AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮ ಮಂದಿರದಲ್ಲಿ ವಿವಿಧ ವಿನ್ಯಾಸ, ಕಲಾಕೃತಿಗಳ ಕೆತ್ತನೆ ಮಾಡಿದ ರಾಯಚೂರು ಯುವಕ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಐತಿಹಾಸಿಕ ಕ್ಷಣಗಳಿಗೆ ಇಡೀ ದೇಶವೇ ಕಾಯುತ್ತಿದೆ. ಐದು ದಶಕಗಳ ಹೋರಾಟದ ಫಲವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಸೇವೆ ಸಲ್ಲಿಸುವುದೇ ಒಂದು ಹೆಮ್ಮೆಯ ಸಂಗತಿ. ಈ ಸಾಲಿನಲ್ಲಿ ರಾಯಚೂರಿನ ಯುವಕ ವಿರೇಶ್ ಬಡಿಗೇರ್ ಸೇರುತ್ತಾರೆ. ಮಂದಿರದ ವಿವಿಧ ವಿನ್ಯಾಸ ಹಾಗೂ ಕಲಾಕೃತಿಗಳ ಕೆತ್ತನೆಗಳನ್ನು ಮಾಡಿದ್ದಾರೆ.

ಅಯೋಧ್ಯೆ ರಾಮ ಮಂದಿರದಲ್ಲಿ ವಿವಿಧ ವಿನ್ಯಾಸ, ಕಲಾಕೃತಿಗಳ ಕೆತ್ತನೆ ಮಾಡಿದ ರಾಯಚೂರು ಯುವಕ
ಅಯೋಧ್ಯೆ ರಾಮ ಮಂದಿರದಲ್ಲಿ ವಿವಿಧ ವಿನ್ಯಾಸ, ಕಲಾಕೃತಿಗಳ ಕೆತ್ತನೆ ಮಾಡಿದ ರಾಯಚೂರು ಯುವಕ ವೀರೇಶ್ ಬಡಿಗೇರ್
ಭೀಮೇಶ್​​ ಪೂಜಾರ್
| Updated By: Rakesh Nayak Manchi|

Updated on:Jan 19, 2024 | 8:50 AM

Share

ರಾಯಚೂರು, ಜ.19: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆಯ ಐತಿಹಾಸಿಕ ಕ್ಷಣಗಳಿಗೆ ಇಡೀ ದೇಶವೇ ಕಾಯುತ್ತಿದೆ. ಐದು ದಶಕಗಳ ಹೋರಾಟದ ಫಲವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಸೇವೆ ಸಲ್ಲಿಸುವುದೇ ಒಂದು ಹೆಮ್ಮೆಯ ಸಂಗತಿ. ಈ ಸಾಲಿನಲ್ಲಿ ರಾಯಚೂರಿನ (Raichur) ಯುವಕ ವಿರೇಶ್ ಬಡಿಗೇರ್ ಸೇರುತ್ತಾರೆ.

ಅಯೋಧ್ಯೆ ರಾಮ ಮಂದಿರದಲ್ಲಿ ಸೇವೆ ಸಲ್ಲಿಸಲು ಕರ್ನಾಟಕದಿಂದ ಒಟ್ಟು ಎಂಟು ಜನರ ತಂಡ ಹೋಗಿತ್ತು. ಇದರಲ್ಲಿ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ನಿವಾಸಿಯಾಗಿರುವ ವಿರೇಶ್ ಬಡಿಗೇರ್ ಒಬ್ಬರು. ಇವರು ಅಯೋಧ್ಯೆ ರಾಮ ಮಂದಿರದ ಗೋಪುರ, ಗರ್ಭಗುಡಿ ಮುಂಭಾಗದಲ್ಲಿ ಅಕ್ಟೋಬರ್ 20 ರಿಂದ ನವೆಂಬರ್ 25 ವರೆಗೆ ನವಿಲುಗಳು, ಗಣೇಶ ಹಾಗೂ ಕಂಬಗಳಲ್ಲಿ ಕುಸುರಿ ಕಾರ್ಯ ಮಾಡಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ

Raichur Sculptor in Ayodhya Ram Mandir

ವೀರೇಶ್ ಬಡಿಗೇರ್ ಕೆತ್ತನೆ ಮಾಡಿದ ವಿಗ್ರಹಗಳು

ಮಂದೀರದ ವಿವಿದೆಡೆ ತಾನು ಮಾಡಿರುವ ಕುಸುರಿ ಕಾರ್ಯದ ಬಗ್ಗೆ ಮಂದೀರದ ಸ್ಯಾಂಪಲ್ ಮೂಲಕ ವೀರೇಶ್ ಅವರು ಟಿವಿ9 ಕ್ಯಾಮೆರಾ ಎದುರು ವಿವರಿಸಿದ್ದಾರೆ. ರಾಮ ಮಂದೀರದಲ್ಲಿ ಕುಸುರಿ, ಶಿಲ್ಪ ಕಲೆ ಕಾರ್ಯ ಮಾಡಿದ್ದು ಅಳಿಲು ಸೇವೆ ಎಂದು ಹೇಳಿಕೊಂಡಿದ್ದಾರೆ. ಅಯೋಧ್ಯೆಗೆ ಕುಸುರಿ ಕೆಲಸಕ್ಕೆ ಆಫರ್ ಬಂದಾಗ ಒಂದು ವಾರ ಚಡಪಡಿಕೆ, ಭಯ ಉಂಟಾಗಿತ್ತು ಎಂದರು.

ಅಯೋಧ್ಯೆ ರಾಮ ಮಂದಿರದಲ್ಲಿ ವಿವಿಧ ವಿನ್ಯಾಸ, ಕಲಾಕೃತಿಗಳ ಕೆತ್ತನೆ ಮಾಡಿದ ರಾಯಚೂರು ಯುವಕ

ವೀರೇಶ್ ಬಡಿಗೇರ್ ಕೆತ್ತನೆ ಮಾಡುತ್ತಿರುವುದು

ಮಂದೀರ ತಲುಪಿದ ಬಳಿಕ ಮೂರು ದಿನ ಒಳಗೆ ಬಿಡದೆ ಸೆಕ್ಯೂರಿಟಿ ಚೆಕ್ ಮಾಡಿದ್ದರು. ನಂತರ ಐಡಿ ಕಾರ್ಡ್ ನೀಡಿದ ಬಳಿಕ ಶಿಲ್ಪ ಕಲೆ, ಕುಸುರಿ ಕಾರ್ಯ ಶುರು ಮಾಡಿದೆವು. ಉತ್ತರ ಕರ್ನಾಟಕ ಭಾಗದಲ್ಲಿ ಕೆತ್ತನೆಗೆ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಸ್ಯಾಂಪಲ್ ಕಲ್ಲಿನಲ್ಲಿ ಅಚ್ಚು ಕಟ್ಟಾದ ಕೆತ್ತನೆ ನೋಡಿ ಮಂದೀರದ ಕಂಬಗಳಲ್ಲಿನ ಎಲ್ಲಾ ವಿನ್ಯಾಸ, ಕುಸುರಿ ಕೆಲಸಗಳ ಮಾಡಲಾಗಿದೆ. ಶಿಲ್ಪ ಕಲಾ ವಿಭಾಗದಿಂದ ವಿರೇಶ್ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ರಾಮ ಮಂದಿರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:48 am, Fri, 19 January 24