ತುಮಕೂರು, (ಆಗಸ್ಟ್ 03): ಸೀಮಂತ ಮುಗಿಸಿ ಹೆಂಡತಿಯನ್ನು ತವರು ಮನೆಗೆ ಕಳಿಸಿಕೊಟ್ಟಿದ ಗಂಡ ನಾಪತ್ತೆಯಾಗಿದ್ದಾನೆ. ಇದೀಗ ಮತ್ತೊಂದೆಡೆ ಹೆಂಡತಿಗೆ ಮಗು ಜನಿಸಿದ್ದರೂ ಮುಖ ನೋಡುವುದಕ್ಕೂ ಬಂದಿಲ್ಲ. ಚಂದ್ರಶೇಖರ್ ಉಪನ್ಯಾಸಕರಾಗಿದ್ದರೆ, ಶೋಭಾ ಎಂಟೆಕ್ ಪದವೀಧರೆಯಾಗಿದ್ದು, ಶೋಭಾ ಸೀಮಂತ ಮುಗಿಸಿಕೊಂಡು ತವರು ಮನೆಗೆ ತೆರಳಿದ ಬಳಿಕ ಪತಿ ಚಂದ್ರಶೇಖರ್ ಕಾಣೆಯಾಗಿದ್ದಾನೆ. ಇದರಿಂದ ಕಂಗಾಲಾಗಿರುವ ಮಹಿಳೆ, ಈ ಬಗ್ಗೆ ತುಮಕೂರು ಜಿಲ್ಲೆ ಶಿರಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೊನೆಗೆ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕಳಿತ್ತಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ: ಗಲಾಟೆಯಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ, ದೂರು ದಾಖಲು
ಪತ್ನಿಯನ್ನು ನೋಡಲೂ ಹೋಗಿಲ್ಲ. ಈಗ ಮಗು ಜನಿಸಿದರೂ ಮುಖ ನೋಡಲು ಹೋಗಿಲ್ಲ. ಒಂದು ವರ್ಷ ಕಳೆದರೂ ಪತ್ತೆ ಇಲ್ಲ. ಇದರಿಂದ ಆತಂಕಗೊಂಡ ಶೋಭಾ, ಮಹಿಳಾ ಸಾಂತ್ವನ ಕೇಂದ್ರ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವರ್ಷವಾದರೂ ಗಂಡ ಸಿಗುತ್ತಿಲ್ಲ. ಇನ್ನು ಗಂಡನ ಮನೆಗೆ ಹೋದರೆ ಅತ್ತೆ ಮಾವ ಕೂಡ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ನಾನು ಬಂದ ಕೂಡಲೇ ಮನೆ ಬೀಗ ಹಾಕಿಕೊಂಡು ಅತ್ತೆ-ಮಾವ ಕೂಡ ಎಸ್ಕೇಪ್ ಆಗುತ್ತಾರೆ ಎಂದು ಶೋಭಾ ಅಳಲು ತೋಡಿಕೊಂಡಿದ್ದಾರೆ.
ಇದೀಗ ಶೋಭಾ, ಸದ್ಯ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕುಳಿತುಕೊಂಡಿದ್ದು, ತನ್ನ ಪತಿ ಸಿಗುವವರೆಗೂ ಧರಣಿಯಿಂದ ಮೇಲೇಳಲ್ಲ ಎನ್ನುತ್ತಿದ್ದಾರೆ. ಇನ್ನು ಶೋಭಾಗೆ ತಂದೆ ತಾಯಿ ಸಹ ಸಾಥ್ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ