ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಕ್ಲಾಂಪ್​ ಹಾಕಿದ್ದಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಥಳಿಸಿದ ಚಾಲಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 20, 2023 | 1:16 PM

ನೋ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣಕ್ಕೆ ನಡುರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹಿಡಿದು ಹಲ್ಲೆ ಮಾಡಿದ ಘಟನೆ ನಡೆದಿದೆ.

ಬೆಂಗಳೂರು: ನೋ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣಕ್ಕೆ ನಡುರಸ್ತೆಯಲ್ಲಿ ಪೊಲೀಸ್(Police) ಸಿಬ್ಬಂದಿಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಂಚಾರಿ ಪೊಲೀಸ್ ಸಿಬ್ಬಂದಿಯಿ ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆ(ಜು.19) ಸಂಜೆ 6 ಗಂಟೆ ಸುಮಾರಿಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ಸಿಬ್ಬಂದಿ ದೂರಿನಲ್ಲಿ ಮಾಹಿತಿ ನೀಡಿದ್ದರು.

ಪಾರ್ಕಿಂಗ್ ವಿಚಾರವಾಗಿ ಪರಿಶೀಲನೆ ನಡೆಸುತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಉಮೇಶ್​, ಈ ವೇಳೆ ಕಾರ್ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿರುವುದು ಪತ್ತೆಯಾಗಿದೆ. ಹೀಗಾಗಿ ಗಾಡಿಯ ಟೈರ್​ಗೆ ಕ್ಲಾಂಪಿಂಗ್ ಹಾಕಿದ್ದರಂತೆ. ಈ ವೇಳೆ ಇದನ್ನು ಪ್ರಶ್ನಿಸಿದ್ದ ವ್ಯಕ್ತಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಹಲ್ಲೆ ಮಾಡಿದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದು, ನಿಜಕ್ಕೂ ಹಲ್ಲೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಬಂಧಿಸಲು ತೆರಳಿದ್ದಾಗ ಕಾನ್ಸ್​ಟೇಬಲ್ ಮೇಲೆ ಹಲ್ಲೆ: ಆತ್ಮರಕ್ಷಣೆಗಾಗಿ ರೌಡಿಶೀಟರ್ ಕಾಲಿಗೆ ಫೈರಿಂಗ್ ಮಾಡಿದ ಪೊಲೀಸ್​

ಹಲ್ಲೆ ಮಾಡಿದಾತ ಮಹಿಳೆಯೊರ್ವರನ್ನ ಆಸ್ಪತ್ರೆಗೆ ಕರೆತಂದಿದ್ದ

ಇನ್ನು ಹಲ್ಲೆ ಮಾಡಿದಾತ ಆಸ್ಪತ್ರೆಗೆ ಮಹಿಳೆಯೊರ್ವರನ್ನು ಕರೆತಂದಿದ್ದರು. ಈ ಮಧ್ಯೆ ಗಲಾಟೆಯಾಗಿದೆ. ಈ ಕುರಿತು ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯಿಂದ ಮಾಹಿತಿ ಪಡೆಯಲಿದ್ದಾರೆ. ಬಳಿಕ ಹಲ್ಲೆಯ ಸತ್ಯ ಅಸತ್ಯತೆಗಳು ಹೊರಬಿಳಲಿದೆ. ಸದ್ಯ ಬಾಣಸವಾಡಿ ಪೊಲೀಸರು ಹಲ್ಲೆ ನಡೆಸಿದಾತನ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Thu, 20 July 23

Follow us on