ಮಂಡ್ಯದ ಡಾ.ವಿವೇಕ್ ಮೂರ್ತಿ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕ
ಕರ್ನಾಟಕದ ಡಾ. ವಿವೇಕ್ ಮೂರ್ತಿಗೆ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಹುದ್ದೆ ಲಭಿಸಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ವಾಷಿಂಗ್ಟನ್: ಕರ್ನಾಟಕದ ಡಾ. ವಿವೇಕ್ ಮೂರ್ತಿಗೆ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಹುದ್ದೆ ಲಭಿಸಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಬರಾಕ್ ಒಬಾಮ ಆಳ್ವಿಕೆಯಲ್ಲಿ ವಿವೇಕ್ ಮೂರ್ತಿ ಅಮೆರಿಕದ ಸರ್ಜನ್ ಜನರಲ್ ಆಗಿದ್ದರು. ಸದ್ಯ ಈಗ ಮತ್ತೊಮ್ಮೆ ಅದೇ ಪ್ರತಿಷ್ಠಿತ ಹುದ್ದೆಗೆ ನೇಮಕವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಂದಾಗ ವಿವೇಕ್ ಮೂರ್ತಿ ಸರ್ಜನ್ ಜನರಲ್ ಸ್ಥಾನ ತ್ಯಜಿಸಿದ್ದರು.
ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್ ಫೋರ್ಸ್ನಲ್ಲಿ ವಿವೇಕ್ ಮೂರ್ತಿ ಕೂಡ ಒಬ್ಬರಾಗಿದ್ದಾರೆ. ಹಾಗೂ ಕ್ಸೇವಿಯರ್ ಬೆಕೆರಾ ಅಮೆರಿಕದ ಹೆಲ್ತ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಾರೆ. ವಿವೇಕ್ ಮೂರ್ತಿ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಗ್ರಾಮದವರು.
ಅಮೆರಿಕದಲ್ಲೂ ಹುಟ್ಟೂರಿನ ಬೇರುಗಳು! ಹಿತ್ತಲಿನಲ್ಲಿ ಹಲಸಿನ ಜೊತೆ ಡಾ. ವಿವೇಕ್..
ಡಾ. ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ; US ಕೊವಿಡ್ ನಿಯಂತ್ರಣ ಕಾರ್ಯಪಡೆಗೆ ನಿಯೋಜನೆ!