ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ಟಾಪ್​ಓವರ್ ನಂತರ ಸೇನೆಯ ಚಾಪರೊಂದರಲ್ಲಿ ಸೋಲಾಪುರಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

|

Updated on: Jan 19, 2024 | 11:20 AM

ಪ್ರಧಾನಿ ಮೋದಿ ಇಂದು ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, 2.45ಕ್ಕೆ ದೇವನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಿಲಿದ್ದಾರೆ. ಅದರ ಜೊತೆಗೆ ವಿಶ್ವದಲ್ಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದಾರೆ.

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರರು ಮಹಾರಾಷ್ಟ್ರದ ಸೋಲಾಪುರದಲ್ಲಿ (Solapur) ಆಯೋಜಿಸಲಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮುನ್ನ ಸ್ಟಾಪ್ ಓವರ್ ಗಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ (Kalaburagi airport) ಬಂದಿಳಿದರು. ಭಾರತೀಯ ವಾಯು ಸೇನೆಯ ವಿಮಾನದಲ್ಲಿ ಬೆಳಗ್ಗೆ 9.35 ಕ್ಕೆ ನಗರದಲ್ಲಿ ಲ್ಯಾಂಡ್ ಆದ ಪ್ರಧಾನಿ ಮೋದಿ ಕೂಡಲೇ ಅಂದರೆ 9.40ಕ್ಕೆ ಸೇನೆಯ ಹೆಲಿಕ್ಪಾಪ್ಟರ್ ವೊಂದರ ಮೂಲಕ ಸೋಲಾಪುರಗೆ ತೆರಳಿದರು. ಪ್ರಧಾನಿಯವರನ್ನು ಹೊತ್ತ ವಿಮಾನ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರ ಆಗಮನದ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆ ಪ್ರತಿಬಂಧಕಾಜ್ಞೆ ವಿಧಿಸಿದ್ದಾರೆ. ಸೋಲಾಪುರದಿಂದ ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ವಾಪಸ್ಸಾಗಲಿರುವ ಪ್ರಧಾನಿ ಮೋದಿ 1.05 ಕ್ಕೆ ವಾಯುಪಡೆಯ ಅದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ