ಇದು ಸರ್ಕಾರದ ಗಮನಕ್ಕೆ: ಯಾದಗಿರಿಯ ಎಲ್ಲಾ ಖಾಸಗಿ ಶಾಲೆಗಳು ಏಕ್ದಂ ಬಂದ್

|

Updated on: Dec 10, 2019 | 1:17 PM

ಯಾದಗಿರಿ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿದೆ. ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಸಂಘದಿಂದ ಆಗ್ರಹಪೂರ್ವಕ ಪ್ರತಿಭಟನೆ ನಡೆದಿದೆ. ಯಾದಗಿರಿ ಚಲೋ- ಏನಿವು ಬೇಡಿಕೆಗಳು..  ಸರ್ಕಾರದ ನಡೆ ವಿರುದ್ಧ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ಯಾದಗಿರಿ ಚಲೋ ಹಮ್ಮಿಕೊಳ್ಳಲಾಗಿದೆ. ಬೇಡಿಕೆಗಳು ಹೀಗಿವೆ.. 1.ಆರ್.ಟಿ.ಇ ಯನ್ನು ಖಾಸಗಿ ಶಾಲೆಗಳಿಗೆ ಮೊದಲಿನಂತೆ ಮರು ಚಾಲನೆ ನೀಡಬೇಕು 2. ಖಾಸಗಿ ಶಾಲೆಗಳ ನವೀಕರಣ ಪದ್ಧತಿಯನ್ನು […]

ಇದು ಸರ್ಕಾರದ ಗಮನಕ್ಕೆ: ಯಾದಗಿರಿಯ ಎಲ್ಲಾ ಖಾಸಗಿ ಶಾಲೆಗಳು ಏಕ್ದಂ ಬಂದ್
Follow us on

ಯಾದಗಿರಿ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿದೆ. ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಸಂಘದಿಂದ ಆಗ್ರಹಪೂರ್ವಕ ಪ್ರತಿಭಟನೆ ನಡೆದಿದೆ.

ಯಾದಗಿರಿ ಚಲೋ- ಏನಿವು ಬೇಡಿಕೆಗಳು..
 ಸರ್ಕಾರದ ನಡೆ ವಿರುದ್ಧ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ಯಾದಗಿರಿ ಚಲೋ ಹಮ್ಮಿಕೊಳ್ಳಲಾಗಿದೆ. ಬೇಡಿಕೆಗಳು ಹೀಗಿವೆ..
1.ಆರ್.ಟಿ.ಇ ಯನ್ನು ಖಾಸಗಿ ಶಾಲೆಗಳಿಗೆ ಮೊದಲಿನಂತೆ ಮರು ಚಾಲನೆ ನೀಡಬೇಕು
2. ಖಾಸಗಿ ಶಾಲೆಗಳ ನವೀಕರಣ ಪದ್ಧತಿಯನ್ನು ರದ್ದು ಪಡಿಸಬೇಕು..
3. 371 ಜೆ ಅಡಿ ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳಿಗೆ ಕೆಕೆಆರ್ ಡಿಬಿಯಿಂದ ಅನುದಾನವನ್ನು ನೀಡಬೇಕು ಹಾಗೂ ಖಾಸಗಿ ಶಾಲೆಗಳಿಗೆ ಕನಿಷ್ಟ ವೇತನ ಕೊಡಬೇಕು.
4. 7ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಬೇಕು.. ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಮುಂದಿಡಲಾಗಿದೆ.