ಹುಳಿಮಾವು: ಘೋರ ದುರಂತ ನಡೆದರೂ ಎಚ್ಚೆತ್ತುಕೊಳ್ಳದ ಪಾಲಿಕೆ
ಬೆಂಗಳೂರು: ಕೆಲದಿನಗಳ ಹಿಂದೆ ನಗರದಲ್ಲಿ ಅತಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಒಡೆದ ಕೆರೆ ಏರಿಯಿಂದ ಕೊಳಚೆ ನೀರು ಧುಮ್ಮಿಕ್ಕಿತ್ತು. ನೋಡ ನೋಡ್ತಿದ್ದಂತೆ ಅಲ್ಲಿದ್ದ ಮನೆಗಳು, ಕಟ್ಟಡಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿತ್ತು. ಇಷ್ಟೆಲ್ಲಾ ಆದರೂ ಬಿಬಿಎಂಪಿ ಮಾತ್ರ ಎಚ್ಚೆತ್ತಂತೆ ಕಾಣುತ್ತಿಲ್ಲ. ಇನ್ನು ಈ ಬೇಜವಾಬ್ದಾರಿ ವರ್ತನೆ, ಮತ್ತೊಮ್ಮೆ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಕೊಳಚೆ ನೀರು ನುಗ್ಗಿದ್ದ ಪರಿಣಾಮ ಸೂರು ಕಳೆದುಕೊಂಡವರ ಸ್ಥಿತಿಯಂತೂ ಕರುಣಾಜನಕ. ನವೆಂಬರ್ 24ರಂದು ನಡೆದಿದ್ದ ಘಟನೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಷ್ಟೆಲ್ಲಾ […]
ಬೆಂಗಳೂರು: ಕೆಲದಿನಗಳ ಹಿಂದೆ ನಗರದಲ್ಲಿ ಅತಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಒಡೆದ ಕೆರೆ ಏರಿಯಿಂದ ಕೊಳಚೆ ನೀರು ಧುಮ್ಮಿಕ್ಕಿತ್ತು. ನೋಡ ನೋಡ್ತಿದ್ದಂತೆ ಅಲ್ಲಿದ್ದ ಮನೆಗಳು, ಕಟ್ಟಡಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿತ್ತು. ಇಷ್ಟೆಲ್ಲಾ ಆದರೂ ಬಿಬಿಎಂಪಿ ಮಾತ್ರ ಎಚ್ಚೆತ್ತಂತೆ ಕಾಣುತ್ತಿಲ್ಲ. ಇನ್ನು ಈ ಬೇಜವಾಬ್ದಾರಿ ವರ್ತನೆ, ಮತ್ತೊಮ್ಮೆ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.
ಕೊಳಚೆ ನೀರು ನುಗ್ಗಿದ್ದ ಪರಿಣಾಮ ಸೂರು ಕಳೆದುಕೊಂಡವರ ಸ್ಥಿತಿಯಂತೂ ಕರುಣಾಜನಕ. ನವೆಂಬರ್ 24ರಂದು ನಡೆದಿದ್ದ ಘಟನೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಷ್ಟೆಲ್ಲಾ ಆದರೂ ಕ್ರಮ ಕೈಗೊಳ್ಳದ ಬಿಬಿಎಂಪಿ ನಿದ್ದೆಗೆ ಜಾರಿದೆ ಅನ್ನಿಸುತ್ತಿದೆ.
ದುರಂತ ಸಂಭವಿಸಿದ್ರೂ ಎಚ್ಚೆತ್ತುಕೊಂಡಿಲ್ಲ, ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ! ಸುಮಾರು 2 ಸಾವಿರ ಮನೆಗಳು ಹುಳಿಮಾವು ಕೆರೆ ದುರಂತಕ್ಕೆ ಬಲಿಯಾಗಿದ್ದವು. ನೀರು ನುಗ್ಗಿದ್ದರಿಂದ ಸಾವಿರಾರು ಮನೆಗಳಿಗೆ ನೀರಿನ ಜೊತೆ ವಿಷಜಂತುಗಳು ಕೂಡ ಎಂಟ್ರಿ ಕೊಟ್ಟಿದ್ದವು. ಎಲ್ಲೆಂದರಲ್ಲಿ ಹಾವುಗಳು ಕಾಣಿಸಿ ಆತಂಕ ಸೃಷ್ಟಿಯಾಗಿತ್ತು. ಇಷ್ಟೆಲ್ಲಾ ನಡೆದಿದ್ರೂ, ಪಾಲಿಕೆ ತಲೆಕೆಡಿಸಿಕೊಂಡಿಲ್ಲ.
130 ಎಕರೆಗೂ ಹೆಚ್ಚಿರುವ ಹುಳಿಮಾವು ಕೆರೆ ವಿಸ್ತಿರ್ಣದಲ್ಲಿ, 20ರಿಂದ 30 ಎಕರೆ ಒತ್ತುವರಿಯಾಗಿದೆ. ಇದನ್ನ ತೆರವು ಮಾಡಲು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಮತ್ತೆ ದುರಂತಕ್ಕೆ ಆಹ್ವಾನ ನೀಡಿದಂತಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನುಗ್ಗುತ್ತಿದೆ ಕೊಳಚೆ ನೀರು, ಕೆರೆ ಏರಿ ಸರಿಪಡಿಸಲು ಸರ್ಕಸ್! ಮತ್ತೊಂದ್ಕಡೆ ಕೆರೆ ಏರಿ ಭದ್ರಪಡಿಸಲು ಪಾಲಿಕೆ ಸರ್ಕಸ್ ಮಾಡುತ್ತಿದೆ. ಆದ್ರೆ, ಸುತ್ತಮುತ್ತಲ ಪ್ರದೇಶಗಳಿಂದ ಕೆರೆಗೆ ನಿರಂತರವಾಗಿ ಕೊಳಚೆ ನೀರು ಬರ್ತಿರೋ ಕಾರಣ ನೀರು ಏರಿಕೆಯಾಗ್ತಿದೆ. ಒಮ್ಮೆ ಜೋರಾಗಿ ಮಳೆ ಬಂದರೂ, ಮತ್ತೊಮ್ಮೆ ಘೋರ ದುರಂತ ಸಂಭವಿಸುವ ಅಪಾಯವಿದೆ. ಇಷ್ಟೆಲ್ಲಾ ಆಗಿದ್ರೂ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ.
ಈ ಬಗ್ಗೆ ಮೇಯರ್ರನ್ನ ಕೇಳಿದ್ರೆ, ಅಧ್ಯಯನದ ಬಳಿಕ ಒತ್ತುವರಿ ತೆರವು ಮಾಡ್ತೀವಿ ಅಂತಾ ಭರವಸೆ ನೀಡ್ತಿದ್ದಾರೆ. ಒಮ್ಮೆ ಸಂಭವಿಸಿದ ಆಪತ್ತಿನಿಂದ್ಲೂ ಪಾಲಿಕೆ ಅಧಿಕಾರಿಗಳು ಪಾಠ ಕಲಿತಂತೆ ಕಾಣ್ತಿಲ್ಲ. ಇದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.