ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 36 ಜನರಿಗೆ ಕೊರೊನಾ ಕ್ರಿಮಿ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ 12 ಹೊಸ ಕೇಸ್ಗಳು ಪತ್ತೆಯಾಗಿದೆ. ಉತ್ತರ ಕನ್ನಡ 10, ದಾವಣಗೆರೆ 6, ಚಿತ್ರದುರ್ಗ 3, ಬೀದರ್ 3, ವಿಜಯಪುರ 1, ತುಮಕೂರು ಜಿಲ್ಲೆಯಲ್ಲಿ 1 ಕೊರೊನಾ ಕೇಸ್ ದೃಢಪಟ್ಟಿದೆ.
ಆತಂಕ ಸೃಷ್ಟಿಸಿದ್ದ ಹೊಂಗಸಂದ್ರದ 188 ಮಂದಿ ಪೈಕಿ ಐವರಿಗಷ್ಟೇ ಕೊರೊನಾ ಅಟ್ಯಾಕ್ ಆಗಿದೆ. ಪಾದರಾಯನಪುರದಲ್ಲಿ 7 ಮಂದಿಗೆ ಕೊರೊನಾ ವಕ್ಕರಿಸಿದೆ.
789 ಕೊರೊನಾ ಸೋಂಕಿತರ ಪೈಕಿ 379 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 30 ಜನ ಬಲಿಯಾಗಿದ್ದು, 380 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 12:23 pm, Sat, 9 May 20