AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಕಲ್ಲುದೊಡ್ಡಿ ಗ್ರಾಮದ ಮನೆಗಳ ಗೋಡೆಯಲ್ಲಿ ‘ಜೈ ಶ್ರೀರಾಮ್’ ಬರಹ, ಮುಸ್ಲಿಂ ಯುವಕರ ಸಾಥ್

ಗೋಡೆ ಬರಹ ಅಭಿಯಾನಕ್ಕೆ ಮುಸ್ಲಿಂ ಯುವಕರು‌ ಸಾಥ್ ನೀಡಿದ್ದಾರೆ. ಜತೆಗೆ, ಅವರ ಮನೆಗಳ ಗೋಡೆಗಳ ಮೇಲೆಯೂ ‘ಜೈ ಶ್ರೀರಾಮ್’ ಎಂಬ ಗೋಡೆ ಬರಹ ಬರೆಯಿಸಿಕೊಂಡಿದ್ದಾರೆ. ಶಾಂತಿನಗರ ಕಲ್ಲುದೊಡ್ಡಿಯ ಸುಮಾರು 3500 ಮನೆಗಳ ಗೋಡೆಗಳ ಮೇಲೆ ‘ಜೈ ಶ್ರೀರಾಮ್’ ಗೋಡೆ ಬರಹ ರಾರಾಜಿಸುತ್ತಿದೆ.

ಚಿಕ್ಕಮಗಳೂರು: ಕಲ್ಲುದೊಡ್ಡಿ ಗ್ರಾಮದ ಮನೆಗಳ ಗೋಡೆಯಲ್ಲಿ ‘ಜೈ ಶ್ರೀರಾಮ್’ ಬರಹ, ಮುಸ್ಲಿಂ ಯುವಕರ ಸಾಥ್
ಕಲ್ಲುದೊಡ್ಡಿ ಗ್ರಾಮದ ಮನೆಗಳ ಗೋಡೆಯಲ್ಲಿ ‘ಜೈ ಶ್ರೀರಾಮ್’ ಬರಹ, ಮುಸ್ಲಿಂ ಯುವಕರ ಸಾಥ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jan 19, 2024 | 11:10 AM

Share

ಚಿಕ್ಕಮಗಳೂರು, ಜನವರಿ 19: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagalur) ಸರ್ವಧರ್ಮೀಯರು ಭಾವೈಕ್ಯತೆ ಮೆರೆದಿದ್ದಾರೆ. ಎಲ್ಲ ಧರ್ಮದವರ ಮನೆ ಗೋಡೆಗಳ ಮೇಲೂ ‘ಜೈ ಶ್ರೀರಾಮ್’ (Jai Sri Ram) ಗೋಡೆ ಬರಹ ರಾರಾಜಿಸುತ್ತಿದೆ. ಚಿಕ್ಕಮಗಳೂರು ಹೊರವಲಯದ ಶಾಂತಿನಗರ ಕಲ್ಲುದೊಡ್ಡಿ ಗ್ರಾಮದಲ್ಲಿ ‘ಜೈ ಶ್ರೀ ರಾಮ್’ ಫಲಕ ಅಭಿಯಾನ ಆರಂಭಿಸಲಾಗಿದೆ.

ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮದವರ ಮನೆ ಗೋಡೆಗಳ ಮೇಲೆ ಬರಹ ಪ್ರಕಟಿಸಲಾಗಿದೆ. ಗೋಡೆ ಬರಹ ಅಭಿಯಾನಕ್ಕೆ ಮುಸ್ಲಿಂ ಯುವಕರು‌ ಸಾಥ್ ನೀಡಿದ್ದಾರೆ. ಜತೆಗೆ, ಅವರ ಮನೆಗಳ ಗೋಡೆಗಳ ಮೇಲೆಯೂ ‘ಜೈ ಶ್ರೀರಾಮ್’ ಎಂಬ ಗೋಡೆ ಬರಹ ಬರೆಯಿಸಿಕೊಂಡಿದ್ದಾರೆ.

ಕ್ರಿಶ್ಚಿಯನ್ ಸಮುದಾಯದವರು ಕೂಡ ಗೋಡೆ ಬರಹ ಅಭಿಯಾನಕ್ಕೆ ಬೆಂಬಲ ನೀಡಿ ತಾವೂ ಅದರಲ್ಲಿ ಭಾಗಿಯಾದರು. ಶಾಂತಿನಗರ ಕಲ್ಲುದೊಡ್ಡಿಯ ಸುಮಾರು 3500 ಮನೆಗಳ ಗೋಡೆಗಳ ಮೇಲೆ ‘ಜೈ ಶ್ರೀರಾಮ್’ ಗೋಡೆ ಬರಹ ರಾರಾಜಿಸುತ್ತಿದೆ.

ರಾಮ ಎಲ್ಲರಿಗೂ ಸೇರಿದವನು. ಹೀಗಾಗಿ ನಾವೂ ಅಭಿಯಾನದಲ್ಲಿ ಭಾಗಿಯಾಗಿದ್ದೇವೆ ಎಂದು ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯದವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಧರ್ಮವನ್ನು ಗೌರವಿಸುತ್ತೇವೆ, ಅನ್ಯ ಧರ್ಮವನ್ನು ಪ್ರೇಮಿಸುತ್ತೇವೆ ಎಂದು ಎಲ್ಲ ಸಮುದಾಯದವರು ಹೇಳಿದ್ದು, ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ವಿವೇಕಾನಂದ ಬಳಗ ಈ ನಾಮಫಲಕ ಅಭಿಯಾನವನ್ನು ಆಯೋಜನೆ ಮಾಡಿದೆ. ಪರಿಣಾಮವಾಗಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಸರ್ವಧರ್ಮೀಯರು ಒಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ: ರಾಮಲಲ್ಲಾ ಮೂರ್ತಿ ಮೈಸೂರಿನದ್ದು, ಆಹ್ವಾನ ಪತ್ರಿಕೆ ಮೇಲಿನ ಲೋಗೋ ಕಲಬುರಗಿಯದ್ದು!

ಈ ಮಧ್ಯೆ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರವಷ್ಟೇ ರಾಮ ಲಲ್ಲಾ ಮೂರ್ತಿಯನ್ನು ರಾಮ ಮಂದಿರದ ಗರ್ಭ ಗೃಹಕ್ಕೆ ತಂದಿರಿಸಲಾಗಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ