ಸಂಜನಾಗೊಂದು ನ್ಯಾಯ, ರಾಗಿಣಿಗೊಂದು ನ್ಯಾಯವೇ? ರಾಗಿಣಿ ತಾಯಿ ಪ್ರಶ್ನೆ

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರೂ ರಾಗಿಣಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ರಾಗಿಣಿ ವಿಚಾರದಲ್ಲಿ ಕಾನೂನು ಕಟುವಾಗಿ ಹೋಯ್ತಾ ಎಂದು ಅವರು ವಿಷಾದಿಸಿದರು.

ಸಂಜನಾಗೊಂದು ನ್ಯಾಯ, ರಾಗಿಣಿಗೊಂದು ನ್ಯಾಯವೇ? ರಾಗಿಣಿ ತಾಯಿ ಪ್ರಶ್ನೆ
ರಾಗಿಣಿ ದ್ವಿವೇದಿ
Edited By:

Updated on: Dec 24, 2020 | 4:24 PM

ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆ ಮತ್ತು ಬೆನ್ನುನೋವು ಅನುಭವಿಸುತ್ತಿರುವ ನನ್ನ ಮಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ಬಳಿಕ ಆಕೆಯನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಗಿದೆ ನಟಿ ರಾಗಿಣಿ ದ್ವಿವೇದಿ ಅವರ ತಾಯಿ ‘ಟಿವಿ9’ಗೆ ತಿಳಿಸಿದ್ದಾರೆ.

ಡ್ರಗ್ಸ್​​ ಕಾಯ್ದೆಯಡಿ ಸಿಸಿಬಿ ಪೊಲೀಸರು ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದರು. ಈ ಪೈಕಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಂಜನಾ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಆದರೆ ರಾಗಿಣಿಗೆ ಜಾಮೀನು ಸಿಕ್ಕಿರಲಿಲ್ಲ.

ಆರೋಗ್ಯ ತಪಾಸಣೆಯ ನಂತರ ಮಗಳನ್ನು ಮತ್ತೆ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ. ಸಂಜನಾಗೆ ಹುಷಾರಿಲ್ಲ ಅಂದ್ರೆ ಬೇಲ್ ಸಿಗುತ್ತೆ, ಆದರೆ ರಾಗಿಣಿಗೆ ಹುಷಾರಿಲ್ಲ ಅಂದ್ರೆ ಕೇವಲ ತಪಾಸಣೆ ನಡೆಯುತ್ತೆ. ಇದೆಂಥ ನ್ಯಾಯ ಎಂದು ರಾಗಿಣಿಯ ತಾಯಿ ಪ್ರಶ್ನಿಸಿದರು.

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರೂ ರಾಗಿಣಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ರಾಗಿಣಿ ವಿಚಾರದಲ್ಲಿ ಕಾನೂನು ಕಟುವಾಗಿ ಹೋಯ್ತಾ ಎಂದು ಅವರು ವಿಷಾದಿಸಿದರು.

ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಆಸ್ಪತ್ರೆಗೆ ಶಿಫ್ಟ್.. ಏನಾಯ್ತು?