ಹಾವೇರಿ: ವಯಸ್ಸು ಎಲ್ಲರಿಗೂ ಆದಂತೆ ಯಡಿಯೂರಪ್ಪರಿಗೂ ಆಗಿದೆ. ಯಾವುದೇ ಚರ್ಚೆ ಇಲ್ಲ. ಸಿಎಂ ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವ್ರೇ ನಮ್ಮ ಮುಖ್ಯಮಂತ್ರಿ ಎಂದು ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪಕ್ಷ ಮತ್ತು ಸರ್ಕಾರ ಒಟ್ಟಾಗಿ ನಡೆಯುತ್ತೆ. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳಾಗಿರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚರ್ಚೆಗಳು ಸ್ವಾಭಾವಿಕಕವಾಗಿ ಬಂದಿರಬಹುದು. ಆದರೆ ನಮ್ಮ ಪಕ್ಷದವರು ಪತ್ರ ಬರೆದಿರಲಿಕ್ಕಿಲ್ಲ. ಬೇರೆಯವ್ರು ಮಾಡಿರಬಹುದು. ಈ ಬಗ್ಗೆ ಚರ್ಚೆ ಆಗುತ್ತೆ. ನಾವೆಲ್ಲ ಅವರ ಜೊತೆಯಲ್ಲೇ ಹೆಜ್ಜೆ ಹಾಕ್ತೇವೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಮಾಡ್ತೇವೆ ಎಂದ ಸಚಿವರು ಹೇಳಿದರು.
ಅಮೆರಿಕ ಅಧ್ಯಕ್ಷ ಭಾರತಕ್ಕೆ ಬಂದಿದ್ದು ದೇಶದ ಗೌರವ ಹೆಚ್ಚಿಸಿದೆ:
ಅಮೆರಿಕ ಅಧ್ಯಕ್ಷರ ಪ್ರವಾಸದ ಖರ್ಚಿನ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ವಿಚಾರಕ್ಕೆ ಸಂಬಂಧಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಕೇಟು ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಭಾರತಕ್ಕೆ ಬಂದಿದ್ದು ಪ್ರಧಾನಿ ಅವರ ಜೊತೆ ಮಾತನಾಡಿದ್ದು ದೇಶದ ಗೌರವ ಹೆಚ್ಚಿಸಿದೆ.
ಕುಮಾರಸ್ವಾಮಿ ಇದ್ದಾಗ ಯಾರಾದರೂ ಬಂದರೆ ಖರ್ಚು ಮಾಡ್ತಿರಲಿಲ್ವಾ.? ವಿರೋಧ ಪಕ್ಷದಲ್ಲಿದ್ದಾರೆ ಅದಕ್ಕೆ ವಿರೋಧ ಮಾಡಬೇಕೆಂದು ಮಾಡಿದ್ದಾರಷ್ಟೆ ಎಂದು ಉತ್ತರಿಸಿದ್ದಾರೆ.
Published On - 11:56 am, Wed, 26 February 20