AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ. ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ. ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ […]

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 26, 2020 | 1:21 PM

Share

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ.

ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ.

ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆಗಳನ್ನ ನಿರ್ಮಿಸಲಾಯ್ತು. ಆದ್ರೆ, ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡ್ತಿದ್ದಾರೆ. ಇದ್ರಿಂದ, ಬಡಾವಣೆಯ ಯುವಕರಿಗೆ ಕನ್ಯೆಯರನ್ನು ಕೊಡ್ತಿಲ್ವಂತೆ.

ಅಂದಹಾಗೇ, ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಈ ಬಡಾವಣೆ ಇದೆ. ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಸರಿಯಾದ ಸೌಲಭ್ಯಗಳಿಲ್ಲ. ರೇಷ್ಮೆ ನೂಲು ತೆಗೆಯೋ ಕಾರ್ಖಾನೆಗಳು ಇರೋದರಿಂದ ಗಬ್ಬು ವಾಸನೆಯಲ್ಲಿ ಜನ ಬಾಳುವಂತಾಗಿದೆ. ಸಂಬಂಧಿಕರು ಕೂಡ ಏರಿಯಾಗೆ ಬರಲು ಹಿಂದೇಟು ಹಾಕ್ತಾರಂತೆ. ಒಟ್ನಲ್ಲಿ, ಸೂರಿಗಾಗಿ ಸೊರಗಿದ್ದ ಬಡವರಿಗೆ ನೆಲೆಯೇನೋ ಸಿಕ್ಕಿದೆ. ಆದ್ರೆ, ಸೌಕರ್ಯಗಳಿಲ್ಲದೆ ಆ ನೆಲೆಯೇ ಜನರಿಗೆ ನರಕದಂತೆ ಭಾಸವಾಗ್ತಿದೆ.

Published On - 12:37 pm, Wed, 26 February 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್