ಲಂಚಕ್ಕಾಗಿ ಅಧಿಕಾರಿಗಳಿಂದ ಕಿರುಕುಳ, ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ದಂಪತಿಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 11, 2022 | 3:25 PM

ಇಬ್ಬರು ದಂಪತಿಗಳು ಸರ್ಕಾರಿ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ನಮಗೆ ದಯಾಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಖಂಡಿಕಾಯಲ್ಲಿ ನಡೆದಿದೆ.

ಲಂಚಕ್ಕಾಗಿ ಅಧಿಕಾರಿಗಳಿಂದ ಕಿರುಕುಳ, ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ದಂಪತಿಗಳು
ಇಬ್ಬರು ದಂಪತಿಗಳು ಸರ್ಕಾರಿ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ನಮಗೆ ದಯಾಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.
Follow us on

ಶಿವಮೊಗ್ಗ: ಇಬ್ಬರು ದಂಪತಿಗಳು ಸರ್ಕಾರಿ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ನಮಗೆ ದಯಾಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಖಂಡಿಕಾಯಲ್ಲಿ ನಡೆದಿದೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ದಂಪತಿಗಳು ಹೇಳಿದ್ದಾರೆ. ಶ್ರೀಕಾಂತ್ ನಾಯ್ಕ್-ಸುಜಾತ ನಾಯ್ಕ್​​ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಕಾಂತ್ ನಾಯ್ಕ್-ಸುಜಾತ ನಾಯ್ಕ್ ದಂಪತಿಗಳಿಗೆ ಸಂಬಂಧಿಸಿದ ಜಮೀನಿನಲ್ಲಿ‌ರುವ ಸೈಟ್​ಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ನಿವೇಶನಗಳ ಅಭಿವೃದ್ಧಿಗೆ ಲಂಚ ನೀಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಗ್ರಾಮ ಪಂಚಾಯತಿಗೆ ಶುಲ್ಕ ನೀಡಿ ಅನುಮೋದನೆಗೆ ಮನವಿ ಮಾಡಿದ್ದೇವು, ಆದರೆ ಶುಲ್ಕ ನೀಡಿದರೂ ಅಧಿಕಾರಿಗಳು 3-4 ಬಾರಿ ಅಲೆದಾಡಿಸಿದ್ದಾರೆ, ಪ್ರತಿದಿನ ಸರ್ಕಾರಿ ಕಚೇರಿ ಮುಂದೆ ನಿಂತು ನಿಂತು ಸಾಕಾಗಿದೆ. ಇದೀಗ ಪಿಡಿಒ 5 ಲಕ್ಷ ಹಣ ಹಾಗೂ ತಾ.ಪಂ. ಇಒ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣವನ್ನು ನಾವು ಎಲ್ಲಿಂದ ತರಬೇಕು, ಅನೇಕ ಬಾರಿ ಈ ಬಗ್ಗೆ ದೂರು ನೀಡದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಸೂಕ್ತ ಪರಿಹಾರ ಕೊಡಿಸಿ ಇಲ್ಲವೇ ದಯಾಮರಣ ಕೊಡಿ; ತಾಯಿ ಮತ್ತು ಮಗನಿಂದ ರಾಷ್ಟ್ರಪತಿಗೆ ಪತ್ರ

ಇಬ್ಬರು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಪಿಡಿಒ, ತಾ.ಪಂ. ಇಒ ವಿರುದ್ಧ ಶ್ರೀಕಾಂತ್ ದಂಪತಿಗಳು ಆರೋಪಿಸಿದ್ದಾರೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ದಯಾಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದ ಶ್ರೀಕಾಂತ್​ ದಂಪತಿಗಳು ಹೇಳಿದ್ದಾರೆ.  ಅಧಿಕಾರಿಗಳು ಅಷ್ಟೊಂದು ಮೊತ್ತದ ಹಣಕ್ಕೆ ಬೇಡಿಕೆ ಇಟ್ಟರೆ, ಬಡ ಕುಟುಂಬಗಳು ಏನು ಮಾಡಬೇಕು. ಈ ಕಾರಣಕ್ಕೆ ನಾವು   ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

 

 

Published On - 3:25 pm, Fri, 11 November 22