ಆದ್ರೆ ಯಾರಲ್ಲೂ ಸಹ ಯಾವುದೇ ರೋಗ ಲಕ್ಷಣಗಳಿಲ್ಲ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿದ್ದ ಕಾರಣ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೊರೊನಾ ಟೆಸ್ಟ್​ ಮಾಡಿಸಿಕೊಂಡಿದ್ರು. ಆದ್ರೆ ಇಂದು ದಿಢೀರನೆ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಯಾರಲ್ಲೂ ರೋಗ ಲಕ್ಷಣಗಳಿಲ್ಲ!
ಕೊರೊನಾ ಲಕ್ಷಣಗಳು ಕಂಡು ಬಂದ್ರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬಹುದು. ಆದ್ರೆ, ಈ ಐವರಲ್ಲಿ ಯಾರಿಗೂ ಸಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಈ Asymptomatic Coronavirus ಭಾರೀ ಡೇಂಜರ್ ಆಗಿದೆ. ಈಗಾಗಲೇ ಹಲವು ಮಂದಿಗೆ ಕೊರೊನಾ ಹರಡಿರುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ, ಕೊರೊನಾ ದೃಢಪಟ್ಟ ನಂತರ ಇಂದು ಈ ಐವರು ಸೋಂಕಿತರನ್ನು ಕೊವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಭಾರೀ ಶಾಕ್ ನೀಡಿವೆ.

ಸಾರಿಗೆ ಬಸ್​ಗಳಿಗೆ ಔಷಧ ಸಿಂಪಡಣೆ:
ಕೊರೊನಾ ಕನ್ಫರ್ಮ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಮುಳಬಾಗಲು ನಗರ ಬಂದ್ ಮಾಡಿದ್ದಾರೆ. ಸೋಂಕಿತರು ಪ್ರಯಾಣಿಸಿದ್ದ ಸಾರಿಗೆ ಬಸ್​ಗಳಿಗೆ ಔಷಧ ಸಿಂಪಡಿಸಿದ್ದಾರೆ. ಸೋಂಕಿತರು ಓಡಾಟ ನಡೆಸಿದ್ದ ರಸ್ತೆಗಳು ಸೇರಿದಂತೆ ಸರ್ಕಾರಿ ವಾಹನಗಳಿಗೆ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದ್ದಾರೆ.

Published On - 6:46 pm, Tue, 12 May 20