ಮಾದಕದ ಅಮಲಿನಲ್ಲಿ ತೇಲುತ್ತಿದ್ಯಾ ಉದ್ಯಾನನಗರಿ?
ಬೆಂಗಳೂರು: ನಗರದಲ್ಲಿ ಮಾದಕವ್ಯಸನಿಗಳ ಸಂಖ್ಯೆ ಹೆಚ್ಚಳವಾಗಿದೆ. ಎನ್‌ಡಿಪಿಎಸ್ (ಮಾದಕ ವಸ್ತು ನಿಯಂತ್ರಣ ಕಾಯ್ದೆ) ಆ್ಯಕ್ಟ್‌ನಡಿ ಬರೋಬ್ಬರಿ ಈ ವರ್ಷ 700 ಪ್ರಕರಣ ದಾಖಲಾಗಿವೆ. 2017ರಲ್ಲಿ 354 ಪ್ರಕರಣ, 2018ರಲ್ಲಿ 286 ಪ್ರಕರಣ ದಾಖಲಾಗಿದ್ವು. ಈ ಬಾರಿ 700 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಮಾದಕವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಉಡ್ತಾ ಪಂಜಾಬ್ ಮಾದರಿಯಲ್ಲಿ ಉಡ್ತಾ ಬೆಂಗಳೂರು ನಿರ್ಮಾಣವಾಗುತ್ತಿದೆ? ಮತ್ತೊಂದೆಡೆ ಸೈಬರ್ ಕ್ರೈಂ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಪ್ರಸಕ್ತ ವರ್ಷ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ವರ್ಷ […]
ಬೆಂಗಳೂರು: ನಗರದಲ್ಲಿ ಮಾದಕವ್ಯಸನಿಗಳ ಸಂಖ್ಯೆ ಹೆಚ್ಚಳವಾಗಿದೆ. ಎನ್‌ಡಿಪಿಎಸ್ (ಮಾದಕ ವಸ್ತು ನಿಯಂತ್ರಣ ಕಾಯ್ದೆ) ಆ್ಯಕ್ಟ್‌ನಡಿ ಬರೋಬ್ಬರಿ ಈ ವರ್ಷ 700 ಪ್ರಕರಣ ದಾಖಲಾಗಿವೆ. 2017ರಲ್ಲಿ 354 ಪ್ರಕರಣ, 2018ರಲ್ಲಿ 286 ಪ್ರಕರಣ ದಾಖಲಾಗಿದ್ವು. ಈ ಬಾರಿ 700 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಮಾದಕವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಉಡ್ತಾ ಪಂಜಾಬ್ ಮಾದರಿಯಲ್ಲಿ ಉಡ್ತಾ ಬೆಂಗಳೂರು ನಿರ್ಮಾಣವಾಗುತ್ತಿದೆ?
ಮತ್ತೊಂದೆಡೆ ಸೈಬರ್ ಕ್ರೈಂ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಪ್ರಸಕ್ತ ವರ್ಷ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ವರ್ಷ 5 ಸಾವಿರ ಪ್ರಕರಣಗಳು ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ದ್ವಿಗುಣವಾಗಿದೆ. ಆದ್ರೆ ಕೊಲೆ, ಡಕಾಯಿತಿ, ರಾಬರಿ ಪ್ರಕರಣಗಳು ಇಳಿಕೆಯಾಗಿವೆ. ಪ್ರಸಕ್ತ ವರ್ಷ 189 ಕೊಲೆ, 31 ಡಕಾಯಿತಿ, 461 ರಾಬರಿ ಹಾಗೂ 195 ಸರಗಳ್ಳತನ ಪ್ರಕರಣಗಳು ಮಾತ್ರ ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಇದು ತೀರಾ ಕಡಿಮೆಯಾಗಿದೆ.
Published On - 9:31 am, Tue, 17 December 19