AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕ್ಕೆಯಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ನಿರ್ಮಾಣವಾಗಿದೆ ಕಾಂಪೌಂಡ್

ಮಂಗಳೂರು: ಎಲ್ಲಿ ನೋಡಿದ್ರೂ.. ಯಾರ ಕೈಯಲ್ಲಿ ನೋಡಿದ್ರೂ ಪ್ಲಾಸ್ಟಿಕ್​ ಬಾಟಲ್​​ಗಳದ್ದೇ ಹಾವಳಿ.. ಕಂಡ ಕಂಡಲ್ಲಿ ಕಾಣೋದು ಪ್ಲಾಸ್ಟಿಕ್ ಬಾಟಲಿಗಳೇ ಕಣ್ಣಿಗೆ ಬೀಳ್ತವೆ.. ಆದ್ರೆ.. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ಲಾಸ್ಟಿಕ್​​ ಬಾಟಲ್​​​ನಲ್ಲೇ ಕಾಂಪೌಂಡ್​ ಅರಳಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಂದ್ರೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸೋ ಸುಕ್ಷೇತ್ರ. ಅದ್ರಲ್ಲೂ ವಿಶೇಷ ದಿನಗಳಲ್ಲಂತೂ ಭಕ್ತರ ದಂಡೇ ಹರಿದು ಬರುತ್ತೆ. ಈ ಪುಣ್ಯಕ್ಷೇತ್ರಕ್ಕೆ ಬರೋ ಪ್ರವಾಸಿಗರು ಬರಿಗೈಲಿ ಏನ್ ಬರ್ತಾರಾ.. ಪ್ಲಾಸ್ಟಿಕ್ ಬಾಟಲ್​ಗಳನ್ನ ತಂದು […]

ಕುಕ್ಕೆಯಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ನಿರ್ಮಾಣವಾಗಿದೆ ಕಾಂಪೌಂಡ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 12, 2019 | 8:33 AM

Share

ಮಂಗಳೂರು: ಎಲ್ಲಿ ನೋಡಿದ್ರೂ.. ಯಾರ ಕೈಯಲ್ಲಿ ನೋಡಿದ್ರೂ ಪ್ಲಾಸ್ಟಿಕ್​ ಬಾಟಲ್​​ಗಳದ್ದೇ ಹಾವಳಿ.. ಕಂಡ ಕಂಡಲ್ಲಿ ಕಾಣೋದು ಪ್ಲಾಸ್ಟಿಕ್ ಬಾಟಲಿಗಳೇ ಕಣ್ಣಿಗೆ ಬೀಳ್ತವೆ.. ಆದ್ರೆ.. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ಲಾಸ್ಟಿಕ್​​ ಬಾಟಲ್​​​ನಲ್ಲೇ ಕಾಂಪೌಂಡ್​ ಅರಳಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಂದ್ರೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸೋ ಸುಕ್ಷೇತ್ರ. ಅದ್ರಲ್ಲೂ ವಿಶೇಷ ದಿನಗಳಲ್ಲಂತೂ ಭಕ್ತರ ದಂಡೇ ಹರಿದು ಬರುತ್ತೆ. ಈ ಪುಣ್ಯಕ್ಷೇತ್ರಕ್ಕೆ ಬರೋ ಪ್ರವಾಸಿಗರು ಬರಿಗೈಲಿ ಏನ್ ಬರ್ತಾರಾ.. ಪ್ಲಾಸ್ಟಿಕ್ ಬಾಟಲ್​ಗಳನ್ನ ತಂದು ಎಲ್ಲೆಂದರಲ್ಲಿ ಬಿಸಾಡಿ ಹೋಗ್ತಿದ್ರು. ಇದೀಗ ದೇಶಾದ್ಯಂತ ಪ್ಲಾಸ್ಟಿಕ್‌ ನಿಷೇಧ ಚರ್ಚೆಯಲ್ಲಿರೋವಾಗ್ಲೇ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​​ನವರು ಪ್ಲಾಸ್ಟಿಕ್ ಬಾಟಲ್​ಗಳ ಪುನರ್‌ ಬಳಕೆ ಮಾಡಿದ್ದಾರೆ. ದೇಗುಲದ ಬಳಿಯೇ ತ್ಯಾಜ್ಯ ಘಟಕ ಸ್ಥಾಪಿಸಿ ವೇಸ್ಟ್​ ಆಗಿರೋ ಪ್ಲಾಸ್ಟಿಕ್ ಬಾಟಲ್​ಗಳಿಂದಲೇ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ.

ಇನ್ನು, ಸಂಗ್ರಹವಾದ ಒಂದು ಲೀಟರ್‌ನ ಪ್ಲಾಸ್ಟಿಕ್‌ ಬಾಟಲಿಗಳಿಗೆ ಮರಳು, ಸಣ್ಣ ಜಲ್ಲಿ ತುಂಬಲಾಗುತ್ತದೆ. ಸಿಮೆಂಟ್‌ ಮಿಶ್ರಣ ಉಪಯೋಗಿಸಿ ಇಟ್ಟಿಗೆಯಂತೆಯೇ ಜೋಡಿಸಿ ಗೋಡೆ ನಿರ್ಮಿಸಲಾಗುತ್ತಿದೆ. ಇಂಜಾಡಿ ಬಳಿ ಇರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​ನ ತ್ಯಾಜ್ಯ ಘಟಕದಲ್ಲಿ 4 ಅಡಿ ಎತ್ತರ ಮತ್ತು 20 ಮೀ. ಉದ್ದದ ಗೋಡೆಗೆ 2,500 ಬಾಟಲ್​ಗಳನ್ನು ಬಳಸಲಾಗಿದೆ.

ಪ್ರತೀ 20 ಮೀ. ಬಳಿಕ ಒಂದರಂತೆ ಕಲ್ಲಿನ ಆಧಾರಸ್ತಂಭ ನಿರ್ಮಿಸಿದ್ದಾರೆ. ನುರಿತ ಮೇಸ್ತ್ರಿ ಸಹಾಯದಿಂದ ಘನತ್ಯಾಜ್ಯ ಘಟಕದ ಸಿಬ್ಬಂದಿಯೇ ಕಾಮಗಾರಿ ಮಾಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿದೇಶದಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳನ್ನ ಮರುಬಳಕೆ ಮಾಡಿ ಹೊಸ ಕಾರ್ಯ ಮಾಡಿರೋದು ನೋಡ್ತಿದ್ವಿ. ಆದ್ರೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗ ಮಾಡಲಾಗಿದೆ. ಎಸೆಯೋ ಬಾಟಲ್​ಗಳಿಂದ ಹೀಗೂ ಮಾಡ್ಬೋದು ಅನ್ನೋದನ್ನ ಇಲ್ಲಿಯವರು ತೋರಿಸಿ ಕೊಟ್ಟಿದ್ದಾರೆ.

Published On - 8:32 am, Thu, 12 December 19

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್