ಮೈಸೂರು ಅರಮನೆ ವೈಶಿಷ್ಟ್ಯತೆ ಕಂಡು, ಇತಿಹಾಸ-ಪರಂಪರೆ ಕೇಳಿ ದಂಗಾದ ಜಿ-20 ಶೃಂಗಸಭೆ ಪ್ರತಿನಿಧಿಗಳು
ಅರಮನೆಯ ಸಿಬ್ಬಂದಿ ಗಣ್ಯರನ್ನು ಆದರದಿಂದ ಬರಮಾಡಿಕೊಂಡು, ಎಲ್ಲ ವಿಶೇಷತೆಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ.
ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ (cultural city) ಜಿ-20 ಶೃಂಗಭೆಯ (G-20 Summit) ಪ್ರತಿನಿಧಿಗಳು ಕಳೆದ ಮೂರು ದಿನಗಳಿಂದ ಪ್ರವಾಸದಲ್ಲಿದ್ದಾರೆ. 20 ರಾಷ್ಟ್ರಗಳ ಸುಮಾರು 250ರಷ್ಟು ಸದಸ್ಯರು ಮೈಸೂರು ಅರಮನೆ (Mysuru palace) ಅಂದಚೆಂದ, ಒಡೆಯರ್ ಅರಸೊತ್ತಿಗೆಯ ಇತಿಹಾಸ, ಪರಂಪರೆ, ಅರಮನೆ, ಅದರ ವಿನ್ಯಾಸ, ಅರಮನೆ ಮೈದಾನ ಮೊದಲಾದವುಗಳನ್ನು ಕಂಡು ರೋಮಾಂಚನಗೊಂಡಿದ್ದಾರೆ. ಅರಮನೆಯ ವೈಶಿಷ್ಟ್ಯತೆ ಮತ್ತು ನಾಡಹಬ್ಬ ದಸರಾ ಉತ್ಸವದ ವಿವರಣೆ ಮತ್ತು ಸಾಕ್ಷ್ಯ ಚಿತ್ರಗಳು ವಿದೇಶಿ ಪ್ರತಿನಿಧಿಗಳನ್ನು ಬೆಕ್ಕಸ ಬೆರಗಾಗಿಸಿದೆ. ಅರಮನೆಯ ಸಿಬ್ಬಂದಿ ಗಣ್ಯರನ್ನು ಆದರದಿಂದ ಬರಮಾಡಿಕೊಂಡು, ಎಲ್ಲ ವಿಶೇಷತೆಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಭಾರತವೂ ಸೇರಿದಂತೆ ಜಪಾನ್, ಚೀನಾ, ಯುಎಸ್, ಚೀನಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳ ಪ್ರತಿನಿಧಿಗಳು ಅರಮನೆಯಲ್ಲಿ ಇಟ್ಟಿರುವ ಪ್ರವಾಸಿ ಪುಸ್ತಕದಲ್ಲಿ ತಮ್ಮ ಮೈಸೂರು ಅರಮನೆಯಲ್ಲಿ ತಾವು ಕಂಡಿದ್ದರ ಬಗ್ಗೆ ಅನಿಸಿಕೆಗಳನ್ನು ಬರೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ