ರೈತರ ಹೋರಾಟಕ್ಕೆ ‘ಭಜರಂಗಿ’ ಬಲ: ರೈತರೊಂದಿಗೆ ನಾವು ಇರ್ತೇವೆ ಎಂದ್ರು ಶಿವರಾಜ್​ಕುಮಾರ್

|

Updated on: Dec 08, 2020 | 3:24 PM

ಸ್ಯಾಂಡಲ್​ವುಡ್​ ನಟ ಶಿವರಾಜ್​ ಕುಮಾರ್ ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ರೈತರ ಹೋರಾಟಕ್ಕೆ ‘ಭಜರಂಗಿ’ ಬಲ: ರೈತರೊಂದಿಗೆ ನಾವು ಇರ್ತೇವೆ ಎಂದ್ರು ಶಿವರಾಜ್​ಕುಮಾರ್
ನಟ ಶಿವರಾಜ್​ ಕುಮಾರ್​
Follow us on

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಭಾರತ್​ ಬಂದ್​ ಮಾಡಲಾಗಿದೆ. ಹಾಗೇ ಹೋರಾಟದಲ್ಲಿ ತೊಡಗಿಕೊಂಡಿರುವ ರೈತರಿಗೆ ವಿವಿಧ ರಾಜಕೀಯ ಪಕ್ಷಗಳು, ಗಣ್ಯರು ಬೆಂಬಲ ಸೂಚಿಸಿದ್ದಾರೆ.

ಸ್ಯಾಂಡಲ್​ವುಡ್​ ನಟ ಶಿವರಾಜ್​ ಕುಮಾರ್ ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ರೈತ ದೇಶದ ಬೆನ್ನೆಲುಬು, ರೈತ ಇದ್ದರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜತೆ ಇರುತ್ತೇವೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

Published On - 3:20 pm, Tue, 8 December 20