ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ: ರಾಮಲಲ್ಲಾ ಮೂರ್ತಿ ಮೈಸೂರಿನದ್ದು, ಆಹ್ವಾನ ಪತ್ರಿಕೆ ಮೇಲಿನ ಲೋಗೋ ಕಲಬುರಗಿಯದ್ದು!

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈಗಾಗಲೆ ರಾಮಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ರಾಮಲಲ್ಲಾನ ಮೂರ್ತಿಯನ್ನು ಮೈಸೂರಿನ ಅರುಣ ಯೋಗಿರಾಜ್​ ಅವರು ಕೆತ್ತಿದ್ದಾರೆ. ಇನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮೇಲಿನ ಲೋಗೋವನ್ನು ಕಲಬುರಗಿಯ ಕಲಾವಿದ ಡಿಸೈನ್​​ ಮಾಡಿದ್ದಾರೆ.

ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ: ರಾಮಲಲ್ಲಾ ಮೂರ್ತಿ ಮೈಸೂರಿನದ್ದು, ಆಹ್ವಾನ ಪತ್ರಿಕೆ ಮೇಲಿನ ಲೋಗೋ ಕಲಬುರಗಿಯದ್ದು!
ಆಹ್ವಾನ ಪತ್ರಿಕೆ ಮೇಲಿನ ಲೋಗೋ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on:Jan 19, 2024 | 9:24 AM

ಕಲಬುರಗಿ, ಜನವರಿ 19: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಈಗಾಗಲೆ ರಾಮಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜಗತ್ತೇ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ವೀಕ್ಷಿಸಲು ತುದಿಗಾಲಿನ ಮೇಲೆ ನಿಂತಿದೆ. ಇನ್ನು ಈ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಆಹ್ವಾನ ಪತ್ರಿಕೆ ಮೇಲಿರುವ ಶ್ರೀರಾಮನ ಲೋಗೋ ಕಲಬುರಗಿಯಲ್ಲಿ (Kalaburagi) ತಯಾರಾಗಿದೆ.

ಆಹ್ವಾನ ಪತ್ರಿಕೆಯ ಮೇಲೆ ಪ್ರಕಾಶಿಸುವ ಸೂರ್ಯನ ಮಧ್ಯೆ ಕಂಗೊಳಿಸುವ ಶ್ರೀರಾಮನ ಭಾವಚಿತ್ರವಿದೆ. ಕೆಳಭಾಗದಲ್ಲಿ ಕುಳಿತಿರುವ ಹನುಮಂತನ ಚಿತ್ರವಿದೆ. ಈ ರೀತಿಯಾದ ಲೋಗೋವನ್ನು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಅವರು ಡಿಸೈನ್​ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೋಗೋ ತಯಾರಿಸಲು ಕರೆ ಕೊಟ್ಟಿತ್ತು. ​ದೇಶದ ವಿವಿಧ ಕಲಾವಿದರು ಲೋಗೋ ತಾಯಾರಿಸಿ ಟ್ರಸ್ಟ್​​ಗೆ ಕಳುಹುಸಿದ್ದರು.

ಇದನ್ನೂ ಓದಿ: ಶ್ರೀರಾಮ ಮಂದಿರದ ಚಿತ್ರ ಬಿಡಿಸಿ ಗಮನ ಸೆಳೆದ ಪಿಎಸ್ಐ

ಇನ್ನು ಕಲಾವಿದ ರಮೇಶ್ ತಿಪ್ಪನೂರ್ ಅವರು ತಾವು ತಯಾರಿಸಿದ ಲೋಗೋವನ್ನು ವಿಹೆಚ್​ಪಿ ಮುಖಂಡ ಗೋಪಾಲ್ ಜಿ ಅವರ ಮೂಲಕ ಟ್ರಸ್ಟ್​​ಗೆ ಕಳುಹಿಸಿದ್ದಾರೆ. ಟ್ರಸ್ಟ್​​ ದೇಶದ ವಿವಿಧಡೆಯಿಂದ ಬಂದ ಲೋಗೋ ಪರಿಶೀಲಿಸಿ, ಕೊನೆಗೆ ಕಲಬುರಗಿಯಲ್ಲಿ ತಯಾರಾದ ಲೋಗೋವನ್ನು ಅಂತಿಮಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Fri, 19 January 24