ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಕೆ, ರಾಜ್ಯ ನೇಕಾರರ ಸಂಘಗಳಿಗೆ 35 ಲಕ್ಷ ರೂಪಾಯಿ ದಂಡ

ರಾಯಚೂರು: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಕೆ ಮಾಡುತ್ತಿರುವುದಕ್ಕೆ ರಾಜ್ಯ ನೇಕಾರರ ಸಂಘಗಳಿಗೆ 35 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಶಿಕ್ಷಣ ಇಲಾಖೆ ಲೆಕ್ಕ ತಪಾಸಣೆ ವೇಳೆ ನೇಕಾರರು ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಸುತ್ತಿದ್ದಾರೆ ಎಂಬುವ ಮಾಹಿತಿ ಬೆಳಕಿಗೆ ಬಂದಿದೆ. ಹೀಗಾಗಿ 2018-19ನೇ ಸಾಲಿನ ಸಮವಸ್ತ್ರ ಪೂರೈಕೆ ಆದೇಶ ರದ್ದು ಮಾಡಲಾಗಿದೆ. ಇದರಿಂದ ನೊಂದಾಯಿತ ನೇಕಾರರು ಸಂಕಷ್ಟದಲ್ಲಿದ್ದಾರೆ. ಕಳಪೆ ಗುಣಮಟ್ಟದ ಶಾಲಾ ಸಮವಸ್ತ್ರ ಪೂರೈಕೆ ಮಾಡಿದ್ದಕ್ಕೆ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. 2017-18 ನೇ […]

ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಕೆ, ರಾಜ್ಯ ನೇಕಾರರ ಸಂಘಗಳಿಗೆ 35 ಲಕ್ಷ ರೂಪಾಯಿ ದಂಡ

Updated on: Dec 12, 2019 | 10:40 AM

ರಾಯಚೂರು: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಕೆ ಮಾಡುತ್ತಿರುವುದಕ್ಕೆ ರಾಜ್ಯ ನೇಕಾರರ ಸಂಘಗಳಿಗೆ 35 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಶಿಕ್ಷಣ ಇಲಾಖೆ ಲೆಕ್ಕ ತಪಾಸಣೆ ವೇಳೆ ನೇಕಾರರು ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಸುತ್ತಿದ್ದಾರೆ ಎಂಬುವ ಮಾಹಿತಿ ಬೆಳಕಿಗೆ ಬಂದಿದೆ. ಹೀಗಾಗಿ 2018-19ನೇ ಸಾಲಿನ ಸಮವಸ್ತ್ರ ಪೂರೈಕೆ ಆದೇಶ ರದ್ದು ಮಾಡಲಾಗಿದೆ. ಇದರಿಂದ ನೊಂದಾಯಿತ ನೇಕಾರರು ಸಂಕಷ್ಟದಲ್ಲಿದ್ದಾರೆ.

ಕಳಪೆ ಗುಣಮಟ್ಟದ ಶಾಲಾ ಸಮವಸ್ತ್ರ ಪೂರೈಕೆ ಮಾಡಿದ್ದಕ್ಕೆ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. 2017-18 ನೇ ಸಾಲಿನವರೆಗೂ ನೇಕಾರರಿಗೆ ಸಮವಸ್ತ್ರ ಪೂರೈಕೆಯಿಂದ 52 ಕೋಟಿ ಹಣ ಲಾಭವಾಗಿತ್ತು. ಆದ್ರೆ ಪ್ರಸಕ್ತ ವರ್ಷ ಶಾಲಾ ಸಮವಸ್ತ್ರ ಪೂರೈಕೆಗೆ ನೇಕಾರರಿಗೆ ಯಾವುದೇ ಸರಬರಾಜು ಆದೇಶ ನೀಡದೆ ಇರೊದ್ರಿಂದ ಸಾವಿರಾರು ನೇಕಾರರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.