ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ 28,869 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 548 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಾಗೇ 52,257 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 23,35,524ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 23854ಕ್ಕೆ ತಲುಪಿದೆ.
ಇಲ್ಲಿಯವರೆಗೆ ಒಟ್ಟು 17,76,695 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳು 5,34,954 ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಇಂದು 9,409 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗೇ 24ಗಂಟೆಯಲ್ಲಿ ರಾಜ್ಯರಾಜಧಾನಿಯಲ್ಲಿ 289 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ -451, ಬಳ್ಳಾರಿ-1109, ಬೆಳಗಾವಿ-948, ಬೆಂಗಳೂರು ಗ್ರಾಮಾಂತರ-678, ಬೆಂಗಳೂರು ನಗರ 9409, ಬೀದರ್-94, ಚಾಮರಾಜನಗರ -541, ಚಿಕ್ಕಬಳ್ಳಾಪುರ-487, ಚಿಕ್ಕಮಗಳೂರು-945, ಚಿತ್ರದುರ್ಗ-568, ದಕ್ಷಿಣ ಕನ್ನಡ-926, ದಾವಣಗೆರೆ-538, ಧಾರವಾಡ -955, ಗದಗ-469, ಹಾಸನ-273, ಹಾವೇರಿ-321, ಕಲಬುರಗಿ-399, ಕೊಡಗು 439, ಕೋಲಾರ 357, ಕೊಪ್ಪಳ 725, ಮಂಡ್ಯ 734, ಮೈಸೂರು-1879, ರಾಯಚೂರು-633, ರಾಮನಗರ 480, ಶಿವಮೊಗ್ಗ-719, ತುಮಕೂರು-1796, ಉಡುಪಿ 809, ಉತ್ತರ ಕನ್ನಡ-582, ವಿಜಯಪುರ 310, ಯಾದಗಿರಿಯಲ್ಲಿ 295 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಸ್ಕೂಟರ್ಗೆ ಡಿಕ್ಕಿ ಹೊಡೆದ ಕಾರು; ಫ್ಲೈಓವರ್ನಿಂದ 20 ಅಡಿ ಕೆಳಗಿರುವ ರಸ್ತೆಗೆ ಬಿದ್ದು ಮೃತಪಟ್ಟ ಮಹಿಳೆ