ವ್ಯಕ್ತಿ ಕಾಲಿಗೆ ಬಿದ್ದರೂ ಸ್ಪಂದಿಸದ ಅನಿತಾ ಕುಮಾರಸ್ವಾಮಿ
ರಾಮನಗರ: ವ್ಯಕ್ತಿ ಕಾಲಿಗೆ ಬಿದ್ದರೂ ಅನಿತಾ ಕುಮಾರಸ್ವಾಮಿ ಸ್ಪಂದಿಸದೆ ತೆರಳಿರುವ ಅಮಾನವೀಯ ಘಟನೆ ರಾಮನಗರ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ JDS ಶಾಸಕಿ ಅನಿತಾ ಕುಮಾರಸ್ವಾಮಿ ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ತೆರಳುವಾಗ ರಾಜು ಎಂಬ ವ್ಯಕ್ತಿ ಶಾಸಕಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಕಾಲಿಗೆ ಬಿದ್ದು ಬೇಡಿಕೊಂಡರು ಇದ್ಯಾವುದಕ್ಕೂ ಸ್ಪಂದಿಸದೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತೆರಳಿದ್ದಾರೆ. ಬಳಿಕ ಶಾಸಕಿ ಕಾರಿನ್ನು ತಡೆಯಲು ಸಾರ್ವಜನಿಕರಿಬ್ಬರು ಕಾರಿಗೆ ಅಡ್ಡ ಕುಳಿತ್ತಿದ್ದರು. […]
ರಾಮನಗರ: ವ್ಯಕ್ತಿ ಕಾಲಿಗೆ ಬಿದ್ದರೂ ಅನಿತಾ ಕುಮಾರಸ್ವಾಮಿ ಸ್ಪಂದಿಸದೆ ತೆರಳಿರುವ ಅಮಾನವೀಯ ಘಟನೆ ರಾಮನಗರ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ JDS ಶಾಸಕಿ ಅನಿತಾ ಕುಮಾರಸ್ವಾಮಿ ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ತೆರಳುವಾಗ ರಾಜು ಎಂಬ ವ್ಯಕ್ತಿ ಶಾಸಕಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಕಾಲಿಗೆ ಬಿದ್ದು ಬೇಡಿಕೊಂಡರು ಇದ್ಯಾವುದಕ್ಕೂ ಸ್ಪಂದಿಸದೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತೆರಳಿದ್ದಾರೆ.
ಬಳಿಕ ಶಾಸಕಿ ಕಾರಿನ್ನು ತಡೆಯಲು ಸಾರ್ವಜನಿಕರಿಬ್ಬರು ಕಾರಿಗೆ ಅಡ್ಡ ಕುಳಿತ್ತಿದ್ದರು. ಇದಕ್ಕೆ ಆಕ್ರೂಶ ವ್ಯಕ್ತಪಡಿಸಿದ JDS ತಾಲೂಕು ಅಧ್ಯಕ್ಷ ರಾಜಶೇಖರ್ ರಾಜು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ತಮ್ಮ ಕಣ್ಮುಂದೆಯೇ ದೌರ್ಜನ್ಯ ನಡೆಯುತ್ತಿದ್ದರೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತ್ರ ಮೌನದಲ್ಲೇ ಇದ್ದರು. ಇಷ್ಟಾದ್ರೂ ಯಾವುದಕ್ಕೂ ಸ್ಪಂದಿಸದೆ ಕಂಡುಕಾಣದಂತೆ ತೆರಳಿದ್ದಾರೆ.
Published On - 4:29 pm, Wed, 11 December 19