ವಿಜಯಪುರ: ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ (Accident) ನವ ವಿವಾಹಿತರು (Married Couple) ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ನಗರದ ಹೊರವಲಯದ ಸೊಲ್ಲಾಪುರ ಬೈಪಾಸ್ (Solapur Bypass) ಬಳಿ ತಡರಾತ್ರಿ ನಡೆದಿದೆ. ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಮೃತದುರ್ದೈವಿಗಳು. ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ನಡೆದ ದುರ್ಘಟನೆ ಸಂಭವಿಸಿದೆ. ಮೃತ ಹೊನಮಲ್ಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ತಿಂಗಳು ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿಯ ವಿವಾಹವಾಗಿತ್ತು. ಮದುವೆಯಾಗಿ 24 ದಿನಗಳಲ್ಲೇ ನವ ಜೋಡಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು: ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ನಡೆದಿದೆ. ತಡರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಮತ್ತು ಮೈಸೂರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ, ಎತ್ತು ಸಾವು
ಕಾರಿನಲ್ಲಿದ್ದ ಐವರು ಯುವಕರು, ಸ್ನೇಹಿತನ ಮದುವೆಗೆ ತೆರಳಿ ವಾಪಸ್ ಕೊರಟಗೆರೆ ಹಾಗೂ ಕೊಡಿಗೇನಹಳ್ಳಿಗೆ ತಂಡ ಬರುತ್ತಿದ್ದರು. ಗಾಯಗೊಂಡ ಮೂವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Wed, 14 June 23